ಸ್ನಾತಕೋತ್ತರ ಡಿಪ್ಲೋಮೊ ಕೋರ್ಸ್ ಕೈಬಿಡಲು ವಿವಿ ನಿರ್ಧಾರ..!!

ಬೆಂಗಳೂರು

   ವಿಶ್ವವಿದ್ಯಾನಿಲಯಗಳ ನಡುವಿನ ಕಿತ್ತಾಟದಿಂದ ಸ್ನಾತಕೋತ್ತರ ಡಿಪ್ಲೋಮೊ ಕೋರ್ಸ್‍ಗಳನ್ನು ಕೈಬಿಡುವ ನಿರ್ಧಾರವನ್ನು ಬೆಂಗಳೂರು ವಿಶ್ವವಿದ್ಯಾನಿಲಯ ಕೈಗೊಂಡಿದೆ.ಇದರಿಂದ ಬೆಂಗಳೂರು ವಿವಿ ಆರಂಭಿಸಿದ್ದ ಸ್ನಾತಕೋತ್ತರ ಡಿಪ್ಲೋಮೊ ಕೋರ್ಸ್‍ಗಳನ್ನು ಪ್ರಸಕ್ತ ಸಾಲಿನಿಂದ ಸ್ಥಗಿತಗೊಳ್ಳಲಿವೆ .

      ಯುಜಿಸಿ ಅನುಮತಿಯೊಂದಿಗೆ 2013ರಲ್ಲಿ ಸ್ನಾತಕೋತ್ತರ ಡಿಪ್ಲೋಮೊ ಕೋರ್ಸ್‍ಗಳನ್ನು ಬೆಂಗಳೂರು ವಿವಿ ಆರಂಭಿಸಿತ್ತು. ವಾರ್ಷಿಕ ಪ್ರತೀ ತರಗತಿಗಳಿಗೆ 20 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿತ್ತು. ಡಿಪ್ಲೋಮೊ ಇನ್ ಕ್ಲಿನಿಕಲ್ ಎಂಬ್ರಿಯಾಲಜಿ ಮತ್ತು ಅಲಿಸ್ಟೆಡ್ ರೀ ಪ್ರೋಡೆಕ್ಷನ್ ಟೆಕ್ನಾಲಜಿ ಎಂಬ ಕೋರ್ಸ್‍ಗಳನ್ನು ಆರಂಭಿಸಿ 5 ವರ್ಷಗಳ ಕಾಲ ಈ ಕೋರ್ಸ್‍ನಡಿ ಶಿಕ್ಷಣ ನೀಡಲಾಗಿತ್ತು. ಆದರೆ, ಏಕಾಏಕಿ ವಿವಿಯಲ್ಲುಂಟಾಗಿರುವ ಕಿತ್ತಾಟದಿಂದ ಈ ಕೋರ್ಸ್‍ನ್ನು ಕೈಬಿಟ್ಟಿದ್ದು, ಕೋರ್ಸ್ ಪ್ರವೇಶ ಬಯಸಿದ್ದ ವಿದ್ಯಾರ್ಥಿಗಳಲ್ಲಿ ತೀವ್ರ ಅಸಮಾಧಾನವುಂಟು ಮಾಡಿದೆ.

     2018-19ನೇ ಸಾಲಿಗೂ ಈ ಸ್ನಾತಕೋತ್ತರ ಡಿಪ್ಲೋಮೊ ಕೋರ್ಸ್‍ಗಳನ್ನು ಬೆಂಗಳೂರು ವಿವಿ ಅರ್ಜಿ ಆಹ್ವಾನಿಸಿತ್ತು. ವಿದ್ಯಾರ್ಥಿಗಳು ಅರ್ಜಿಯೊಂದಿಗೆ ನಿಗದಿತ ಶುಲ್ಕವನ್ನೂ ಸಹ ಪಾವತಿಸಿದ್ದರು. ಆದರೆ, ವಿವಿ ಜೀವವಿಜ್ಞಾನ ವಿಭಾಗ, ಈ ಕೋರ್ಸ್‍ಗಳ ಪ್ರವೇಶ ಪರೀಕ್ಷೆಯನ್ನು ಏಕಾಏಕಿ ಮುಂದೂಡಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap