ಕೊಟ್ಟೂರು
ಬಿಜೆಪಿ ಅಭ್ಯರ್ಥಿ ಜೆ. ಶಾಂತಾರವರು ಕನ್ನಡ ಭಾಷೆಯನ್ನು ಸುಲಲಿತವಾಗಿ ಮಾತನಾಡಲು ಬರುವುದಿಲ್ಲ ಮುಖ್ಯವಾಗಿ ಶ್ರೀರಾಮುಲು ಮತ್ತು ಜೆ. ಶಾಂತಾ ಸಂಸದರಾಗಿ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಪ್ರಶ್ನಿಸಿದರು.
ಕೊಟ್ಟೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಕಾಂಗ್ರೇಸ್ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಪರ ಚುನಾವಣಾ ಪ್ರಚಾರ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಉಗ್ರಪ್ಪ ಸಮರ್ಥವಾದ ನಾಯಕರು, ಸಂಸದೀಯ ಪಟು. ವಿಚಾರವಂತರು. ವಾಗ್ಮಿಗಳು ಅಷ್ಟೆ ಅಲ್ಲದೆ ಬಳ್ಳಾರಿಯ ಗಣಿ ಹಗರಣವನ್ನು ಬಯಲಿಗೆಳೆದವರು ಎಂದರು.
ಯಾವ ಪಕ್ಷವನ್ನು ಯಾರೂ ಒತ್ತೇ ಇಟ್ಟಿಲ್ಲ. ಕೋಮುವಾದಿ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಜೆಡಿಎಸ್ ಮತ್ತು ಕಾಂಗ್ರೇಸ್ ಕೂಡಿ ಸಮ್ಮಿಶ್ರ ಸರ್ಕಾರ ರಚಿಸಿದ್ದೇವೆ. ಜೆಡಿಎಸ್ ಪಕ್ಷ ಪ್ರಬಲವಾಗಿದ್ದ ಕ್ಷೇತ್ರದಲ್ಲಿ ಕಾಂಗ್ರೇಸ್ ಸ್ಥಾನ ಬಿಟ್ಟುಕೊಟ್ಟಿದೆ. ಕಾಂಗ್ರೇಸ್ ಪ್ರಬಲವಿದ್ದ ಕ್ಷೇತ್ರದಲ್ಲಿ ಜೆಡಿಎಸ್ ಸ್ಥಾನ ಬಿಟ್ಟುಕೊಟ್ಟಿದೆ ಎಂದು ಸಮರ್ಥಿಸಿಕೊಂಡರು.
ಕಾಂಗ್ರೇಸ್ ಪಕ್ಷವು ಇಂದಿನ ಬಳ್ಳಾರಿ ಲೋಕಸಭಾ ಚುನಾವಣೆಯ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ ಉಸ್ತುವಾರಿ ನೀಡಿದೆ. ಕ್ಷೇತ್ರವ್ಯಾಪ್ತಿಯಲ್ಲಿ ಪ್ರಚಾರ ಕೈಗೊಂಡಿದ್ದೇನೆ. ಎಲ್ಲಾ ಕಡೆಯೂ ಕಾಂಗ್ರೇಸ್‍ಪರವಾಗಿರುವುದಕ್ಕೆ ಶಾಸಕ ಭೀಮಾನಾಯ್ಕರ ಜನಪರ ಕಾರ್ಯಗಳೇ ಕಾರಣ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ