ಪ್ರಬುದ್ಧ ಭಾರತಕ್ಕಾಗಿ ಶೋಷಿತರು ಒಗ್ಗಟ್ಟಾಗೋಣ

ದಾವಣಗೆರೆ :

      ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕನಸಿನ ಪ್ರಬುದ್ಧ ಭಾರತ ನಿರ್ಮಾಣಕ್ಕಾಗಿ ಹಾಗೂ ಸಮಾನತೆ ಮತ್ತು ಸ್ವಾಭಿಮಾನದ ಬದುಕಿಗಾಗಿ ಶೋಷಿತರು ಒಗ್ಗಟ್ಟಾಗಬೇಕೆಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಪ್ರಿಯಾಂಕ ಖರ್ಗೆ ಕರೆ ನೀಡಿದರು.ನಗರದ ಶಿವಯೋಗಿ ಮಂದಿರದ ಆವರಣದಲ್ಲಿ ಭಾನುವಾರ ಛಲವಾದಿ ಮಹಾಸಭಾ ವತಿಯಿಂದ ಏರ್ಪಡಿಸಿದ್ದ ಅಭಿನಂದನಾ ಮತ್ತು ಜನ ಜಾಗೃತಿ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

      ತಾರೆಯೊಬ್ಬರಿಗೆ ಮಗು ಹುಟ್ಟಿದರೆ, ಕ್ರೀಡೆಯಲ್ಲಿ ಗೆದ್ದರೆ ಮನ್‍ಕೀ ಬಾತ್‍ನಲ್ಲಿ ಮಾತನಾಡುವ ಪ್ರಧಾನಿ ನರೇಂದ್ರ ಮೋದಿಯವರು, ದೆಹಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟರೂ, ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ನಿರಂತರ ದಾಳಿ ನಡೆದರೂ ಮಾತನಾಡುವುದಿಲ್ಲ. ಈ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳಬೇಕೆಂದು ಕಿವಿಮಾತು ಹೇಳಿದರು.

        ದೇಶದಲ್ಲಿ ಒಂದು ರೀತಿಯ ವಿಚಿತ್ರ ವಾತಾವರಣವಿದ್ದು, ಕೆಲ ಸಂಸ್ಥೆಗಳು ದೇಶದ ನಾಗರೀಕರ ಮೇಲೆ ಏಕಸಂಸ್ಕøತಿಯನ್ನು ಒತ್ತಾಯಪೂರ್ವಕವಾಗಿ ಏರುವ ಹುನ್ನಾರ ನಡೆಸಿವೆ. ಇದು ಅಂಬೇಡ್ಕರ್ ಆಶಯಕ್ಕೆ ವಿರುದ್ಧವಾಗಿದ್ದು, ಇವರ್ಯಾರಿಗೂ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಗೌರವವಿಲ್ಲ ಎಂದು ಆರೋಪಿಸಿದರು.

       ಈ ಸಂಸ್ಥೆಗಳ ಸಂವಿಧಾನ ವಿರೋಧಿ ನಡೆಯನ್ನು ಪ್ರಶ್ನಿಸುವವರನ್ನು ಮುಗಿಸುವ ಹುನ್ನಾರ ನಡೆದಿದೆ. ಇದಕ್ಕೆ ಎಂ.ಎಂ.ಕಲ್ಬುರ್ಗಿ, ಪನ್ಸಾರೆ, ಗೌರಿ ಲಂಕೇಶ್ ಅವರ ಹತ್ಯೆಗಳೇ ಜೀವಂತ ಉದಾಹರಣೆಗಳಾಗಿವೆ ಎಂದ ಅವರು, ಕೆಲವರು ಸಂವಿಧಾನ ಬದಲಿಸಲು ಹೋರಟಿದ್ದು, ಅಟ್ರಾಸಿಟಿ ಕಾಯ್ದೆಯನ್ನು ದುರ್ಬಲಗೊಳಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ನಡೆಸಿತ್ತು ಎಂದು ಹೇಳಿದರು.

        ಇವತ್ತು ನಾವು ಸಮಾನತೆಯ ಭಾರತವನ್ನು ಕಾಣುತ್ತಿದ್ದೇವೆ ಎಂದರೆ, ಅದಕ್ಕೆ ಸಂವಿಧಾನ ಕಾರಣವಾಗಿದೆ. ದೇಶ ಇಂದು ಸಮೃದ್ಧವಾಗಿ ಮುನ್ನಡೆಯುತ್ತಿದೆ ಎಂದರೆ, ಸಂವಿಧಾನವೇ ಹೊರತು ಯಾವುದೇ ಭಗವದ್ಗೀತೆ, ಖುರಾನ್, ಬೈಬಲ್‍ನಂತಹ ಗ್ರಂಥಗಳಿಂದ ನಡೆಯುತ್ತಿಲ್ಲ ಎಂದರು.

       ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ಸುಮಾರು 2 ವರ್ಷದ 11 ತಿಂಗಳ ಕಾಲ ಚರ್ಚೆ ನಡೆದಿದ್ದು, ಆ ಸಂದರ್ಭದಲ್ಲಿ ಬಂದ 3500 ಪ್ರಶ್ನೆಗಳಿಗೆ 20 ಸಾವಿರ ಪುಟಗಳ ಉತ್ತರ ನೀಡಿದ್ದರು. 448 ಪರಿಚ್ಛೇದ, 12 ಷೆಡ್ಯೂಲ್ ಹೊಂದಿರುವ ಬೃಹತ್ ಸಂವಿಧಾನವೂ ಈ ವರೆಗೂ ಸುಮಾರು 101 ತಿದ್ದುಪಡಿಗಳನ್ನು ಕಂಡಿದೆ ಎಂದರು.ಹಾದಿ ಬೀದಿಯಲ್ಲಿ ಹೋದವರು ಸಂವಿಧಾನ ಬದಲಿಸುತ್ತೇವೆಂದರೆ, ಅಷ್ಟು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಆದರೆ, ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಿಸುವ ಮಾತನಾಡುತ್ತಿದ್ದಾರೆ. ಇವರಿಗೆ ಮನುಸ್ಮøತಿಯೇ ಸಂವಿಧಾನ ಆಗಬೇಕಾಗಿದ್ದು, ನಮ್ಮ ದೇಶಕ್ಕೆ ಸಂವಿಧಾನ ಬೇಡ ಎಂಬುದಾಗಿ ಆರ್‍ಎಸ್‍ಎಸ್‍ನವರು ಹಿಂದೆ 150 ಪ್ರತಿಭಟನೆಗಳನ್ನು ನಡೆಸಿದ್ದಾರೆ ಎಂದು ಆರೋಪಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link