ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ

ಚಿತ್ರದುರ್ಗ

       ದೇಶಭಕ್ತಿಗೆ ಎಲ್ಲರಿಗೂ ಸ್ಪೂರ್ತಿಯಾದ ವ್ಯಕ್ತಿ ಛತ್ರಪತಿ ಶಿವಾಜಿ ಮಹಾರಾಜರು ಎಂದು ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.ನಗರದ ತರಾಸು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಮರಾಠ ಸಮುದಾಯಕ್ಕೆ ಸೇರಿದ ಛತ್ರಪತಿ ಶಿವಾಜಿ ಮಹಾರಾಜರು ಪ್ರಾಣಿ ಪಕ್ಷಿ ಸೇರಿದಂತೆ ಎಲ್ಲಾ ಜೀವರಾಶಿಗೂ ಒಂದೇ ರೀತಿಯಲ್ಲಿ ಭಾವನೆಯಲ್ಲಿ ನೋಡಿದ ವ್ಯಕ್ತಿ. ತಂದೆ ತಾಯಿ, ಗುರು ಹಿರಿಯರಿಗೆ ಅವರು ತೋರುತ್ತಿದೆ ಭಕ್ತಿ ಭಾವನೆ ಅಪಾರವಾದದ್ದು ಎಂದರು.

       ಮಹಿಳೆಯರಿಗೆ ರಕ್ಷಣೆಯನ್ನು ನೀಡುವುದರ ಮೂಲಕ ಅವರಿಗೆ ಯಾವುದೇ ರೀತಿಯಾದ ತೊಂದರೆಯಾಗದಂತೆ ಎಚ್ಚರವಹಿಸಿ ಕಾರ್ಯವನ್ನು ಮಾಡುವುದನ್ನು ಶಿವಾಜಿ ಅವರ ತಾಯಿಯಿಂದ ಕಲಿತ್ತಿದ್ದು, ಅದನ್ನು ತನ್ನ ಆಡಳಿತದಲ್ಲೂ ರೂಢಿಸಿಕೊಂಡು ಬರುವುದರೊಂದಿಗೆ ಎಲ್ಲಾ ಜನಾಂಗದವರ ಪ್ರೀತಿಗೆ ಪಾತ್ರನಾದವರಾಗಿದ್ದಾರೆ ಎಂದರು.

         ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಾತನಾಡಿ, ಶಿವಾಜಿ ಮಹಾರಾಜರಲ್ಲಿ ದೇಶಪ್ರೇಮ ಬೆಳೆಯಲು ಸ್ಪೂರ್ತಿ ತಾಯಿ ಜಿಜಾಬಾಯಿ. ಅವರಿಂದ ಸಾಕಷ್ಟು ವಿಚಾರಗಳನ್ನು ತಿಳಿದು ದೇಶಕ್ಕಾಗಿ ಮೊಗಲರ ವಿರುದ್ಧ ಹೋರಾಟ ಮಾಡಿದರು. ಮಹಾನ್ ದೇಶಭಕ್ತ ಛತ್ರಪತಿ ಶಿವಾಜಿ ಮಹಾರಾಜರು ಎಂದರು.

       ದೇಶ ಕಟ್ಟಲು ಶಿವಾಜಿ ಮಹಾರಾಜರು ಮಾಡಿದ ಸಂಘಟನೆ ರೀತಿಯಲ್ಲಿ ಸಮಾಜದವರು ಸಂಘಟಿತರಾಗಬೇಕು ಎಂದ ಅವರು ಪ್ರಸ್ತುತ ಭಯೋತ್ಪಾದನೆ ನೋಡಿದಾಗ ನಮಗೆಲ್ಲಾ ಶಿವಾಜಿ ಮಹಾರಾಜರ ಮಾರ್ಗದರ್ಶನದಲ್ಲಿ ನಡೆಯಬೇಕು. ಮೊದಲಿನಂತೆ ಇಂದು ಸಹ ಇಸ್ಲಾಂ ಭಯೋತ್ಪಾದಕರ ವಿರುದ್ದ ಹೋರಾಟ ಮಾಡಬೇಕಾಗಿದೆ ಎಂದರು.

       ದೇಶದ ಗಡಿಗಳಲ್ಲಿ ನಮ್ಮಗಳ ರಕ್ಷಣೆಗೆ ನಿಂತಿರುವ ಯೋಧರು ತಮ್ಮಗಳ ಮನೆಯವರನ್ನು ಬಿಟ್ಟು ಜೀವದ ಅಂಗನ್ನು ತೊರೆದು ಕರ್ತವ್ಯದಲ್ಲಿ ತೊಡಗಿರುತ್ತಾರೆ. ಅವರಲ್ಲಿ ನಾವುಗಳು ಸ್ಪೂರ್ತಿಯನ್ನು ತುಂಬುವ ಕೆಲಸ ಮಾಡಬೇಕು. ಇದರಲ್ಲಿ ರಾಜಕೀಯ ಬೇರೆಸಿ ಭಯೋತ್ಪಾದಕರಿಗೆ ಕುಮ್ಮಕ್ಕು ನೀಡಬಾರದು ಎಂದು ಹೇಳಿದರು.

        ಕಾಶ್ಮೀರದಲ್ಲಿ ನಮ್ಮ ಸೈನಿಕರಿಗೆ ಕಲ್ಲು ಹೊಡೆಯುವ ಜನರಿಗೆ ಅಲ್ಲಿನ ಮುಖ್ಯ ಮಂತ್ರಿಯಾಗಿದ್ದ ಮುಖ್ತಿಮೆಹಬೂಬ್ ನೀಡುತ್ತಿದ್ದಾರೆ. ಇಂತಹ ಸಂಗತಿಗಳನ್ನು ನೋಡಿ ಬಿಜೆಪಿಯ ಉಪ ಮುಖ್ಯ ಮಂತ್ರಿ ರಾಜೀನಾಮೆ ನೀಡಿದರು ಎಂದ ಅವರು ದೇಶದ ವಿಚಾರದಲ್ಲಿ ನಾವುಗಳು ರಾಜಕೀಯ ಬೇರೆಸಿ ಸ್ವಾರ್ಥ ರಾಜಕಾರಣ ಮಾಡಬಾರದು ಎಂದರು.

        ಅಪಾರ ಜಿಲ್ಲಾಧಿಕಾರಿ ಸಂಗಪ್ಪ, ತಹಶಿಲ್ದಾರ್ ಕಾಂತರಾಜ್, ಯೋಜನಾಧಿಕಾರಿ ಶಶಿದರ್, ನಗರಸಭೆ ಸದಸ್ಯರಾದ ಶಶಿಧರ್, ಎಸ್. ಭಾಸ್ಕರ್, ಜಿಲ್ಲಾ ಮರಾಠ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಸುರೇಶರಾವ್‍ಜಾಧವ್, ಕಾರ್ಯದರ್ಶಿ ಜೆ.ಗೋಪಾಲರಾವ್‍ಜಾದವ್ ಸೇರಿದಂತೆ ಇತರರು ಹಾಜರಿದ್ದರು.ಪತಂಜಲಿ ನರ್ಸಿಂಗ್ ಶಾಲೆಯ ನಿರ್ವಾಹಕ ನಿರ್ದೇಶಕ ಬದರೀನಾಥ್ ಉಪನ್ಯಾಸ ನೀಡಿದ್ದು ಜಿ.ಎನ್.ವಿರೂಪಾಕ್ಷಪ್ಪ ಹಾಗೂ ಸಂಗಡಿಗರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಗಣೇಶಯ್ಯ ಕಾರ್ಯಕ್ರಮ ನಿರೂಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap