ಗಮನ ಸೆಳೆದ ಸದ್ಭಾವನಾ ಶಾಂತಿಯಾತ್ರೆ

ದಾವಣಗೆರೆ:

     ಮಹಾಶಿವರಾತ್ರಿ ಪ್ರಯುಕ್ತ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ನಗರದಲ್ಲಿ ಸೋಮವಾರ ನಡೆದ 12 ಜ್ಯೋತಿರ್ಲಿಂಗಗಳ ಸದ್ಭಾವನಾ ಶಾಂತಿಯಾತ್ರೆಯು ನೋಡುಗರ ಗಮನ ಸೆಳೆಯಿತು.

       ನಗರದ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಿಂದ ಆರಂಭಗೊಂಡ ಶಾಂತಿಯಾತ್ರೆಯ, ನಗರದ ಪ್ರಮುಖ ಬೀದಿಗಳ ಮುಖಾಂತರ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್‍ನಲ್ಲಿರುವ ಶಿವಧ್ಯಾನ ಮಂದಿರವನ್ನು ತಲುಪಿ ಮುಕ್ತಾಯವಾಯಿತು.

       ಸದ್ಭಾವನಾ ಶಾಂತಿಯಾತ್ರೆಯಲ್ಲಿ ಆಕರ್ಷಣೀಯವಾಗಿ ಏಕದೇವೋಪಾಸನೆಯಿಂದ ರಾಷ್ಟ್ರೀಯ ಭಾವೈಕ್ಯತೆ ಸಾರುವ ಸ್ತಬ್ಧ ಚಿತ್ರಗಳು ವಿಶೇಷ ಗಮನ ಸೆಳೆದವು. ಶಿವಧ್ಯಾನ ಮಂದಿರದಲ್ಲಿ 12 ಜ್ಯೋತಿರ್ಲಿಂಗಗಳ ಪ್ರತಿರೂಪಗಳನ್ನು ಸಾರ್ವಜನಿಕ ದರ್ಶನಕ್ಕಿಡಲಾಗಿದೆ.
ಸದ್ಭಾವನಾ ಶಾಂತಿಯಾತ್ರೆಯ ನೇತೃತ್ವವನ್ನು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮತ್ತಿತರರು ವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link