ಯುವ ರೆಡ್ ಕ್ರಾಸ್, ಮತ್ತು ಭಾರತ್ ಸ್ಕೌಟ್ಸ ಮತ್ತು ಗೈಡ್ಸ ಚಟುವಟಿಕೆಗಳ ಸಮಾರೋಪ ಸಮಾರಂಭ

ಚಿಕ್ಕನಾಯಕನಹಳ್ಳಿ

        ಕಲೆ ಎಂಬುದು ಗುಡಿಸಲಿನಲ್ಲಿ ಹುಟ್ಟಿ ಅರಮನೆಯಲ್ಲಿ ಅರಳುತ್ತದೆ ಎಂಬುದನ್ನು ಕೇಳಿದ್ದೆ ಆದರೆ ಅದೇ ನನ್ನ ಜೀವನವಾಗುತ್ತಿದೆ ಎಂದು ಗೊತ್ತಿರಲಿಲ್ಲ ಎಂದು ಅಂತರರಾಷ್ಟ್ರೀಯ ಜಾನಪದ ಕಲಾವಿದ ಅಮ್ಮರಾಮಚಂದ್ರ ತಿಳಿಸಿದರು.ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2018-19ನೇ ಸಾಲಿನ ಕ್ರೀಡಾ, ಸಾಂಸ್ಕತಿಕ, ರಾಷ್ಟ್ರೀಯ ಸೇವಾ ಯೋಜನೆ, ಯುವ ರೆಡ್ ಕ್ರಾಸ್, ಮತ್ತು ಭಾರತ್ ಸ್ಕೌಟ್ಸ ಮತ್ತು ಗೈಡ್ಸ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ಓದಿರುವುದು ಅಲ್ಪ ವಿದ್ಯಾಭ್ಯಾಸ, ಆದರೆ ನನ್ನ ಕಲೆಗೆ ಸಾಕಷ್ಟು ಬಹುಮಾನ ಹಾಗೂ ಪದಕಗಳು ಹುಡುಕಿಕೊಂಡು ಬಂದಿವೆ, ಪ್ರತಿಯೂಬ್ದ ವಿದ್ಯಾರ್ಥಿಗಳಿಗೂ ಒಂದೂಂದು ಕಲೆ ಇದ್ದೆ ಇರುತ್ತದೆ ಆದರೆ ಅದನ್ನು ಉಪಯೋಗಿಸಿಕೊಂಡರೆ ಮಾತ್ರ ಎತ್ತರಕ್ಕೆ ಬೆಳೆಯಬಹುದು, ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗ ಎಲ್ಲಾ ಕಲೆಗಳಲ್ಲಿ ಭಾಗವಹಿಸಿದಾಗ ಮಾತ್ರ ಮುಂದೆ ಬರಲು ಸಾಧ್ಯ ಎಂದರು.

       ಸಾಹಿತಿ ಎಂ.ವಿ.ನಾಗರಾಜ್‍ರಾವ್‍ಸ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಸಾಕಷ್ಟು ವಿಚಾರಗಳು ತಿಳಿದಿರುತ್ತದೆ, ಅಂತಯೇ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಸಾಕಷ್ಟು ಬಹುಮಾನ ಪಡೆದಿದ್ದಾರೆ, ಬಹುಮಾನ ಪಡೆದವರು ಬೀಗದೆ, ಸೋತವರು ಕುಗ್ಗದೆ ಮುನ್ನೆಡೆದರೆ ಮಾತ್ರ ಜೀವನದಲ್ಲಿ ಯಶಸ್ಸುಗಳಿಸಲು ಸಾಧ್ಯ ಎಂದರು.

       ಈ ಸಂದರ್ಭದಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಕಾಲೇಜಿನ 9 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದು ಅವರನ್ನು ಕಾಲೇಜಿನ ವತಿಯಿಂದ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಸಿ.ಜಿ.ಶಿವಕುಮಾರ್, ಪ್ರಾಧ್ಯಾಪಕರಾದ ಶಿವರಾಮಯ್ಯ, ಡಾ. ಶ್ರೀನಿವಾಸಪ್ಪ, ಡಾ.ಗೋವಿಂದರಾಯ, ಗಂಗಮ್ಮ, ಮಮತಾ, ನಾಗರಾಜು, ಶೈಲೆಂದ್ರ ಕುಮಾರ್, ಜ್ಞಾನದೇವಮೂರ್ತಿ, ಪದ್ಮಶ್ರೀ, ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link