ಚಿತ್ರದುರ್ಗ
ರಾಣಿಕೆರೆ ನೀರನ್ನು ಜನ ಮತ್ತು ಜಾನುವಾರುಗಳ ಅನುಕೂಲಕ್ಕಾಗಿ ಚಕ್‍ಡ್ಯಾಂಗಳಿಗೆ ತುಂಬಿಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾಡಳಿತವನ್ನು ಆಗ್ರಹಿಸಿದೆ.
ಸೋಮವಾರ ಜಲ್ಲಾಧಿಕಾರಿಗಳನ್ನು ಬೇಟಿ ಮಾಡಿದ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು, ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಮೀರಸಾಬಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ವಿವಿಧ ಗ್ರಾಮಗಳಿಗೆ ಜಾನುವಾರು ಮತ್ತು ಜನಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ ಕೊಳವೆಬಾವಿ ಕೊರೆಯಿಸಿದರು ಸಹಾ ನೀರಿನ ಪ್ರಮಾಣ ಸಾಕಾಗುತ್ತಿಲ್ಲ. ಇದರಿಂದ ನೀರಿಗಾಗಿ ಪರಾಡುವ ಸ್ಥಿತಿ ಉಂಟಾಗಿದೆ ಎಂದು ಜಿಲ್ಲಾಧಿಕಾರಿಗಳಿಎಗ ತಿಳಿಸಿದರು.
ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ರಾಣಿಕರೆಯಲ್ಲಿ ಈಗ ಹಾಲಿ 13 ಅಡಿ ನೀರು ಇದ್ದೆ ಇದರಲ್ಲಿ 2 ಅಡಿ ನೀರನ್ನು ಸುತ್ತಾ-ಮುತ್ತಲ್ಲಿನ ಚಕ್ ಡ್ಯಾಂಗಳಿಗೆ ನೀರನ್ನು ಬೀಡುವುದರ ಮೂಲಕ ಜನ ಮತ್ತು ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಈ ಬಗ್ಗೆ ಕಳೆದ 19 ರಂದು ಮನವಿಯನ್ನು ಸಲ್ಲಿಸಲಾಗಿತ್ತು. ಅದರಂತೆ ತಾವುಗಳು ಸಂಬಂಧಪಟ್ಟ ಅಧಿಕಾರಿಗಳಿಗೆ ಮೌಖಿಕವಾಗಿ ನೀರನ್ನು ಬಿಡುವಂತೆ ಸೂಚನೆ ನೀಡಲಾಗಿತ್ತು.ಇದರಂತೆ ಅಧಿಕಾರಿಗಳು ಖುದ್ದಾಗಿ ಬೇಟಿ ನೀಡುವುದರ ಮೂಲಕ ಕೆರೆಯ ಹಂದಿನ ಭಾಗದ ಚಕ್ ಡ್ಯಾಂಗಳನ್ನು ಸಹಾ ಪರೀಶೀಲಿಸಿದ್ದಾರೆ. ಈ ಭಾಗಕ್ಕೆ ನೀರನ್ನು ತುಂಬಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಯಿತು.ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಸೋಮುಗುದ್ದು ರಂಗಸ್ವಾಮಿ, ಜಿಲ್ಲಾ ಸಮಿತಿಯ ಭೀಮಾರೆಡ್ಡಿ, ಚಿದಾನಂದಪ್ಪ, ಸಿದ್ದಪ್ಪ,ಶಿವಕುಮಾರ್,ಬಸವರಾಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ