ತೆಲಂಗಾಣಾ:
ಸಮಾಜದಲ್ಲಿ ಸಮಾನತೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಎಲ್ಲಿರಿಗೂ ಕಾಯಕವೇ ಕೈಲಾಸ ಎಂಬ ಮಹಾ ಆದರ್ಶವನ್ನಿತ್ತ ಶ್ರೀ ಕ್ರಾಂತಿ ಯೋಗಿ ಬಸವಣ್ಣರ ಚರಿತ್ರೆಯನ್ನು ತೆಲಂಗಾಣದ ಸರಕಾರ ಶಾಲಾ ಪಠ್ಯದಲ್ಲಿ ಸೇರಿಸಲು ಒಪ್ಪಿಗೆ ನೀಡಿದೆ.
12ನೇ ಶತಮಾನದ ಸಾಮಾಜ ಸುಧಾರಕ ಕ್ರಾಂತಿಯೋಗಿ ಬಸವಣ್ಣ ಗಂಡು-ಹೆಣ್ಣನ ಸಮಾನತೆ ಸಾರಿದರು, ವಚನಗಳ ಮೂಲಕ ತಮ್ಮ ಆದ್ಯಾತ್ಮಿಕ ಅನುಭವ ಹಾಗೂ ಸಲಹೆಗಳನ್ನು ನೀಡಿದವರು.
ಬಸವಣ್ಣನವರ ಜೀನ ಮತ್ತು ಸಾಧನೆಗಳ ಕುರಿತ ಮಾಹಿತಿಯನ್ನು ಶಾಲಾಪಠ್ಯ ದಲ್ಲಿ ಅಳವಡಿಸುವಂತೆ ಇತ್ತೀಚೆಗೆ ಮನವಿ ಸಲ್ಲಿಸಲಾಗಿತ್ತು.ಅದರ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯ ಶಿಕ್ಷಣ ಸಂಶೋಧನಾ ಮಂಡಳಿ ಒಪ್ಪಿಗೆ ನೀಡಿದೆ ಎಂದು ತೆಲಂಗಾಣ ಶಿಕ್ಷಣ ಕಾರ್ಯದರ್ಶಿ ಡಾ.ಬಿ ಜನಾರ್ದನ ರೆಡ್ಜಿ ತಿಳಿಸಿದ್ದಾರೆ. ತೆಲುಗು ಭಾಷೆ ಹಾಗೂ ಸಮಾಜ ವಿಜ್ಞಾನ ಪುಸ್ತಕದಲ್ಲಿ ಪಠ್ಯ ಅಳವಡಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಕಾಲೇಜು ಮಟ್ಟದಲ್ಲಿ ಬಸವಣ್ಣ ಕುರಿತ ಪಠ್ಯ ಅಳವಡಿಸುವ ಸಂಬಂಧ ಸಂಶೋಧನೆ ನಡೆಸಿ ಆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ, ಇನ್ನೂ ತೆಲಂಗಾಣ ಸರ್ಕಾರದ ಈ ಕ್ರಮಕ್ಕೆ ಕರ್ನಾಟ ಹಲವು ಬರಹಗಾರರು ಸಂತಸ ವ್ಯಕ್ತ ಪಡಿಸಿದ್ದಾರೆ. ಬಸವಣ್ಣ ಕೇವಲ ಒಂದು ರಾಜ್ಯಕ್ಕೆ ಸೀಮಿತವಾದವರಲ್ಲ, ಅವರ ಭಕ್ತಿ ಸಂದೇಶ ಇಡೀ ವಿಶ್ವಕ್ಕೆ ಅನ್ವಯವಾಗುತ್ತದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.