ನಿವೇಶನ ಹಂಚಿಕೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ

ಚಿತ್ರದುರ್ಗ

         ನಿವೇಶನ ರಹಿತರನ್ನು ಗುರುತಿಸಿ ನಿವೇಶನಗಳನ್ನು ಹಂಚುವಂತೆ ಒತ್ತಾಯಿಸಿ ತಾಲ್ಲೂಕಿನ ಪಿಳ್ಳೆಕೆರನಹಳ್ಳಿ ಗ್ರಾಮಸ್ಥರು ಜಿಲ್ಲಾಧಿಕಾರಿ ಕಚೇರಿ ವೃತ್ತದಲ್ಲಿ ಬುಧವಾರ ಒಂದು ದಿನದ ಧರಣಿ ನಡೆಸಿದರು.

           ಚಿತ್ರದುರ್ಗ ತಾಲ್ಲೂಕಿನ ಮೇದೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಳ್ಳೆಕೆರನಹಳ್ಳಿ ನಗರದಿಂದ ಒಂದು ಕಿ.ಮೀ. ದೂರದಲ್ಲಿದ್ದು, ಗ್ರಾಮದ ಮಧ್ಯದಲ್ಲಿ ರಾ.ಹೆ.13 ಹಾದು ಹೋಗಿದ್ದು, ಇಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗದವರು ಹೆಚ್ಚಾಗಿ ವಾಸ ಮಾಡುತ್ತಿದ್ದಾರೆ. ಇವರಲ್ಲಿ ಶೇ,. 75 ರಷ್ಟು ಜನರಿಗೆ ಜಮೀನಾಗಲೀ, ದುಡಿಮೆಯ ಮಾರ್ಗ ಇಲ್ಲ, ಇಲ್ಲಿನ ಜನತೆ ಸ್ವಾತಂತ್ರ ಬಂದಾಗಿನಿಂದಲೂ ನೀವೇಶನವನ್ನು ನೀಡಲ್ಲ, ದಿನದಿಂದ ದಿನಕ್ಕೆ ಗ್ರಾಮದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು ಕುಟುಂಬಗಳು ಸಹಾ ಬೆಳೆಯುತ್ತಿದೆ ಆದರೆ ಇರಲು ವಾಸದ ಮನೆ ಇಲ್ಲ ಎಂದು ದೂರಿದ್ದಾರೆ.

           ಈ ಹಿಂದೆ ಹಲವಾರು ಬಾರಿ ನಿವೇಶನಕ್ಕಾಗಿ ಪ್ರತಿಭಟನೆ ನಡೆಸಿದ್ದರೂ ಸರ್ಕಾರ ಸ್ಪಂದಿಸಿಲ್ಲ, ಸರ್ಕಾರದ್ದಾಗಲೀ ಖಾಸಗಿಯಾಗಿ ಆಗಲಿ ಅಥವಾ ಗೋಮಾಳದ್ದಲಾಗಲೀ ನಮಗೆ ನೀವೇಶನವನ್ನು ನೀಡಬೇಕು, ಇಂದು ಸಾಂಕೇತಿಕವಾಗಿ ಧರಣಿಯನ್ನು ನಡೆಸಿದ್ದು 15 ದಿನದೊಳಗಾಗಿ ಸರ್ಕಾರ ನಿವೇಶನ ನೀಡುವ ಬಗ್ಗೆ ಮಾಹಿತಿಯನ್ನು ನೀಡದಿದ್ದರೆ ಅನಿಧಿಷ್ಟ ಧರಣಿಯನ್ನು ನಡೆಸಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

          ಇಂದಿನ ಧರಣಿಯಲ್ಲಿ ಗ್ರಾಮಸ್ಥರಾದ ಕುಮಾರ್, ಮಂಜುನಾಥ್, ಬಸವರಾಜು, ಸಿದ್ದಪ್ಪ, ಪ್ರಕಾಶ್, ದಿವಾಕರ ಭಾಗ್ಯಮ್ಮ, ಕಮಲಮ್ಮ, ಲಕ್ಷ್ಮೀದೇವಿ ಸೇರಿದಂತೆ ಇತರರು ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap