ಬೋವಿ ಸಮಾಜಕ್ಕೆ ತಪ್ಪಿದ ಟಿಕೆಟ್ : ಸ್ವಾಮೀಜಿ ನೇತೃತ್ವದಲ್ಲಿ ಬಿಜೆಪಿ ವಿರುದ್ದ ಪ್ರತಿಭಟನೆ

ಚಿತ್ರದುರ್ಗ

       ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಭೋವಿ ಸಮಾಜಕ್ಕೆ ಬಿಜೆಪಿ ಟಿಕೇಟ್ ನೀಡದ ಹಿನ್ನೆಲೆಯಲ್ಲಿ ಶನಿವಾರದಂದು ಶ್ರೀಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಬಿಜೆಪಿ ವಿರುದ್ದ ಬೃಹತ್ ಪ್ರತಿಭಟನೆ ನಡೆಯಿತು.

       ಚಿತ್ರದುರ್ಗ ಹಾಗೂ ಕೋಲಾರ ಜಿಲ್ಲೆಯಲ್ಲಿ ಬಿಜೆಪಿ ಭೋವಿ ಸಮಾಜದ ವ್ಯಕ್ತಿಗಳಿಗೆ ಟಿಕೇಟ್ ನೀಡಬೆಕೆಂದು ಮನವಿ ಮಾಡಿತ್ತು. ಇದಕ್ಕೆ ರಾಜ್ಯಧ್ಯಕ್ಷ ಬಿ.ಎಸ್.ಮ ಯಡಿಯೂರಪ್ಪ ಕೂಡ ಸಮ್ಮತಿ ನೀಡಿದ್ದರು. ಆದರೆ ಕೊನೆ ಕ್ಷಣದಲ್ಲಿ ಚಿತ್ರದುರ್ಗದಲ್ಲಿ ಭೋವಿ ಸಮಾಜಕ್ಕೆ ಟಿಕೇಟ್ ನೀಡದೆ ನಾರಾಯಣ ಸ್ವಾಮಿಗೆ ಟಿಕೇಟ್ ನೀಡಿದ್ದರಿಂದ ಆಕ್ರೋಶಗೊಂಡ ಸ್ವಾಮೀಜಿ ಹಾಗೂ ಸಮಾಜದ ಭಾಂದವರು ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಸೋಲಿಸಲು ಇಂದು ಪ್ರತಿಭಟನೆ ನಡೆಸಿ ತಮ್ಮ ಶಕ್ತಿ ಪ್ರದರ್ಶನ ತೋರಿದರು.

      ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಚಿತ್ರದುರ್ಗದಲ್ಲಿ ಬಿಜೆಪಿಗೆ ಬೋವಿ ಸಮಾಜ ಜೊತೆಗಿದ್ದು ಶಕ್ತಿಯನ್ನು ನೀಡಿದೆ ಎಂದು ಸಮಿಕ್ಷೆ ಹೆಳುತ್ತಿದೆ.ಅದರೆ ಇಂದು ಬಿಜೆಪಿ ನಮ್ಮಸಮಾಜಕ್ಕೆ ಘೋರ ಅನ್ಯಾಯ ಮಾಡಿದೆ.ರಾಜ್ಯಾಧ್ಯಕ್ಷರು ಬೋವಿ ಸಮಾಜಕ್ಕೆ ಅವಕಾಶ ಮಾಡಿಕೊಡುವುದಾಗಿ ಹೇಳಿ ಇದಿಗ ಅನ್ಯಾಯ ಮಾಡಿದ್ದಾರೆ. ಆದ್ದರಿಂದ ತಕ್ಷಣವೇ ಅಭ್ಯರ್ಥಯನ್ನು ಬದಲಾವಣೆ ಮಾಡಬೇಕು. ಇದರಿಂದ ಮಧ್ಯ ಕರ್ನಾಟಕದಲ್ಲಿ ಹೆಚ್ಚು ಸ್ಥಾನಗಳನ್ನು ಬಹುಮತಗಳಿಂದ ಗೆಲ್ಲಲು ಅವಕಾಶವಿದೆ ಎಂದರು.

      ಚಿತ್ರದುರ್ಗದಲ್ಲಿ ರಾಜಕೀಯ ಶಕ್ತಿ ಬೋವಿ ಸಮಾಜ. ಆದರೂ ಪ್ರಗತಿಯನ್ನು ಕಾಣಿಲುತ್ತಿಲ್ಲ. 101 ಜಾತಿಗಳಲ್ಲಿ ಭೋವಿ ಸಮಾಜ ಬಹುದೊಡ್ಡ ಸಮಯಧಾಯವಾಗಿದೆ. ಭೋವಿ, ಲಂಬಾಣಿ ಸೇರಿದಂತೆ ಎಲ್ಲಾ ಸಮಾಜಕ್ಕೂ ಅವಕಾಶ ಮಾಡಿಕೊಡುವಂತೆ ಕೇಳಿದ್ದೆವು ಎಂದ ಅವರು ಆದರೂ ನೀಡಿಲ್ಲಇದರಿಂದ ನಾವು ಬಿಜೆಪಿ ವಿರುದ್ದ ಮತ ಚಲಾವಣೆ ಮಾಡುತ್ತೆವೆ ಎಂದ ಅವರು ಈಗಾಗಲೇ ಹೊಳಲ್ಕೆರೆ ಶಾಸಕ ಚಂದ್ರಪ್ಪ, ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ರಾಜೀನಾಮೆ ನೀಡಲು ಸಿದ್ದರಿದ್ದೇವೆ ಎಂದು ಹೇಳುತ್ತಿದ್ದು, ಶಾಸಕರು ಮಾತಿಗೆ ಇಲ್ಲಿ ಬೆಲೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link