ದಾಸ ಶ್ರೇಷ್ಠ ಶ್ರೀಕನಕದಾಸರ ಜಯಂತಿ ಆಚರಣೆ

ಹೊಸಪೇಟೆ :

      ತಾಲೂಕು ಕುರುಬ ಸಮಾಜದಿಂದ ದಾಸಶ್ರೇಷ್ಠ ಶ್ರೀಕನಕದಾಸರ 531ನೇ ಜಯಂತಿ ನಿಮಿತ್ತ ನಗರದ ಕನಕದಾಸ ವೃತ್ತದಲ್ಲಿನ ಶ್ರೀಕನಕದಾಸರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು.

      ಶಾಸಕ ಆನಂದ್ ಸಿಂಗ್ ಮಾತನಾಡಿ, ದಾಸರಲ್ಲಿಯೇ ಶ್ರೇಷ್ಠವಾದವರು ಶ್ರೀಕನಕದಾಸರು. ಅವರ ಪದ್ಯ, ಕೀರ್ತನೆಗಳು ಪ್ರಸ್ತುತ ಜೀವನಕ್ಕೂ ಅನ್ವಯವಾಗಿದೆ. ಅವರ ಆದರ್ಶ ತತ್ವ ಗುಣಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

       ತಾಲೂಕು ಕುರುಬ ಸಂಘದ ಅಧ್ಯಕ್ಷ ಜಿ. ಭರಮನಗೌಡ ಮಾತನಾಡಿ, ಕನಕದಾಸರು ಕೇವಲ ಒಂದು ಜಾತಿಗೆ ಸೀಮಿತರಾದವರಲ್ಲ. ಅವರು ಇಡಿ ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ. ವರ್ಣ, ಜಾತಿ ಪದ್ಧತಿ ವಿರುದ್ಧ ಆಗಿನ ಕಾಲದಲ್ಲಿ ತಮ್ಮ ಕೀರ್ತನೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಿದರು. 

       ಹುಡಾ ಮಾಜಿ ಅಧ್ಯಕ್ಷರಾದ ಆರ್. ಕೊಟ್ರೇಶ್, ಎಲ್. ಸಿದ್ಧನಗೌಡ, ಅಯ್ಯಾಳಿ ತಿಮ್ಮಪ್ಪ, ಮುಖಂಡರಾದ ಕೆ.ಎಂ. ಹಾಲಪ್ಪ, ಡಿ. ಚಂದ್ರಶೇಖರ್, ಡಿ. ಚೆನ್ನಪ್ಪ, ನಗರಸಭೆ ಸದಸ್ಯರಾದ ರಾಮಚಂದ್ರಗೌಡ, ಚಿದಾನಂದ, ಕೆ. ರವಿಕುಮಾರ್, ಎಚ್. ಮಹೇಶ್, ಧರ್ಮೇಂದ್ರ ಸಿಂಗ್, ಸಂದೀಪ್ ಸಿಂಗ್, ಎಲ್.ಎಸ್. ಆನಂದ, ಯರ್ರಿಸ್ವಾಮಿ, ದಲ್ಲಾಲಿ ಕುಬೇರ, ಪ್ರಕಾಶ್ ಕಾಕುಬಾಳು, ಬಂದಿ ಭರಮಪ್ಪ, ಗೌರಿ ಶಂಕರ್ ಬಣಕಾರ್, ದೇವರಮನೆ ರವಿಶಂಕರ್, ಗಂಟಿ ಸೋಮಶೇಖರ್, ಮೃತ್ಯುಂಜಯ, ಚಂದ್ರಕಾಂತ್, ಬಿಸಾಟಿ ಸತ್ಯನಾರಾಯಣ ಸೇರಿದಂತೆ ಸಮಾಜದ ಮುಖಂಡರು ಇದ್ದರು.

        ಪಿಕೆ ಹಳ್ಳಿ ವರದಿ: ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ಶ್ರೀಕನಕದಾಸರ 531ನೇ ಜಯಂತಿ ಆಚರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಚಂದ್ರಶೇಖರ್, ಮುಖಂಡರಾದ ಕೆ.ತಿಪ್ಪೇಸ್ವಾಮಿ, ಅಯ್ಯಪ್ಪ, ಮಲ್ಲೇಶ್, ತಿಪ್ಪೇಶ್, ಹನುಮಂತ, ಎನ್. ತಿಪ್ಪೇಸ್ವಾಮಿ, ಬಿ. ರಾಮು, ಪಂಪಾಪತಿ, ಶಶಿಧರ್, ಜಂಬಯ್ಯ, ಮುರಾರಿ, ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
ತಾಲೂಕಿನ ಕಾಕುಬಾಳು, ಮಲಪನಗುಡಿ, ಹೊಸಮಲಪನಗುಡಿ, ಬೈಲುವದ್ದಿಗೇರಿ ಸೇರಿದಂತೆ ಮುಂತಾದ ಕಡೆಗಳಲ್ಲಿ ಕನಕದಾಸರ ಜಯಂತಿ ಆಚರಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap