ಹಾವೇರಿ :
ನಗರದ ಮೈಲಾರ ಮಹದೇವಪ್ಪ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಭಯೋತ್ಪಾದನಾ ವಿರೋಧಿ ಧರಣಿ ಸತ್ಯಾಗ್ರಹ ಮತ್ತು ಹುತಾತ್ಮ ಯೋಧರಿಗೆ ಮೌನಾಚರಿಸಿ ಶ್ರದ್ದಾಂಜಲಿ ಸಭೆ ಜರುಗಿತು. ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಲಿ ಶಾಸಕರಾದ ಸಿ.ಎಂ. ಉದಾಸಿ ಮಾತನಾಡಿ ಕಾಶ್ಮಿರದ ಪುಲ್ವಾಮದಲ್ಲಿ ನಡೆದ ಘಟನೆ ಅತ್ಯಂತ ಖಂಡನೀಯ ಪಾಕಿಸ್ತಾನ ಉಗ್ರರನ್ನು ಬೆಳಿಸುವ ತಾಣವಾಗಿದೆ. ಇಂದು ಕೆಲವು ಸಮುದಾಯದ ಸಂಸ್ಕøತಿ ಎತ್ತಸಾಗುತ್ತಿದೆ ಎಂಬುವುದು ಚಿಂತಿಸಬೇಕಾದ ಸಂಗತಿ ಕೆಲವು ಮತಾಂದ ಯುವಕರಿಂದ ಇಡಿ ಮುಸ್ಲಿಂ ಸಮುದಾಯ ತೆಲೆತಗ್ಗಿಸುವಂತಾಗಭಾರದು. ಅಂತಹ ಸಮಾಜ ವಿರೋಧಿಗಳಿಗೆ ಆ ಸಮುದಾಯವೇ ಉತ್ತಮ ಸಂಸ್ಕಾರ ಕಲಿಸಬೇಕು ಎಂದರು.
ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿಯವರು ಮಾತನಾಡಿ ಇಂದು ಸೈನಿಕರ ಹತ್ಯ ವಿಚಾರ ಅತ್ಯಂತ ದುಃಖದ ವಿಷಯ ಇಂದು ಪಾಕಿಸ್ತಾನದ ಪಾಪಿಗಳು ತಮ್ಮ ನರಿ ಬುದ್ದಿ ತೋರಿಸುವ ಮೂಲಕ ತಾವು ಹಿಂಸಯಲ್ಲಿಯೇ ನಂಬಿಕೆಯಿಟ್ಟವರು ಎಂಬುವದನ್ನು ತೋರಿಸಿದೆ.ಈ ದಾಳಿಗೆ ಪ್ರತ್ತಿತ್ತರವನ್ನು ಭಾರತ ನೀಡುತ್ತದೆ ಎಂದರು.
ಮಾಜಿ ಶಾಸಕರಾದ ಯು.ಬಿ. ಬಣಕಾರ ಮಾತನಾಡಿ ಭಾರತೀಯ ಸೈನ್ಯದ ಮೇಲೆ ದಾಳಿಮಾಡಿರುವ ಉಗ್ರರು ತಮ್ಮ ವಿಕೃತಿಯನ್ನು ಮೆರೆದ್ದಿದ್ದಾರೆ. ಉಗ್ರಗಾಮಿಗಳನ್ನು ಪಾಕಿಸ್ತಾನ ಪೋಷಣೆ ಮಾಡುತ್ತಿದೆ.ನಾವು ಪಾಕಿಸ್ತಾನದ ಈ ಕೃತ್ಯಕ್ಕೆ ಪ್ರತಿಕಾರ ತಿರಿಸಿಕೊಳ್ಳುತ್ತೇವೆ ಎಂದು.
ಜಿಲ್ಲಾಧ್ಯಕ್ಷರಾದ ಶಿವರಾಜ ಸಜ್ಜನರ ಮಾತನಾಡಿ ನಮ್ಮ ಸೈನಿಕರ ಹತ್ಯೆಯ ವಿಷಯದಲ್ಲಿ ನಮ್ಮ ಪ್ರಧಾನಿಗಳು ರಾಜೀಸ್ವಭಾವದವರಲ್ಲ.ನಾವು ರಾಷ್ಟ್ರೀಯತೆಯ ವಿಚಾರದಲ್ಲಿ ಎಂದಿಗೂ ರಾಜೀ ಮಾಡಿಕೊಡುವುದಿಲ್ಲ. ನಮ್ಮ ಸೈನೀಕರ ಹತ್ಯಗೆ ಇಂದು ದೇಶ ಸಿಡಿದ್ದೇದ್ದಿದೆ, ಪಾಕಿಸ್ತಾನ ತಪ್ಪನ್ನು ಒಪ್ಪಿಕೊಂಡು ವಿಶ್ವವೇದಿಕೆಯ ಮೇಲೆ ಶರಣಾಗಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನಕಾರ್ಯರ್ಶಿಗಳಾದ ಶಿವಾನಂದ ಮ್ಯಾಗೇರಿ, ಸಂತೋಷ ಪಾಟೀಲ, ರವಿ ಮಿಣಸಿನಕಾಯಿ, ಸಂತೋಷ ಆಲದಕಟ್ಟಿ, ಪ್ರಭು ಹಿಟ್ನಳ್ಳಿ, ನಂಜುಂಡೇಶ ಕಳ್ಳೇರ, ರಮೇಶ ಪಾಲನಕರ, ಮುರುಗೆಪ್ಪ ಶೆಟ್ಟರ, ನಿಂಗಪ್ಪ ಗೊಬ್ಬೆರ, ಎಸ್.ಆರ್. ಅಂಗಡಿ, ಶಿವಾನಂದ ನಾಗಮ್ಮನವರ, ಹನುಮಂತಪ್ಪ ಗಾಜಿಗೌಡ್ರ ಪಕ್ಷದ ಮುಖಂಡರು, ಕಾರ್ಯಕರ್ತರು ಭಾಗಹಿಸಿದ್ದರು.