ಕೋವಿಡ್ ಹೆಚ್ಚಳ  ಕಳೆಗುಂದಿದ ಸಂಕ್ರಾಂತಿ ವ್ಯಾಪಾರ

ತುಮಕೂರು:

  ಕಬ್ಬು ಅಗ್ಗ, ಅವರೆಕಾಯಿ ದುಬಾರಿ ಖರೀದಿಗೆ ಗ್ರಾಹಕ ಹಿಂದೇಟು 

ಹೆಚ್ಚುತ್ತಿರುವ ಕೋವಿಡ್ ಮೂರನೇ ಅಲೆಯ ರೂಪಾಂತರಿ ಓಮ್ರೀಕಾನ್‍ಗೆ ಬೆಚ್ಚಿರುವ ಗ್ರಾಹಕರು ಹೆಚ್ಚು ಜನ ದಟ್ಟಣೆ ಇರುತ್ತದೆ ಎಂಬ ಕಾರಣದಿಂದ ಮಾರುಕಟ್ಟೆಗೆ ಹೆಚ್ಚಾಗಿ ಬಾರದೆ ಈ ಬಾರಿಯ ಸಂಕ್ರಾಂತಿ ವ್ಯಾಪಾರ ಕಳೆಗುಂದಿದೆ.

ಅಂತರಸನಹಳ್ಳಿ ಮಾರುಕಟ್ಟೆ ಹಾಗೂ ಮಂಡಿಪೇಟೆಯಲ್ಲಿ ಹಬ್ಬದ ಸಂದರ್ಭದಲ್ಲಿರುತ್ತಿದ್ದ ಜನ ದಟ್ಟಣೆ ಅಷ್ಟಾಗಿ ಕಂಡುಬರಲಿಲ್ಲ. ಹಬ್ಬಕ್ಕೆ ಬೇಕಾದ ಅಗತ್ಯ ವಸ್ತುಗಳನ್ನಷ್ಟೆ ಖರೀದಿಸಲು ಆಸಕ್ತಿ ತೋರಿರುವ ಗ್ರಾಹಕರು ಈ ಸಲ ಸರಳ ಸಂಕ್ರಾಂತಿ ಆಚರಣೆಗೆ ಮುಂದಾಗಿದ್ದಾರೆ.

ಸಂಕ್ರಾಂತಿ ಸರಕಷ್ಟೆ ಖರೀದಿ :

ಹಬ್ಬದ ಸಂದರ್ಭದಲ್ಲಿ ತರಹೇವಾರಿ ಸರಕುಗಳ ಖರೀದಿಗೆ ಆಸಕ್ತಿ ತೋರುತ್ತಿದ್ದ ಗ್ರಾಹಕರು, ಈ ಸಲ ಸಂಕ್ರಾಂತಿ ಹಬ್ಬಕ್ಕೆ ಬೇಕಾದ ಕಬ್ಬು, ಗೆಣಸು, ಅವರೇಕಾಯಿ, ಕಡಲೇಕಾಯಿ, ಎಳ್ಳು, ಬೆಲ್ಲ, ಸಕ್ಕರೆ ಗೊಂಬೆ, ಹಣ್ಣು, ಹೂವು ಹಾಗೂ ಪೂಜಾ ಸಾಮಗ್ರಿಗಳನ್ನು ಮಾತ್ರ ಕೊಳ್ಳುತ್ತಿದ್ದಾರೆ.

ಬೆಲೆ ಏರಿಕೆ ಹಾಗೂ ಕೋವಿಡ್ ಮೂರನೇ ಅಲೆ ಹೆಚ್ಚಾಗುತ್ತಿದ್ದು ಸರ್ಕಾರ ಮುಂದೆ ಲಾಕ್‍ಡೌನ್ ಮಾಡಿದರೆ ಬದುಕು ಕಷ್ಟ ಎಂದು ಈ ಹಿಂದಿನ ಅನುಭವಗಳಿಂದ ಎಚ್ಚೆತ್ತಿರುವ ಗ್ರಾಹಕ ಹಬ್ಬದ ಆಚರಣೆಗೆ ಏನು ಬೇಕೊ ಅಷ್ಟು ಸರಕುಗಳನ್ನು ಮಾತ್ರ ಮಿತವಾಗಿ ಮನೆಗೆ ಕೊಂಡೊಯ್ದ ದೃಶ್ಯಗಳು ಕಂಡು ಬಂದವು.

ಮೆಣಸಿನಕಾಯಿ ದುಬಾರಿ :

ಕಳೆದ ವಾರ 80 ರೂ. ಇದ್ದ ಹಸಿ ಮೆಣಸಿನಕಾಯಿ ದರ ಈ ವಾರ 100 ರೂ. ಮುಟ್ಟಿದೆ. ಬೀಟ್ರೂಟ್ 20 ರೂ. ಹೆಚ್ಚಿದೆ. ಕ್ಯಾರೇಟ್ 30-40 ರೂ. ಕುಸಿದಿದೆ. ಗೆಡ್ಡೆಕೋಸು 10 ರೂ. ಏರಿದೆ. ಬದನೆಕಾಯಿ, ಎಲೆಕೋಸು, ಹೂಕೋಸು, ಪಡುವಲಕಾಯಿ, ಬೆಂಡೆಕಾಯಿ ಬೆಲೆಗಳು ಕುಸಿತ ಕಂಡಿವೆ.

ಸೊಪ್ಪುಗಳ ಬೆಲೆಯೂ ಸಿಕ್ಕಾಪಟ್ಟೆ ಬೆಲೆ ಕುಸಿತ ಕಂಡಿದ್ದು ಸದ್ಯ ಅವರೆಕಾಯಿ ಸೀಸನ್ ಇರುವುದರಿಂದ ಸೊಪ್ಪು-ಅವರೆಕಾಯಿ ಬಸ್ಸಾರು, ಮೊಸ್ಸೊಪ್ಪು ಕಾಂಬೀನೇಷನ್‍ಗೆ ಮನಸೋಲುವ ಭೋಜನ ಪ್ರಿಯರು ಅವರೆಕಾಯಿ ಜೊತೆಗೆ ಸೊಪ್ಪು ಖರೀದಿಯ ಬೇಟೆಯಾಡುತ್ತಿದ್ದಾರೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ತರಕಾರಿ ಸಗಟು ವರ್ತಕ ವಾಸು.

ಬಾಳೆಹಣ್ಣು ಅಗ್ಗ :

ಹಬ್ಬದ ಸಂದರ್ಭಗಳÀಲ್ಲಿ ದುಪ್ಪಟ್ಟು ಬೆಲೆ ಏರುತ್ತಿದ್ದ ಬಾಳೆಹಣ್ಣು ಈ ಸಲ ಸಂಕ್ರಾಂತಿ ಹಬ್ಬ ಇದ್ದಾಗ್ಯೂ ಏಲಕ್ಕಿ ಬಾಳೆ ಕೆಜಿಗೆ 35-40 ರೂ., ಪಚ್ಚೆ ಬಾಳೆ ಕೆಜಿಗೆ 20 ರೂ. ಗೆ ಮಾರಾಟವಾಗುವ ಮೂಲಕ ಗ್ರಾಹಕರಿಗೆ ಎಟಕುತ್ತಿದೆ. ಮಿಕ್ಕಂತೆ ಸೇಬು ಯಥಾಸ್ಥಿತಿ ದರವಿದೆ.

ಮಾರುಕಟ್ಟೆಗೆ ಮಹಾರಾಷ್ಟ್ರದ ನಾಗಪುರದ ಕಡು ಕೆಂಪು ಬಣ್ಣದ ಉತ್ತಮ ತಳಿಯ ರುಚಿ, ರಸ ಭರಿತ ದಾಳಿಂಬೆ, ಸೀಡ್‍ಲೆಸ್ ದ್ರಾಕ್ಷಿ ಬಂದಿದ್ದು ಈ ಎರಡು ಹಣ್ಣುಗಳು ಕ್ರಮವಾಗಿ 120 ಹಾಗೂ 100 ರೂ. ನಂತೆ ಮಾರಾಟವಾಗುತ್ತಿವೆ. ಈ ಸಲ ಮಾರುಕಟ್ಟೆಗೆ ಹೆಚ್ಚು ಬಾಳೆಹಣ್ಣು ಬಂದಿರುವುದು ಅದರ ಬೆಲೆ ಇಳಿಕೆಗೆ ಕಾರಣವಾಗಿದೆ ಎನ್ನುತ್ತಾರೆ ಅಂತರಸನಹಳ್ಳಿ ಮಾರುಕಟ್ಟೆಯ ಟಿಕೆಪಿ ಫ್ರೂಟ್ಸ್ ಸ್ಟಾಲ್‍ನ ಮಾಲೀಕ ವೆಂಕಟೇಶ್.

ಕೋಳಿ ಏರಿಕೆ, ಮೊಟ್ಟೆ ಇಳಿಕೆ :

ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಫಾರಂ ಕೋಳಿ ಬೆಲೆ ಕೆಜಿಗೆ 10 ರೂ. ಬೆಲೆ ಹೆಚ್ಚಿದೆ. ಬ್ರಾಯ್ಲರ್ ಕೋಳಿ ಮಾಂಸದ ಬೆಲೆ ಯಥಾಸ್ಥಿತಿ ಮುಂದುವರಿದಿದ್ದು, ಮೊಟ್ಟೆ ಬೆಲೆ 1 ಡಜನ್ ಗೆ 68 ರೂ. ನಿಂದ 60 ರೂ. ಗೆ ಬೆಲೆ ಕುಸಿದಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ 8 ರೂ. ನಷ್ಟು ಕಡಿಮೆಯಾಗಿದೆ.

ಸಂಕ್ರಾಂತಿ ಹಬ್ಬ ಹಾಗೂ ಧನುರ್ ಮಾಸ ಪೂಜೆಗಳು ಇರುವುದರಿಂದ ಮೊಟ್ಟೆ ನೆಲೆ ಕುಸಿದಿದೆ ಎನ್ನುತ್ತಾರೆ ತುಮಕೂರು ಮಂಡೆಪೇಟೆಯ ಶಂಸ್ ಮೊಟ್ಟೆ ಅಂಗಡಿಯ ಮಾಲೀಕ ಇಕ್ಬಾಲ್, ಹಬ್ಬ ಇನ್ನೆರಡು ದಿನಗಳಲ್ಲಿ ಮುಗಿಯಲಿದ್ದು ಅಯ್ಯಪ್ಪ ಸ್ವಾಮಿ ವ್ರತ ಹಾಗೂ ಧನುರ್ ಮಾಸದ ಪೂಜೆಗಳಿಗೆ ತೆರೆ ಬೀಳುವುದರಿಂದ ತಿಂಗಳುಗಟ್ಟಲೆ ಮಾಂಸಾಹಾರ ತ್ಯಜಿಸಿದ್ದ ಬಾಯಿಕೆಟ್ಟ ಮಾಂಸಾಹಾರಿ ವ್ರತಧಾರಿಗಳು ಹಬ್ಬದ ನಂತರ ಮಾಂಸಾಹಾರ ಸೇವನೆ ಮಾಡುವುದರಿಂದ ಕೋಳಿ ಬೆಲೆ ಕೊಂಚ ಏರಿದೆ ಎನ್ನುತ್ತಾರೆ ಹುಳಿಯಾರಿನ ಕೋಳಿ ವರ್ತಕ ಕರವೇ ಶ್ರೀನಿವಾಸ್.

 ಲೋಡ್‍ಗಟ್ಟಲೆ ಬಂದ ಕಬ್ಬು :

ಸಂಕ್ರಾಂತಿ ಹಬ್ಬದ ಅಂಗವಾಗಿ ಈ ಬಾರಿ ಜಿಲ್ಲೆಗೆ ನೂರಾರು ಲೋಡ್ ಕಬ್ಬು ಬಂದಿದೆ. ನಗರದ ಅಂತರಸನಹಳ್ಳಿ ಮಾರುಕಟ್ಟೆಯಲ್ಲೆ ಸುಮಾರು 20-30 ಕಬ್ಬು ತುಂಬಿದ್ದ ಲಾರಿಗಳು ಅನ್‍ಲೋಡ್ ಮಾಡುತ್ತಿದ್ದ ದೃಶ್ಯಗಳು ಕಂಡು ಬಂದವು.

ಹಾಸನ, ಹೊಳೆನರಸೀಪುರ, ಚನ್ನರಾಯಪಟ್ಟಣ ದಿಂದ ಹೆಚ್ಚು ಕಬ್ಬು ತುಂಬಿದ ಲಾರಿಗಳು ಬಂದಿದ್ದು, ಗ್ರಾಹಕರ ಬೇಡಿಕೆಗಿಂತ ಹೆಚ್ಚು ಮಾಲು ಬಂದಿದ್ದರಿಂದ ಕಬ್ಬಿನ ಬೆಲೆ ಕುಸಿದಿದೆ. 1 ಕಬ್ಬಿನ ಜಲ್ಲೆಗೆ 20-30 ರೂ., ಜೊತೆ 40-50 ರೂ., ಹಾಗೂ 14 ಕಬ್ಬುಗಳಿರುವ ಒಂದು ಕಟ್ಟಿಗೆ ಸಗಟು ದರ 200-300 ರೂ. ಗೆ ಮಾರಾಟವಾಯಿತು.

ಕಳೆದ ಸಲ ಸಂಕ್ರಾಂತಿಯಲ್ಲಿ 1 ಕಬ್ಬಿನ ಜಲ್ಲೆಗೆ 50 ರೂ., ಒಂದು ಕಟ್ಟಿಗೆ 500-600 ರೂ. ಇತ್ತು ಈ ಸಲ ಕಬ್ಬಿನ ಬೆಲೆ ತೀವ್ರವಾಗಿ ಕುಸಿದಿದೆ. ಬೇಡಿಕೆಯೂ ಹೆಚ್ಚಿಲ್ಲ, ಶನಿವಾರ ವಾರಂತ್ಯ ಕಫ್ರ್ಯೂ ಬೇರೆ ಇದೆ ಹಾಗಾಗಿ ಬಂದಷ್ಟು ಬೆಲೆಗೆ ಕಬ್ಬು ಮಾರುತ್ತಿದ್ದೇವೆ. ಲಾರಿ ಬಾಡಿಗೆ ಹುಟ್ಟಿದರೆ ಸಾಕು ಎಂಬಂತಾಗಿದೆ ನಮ್ಮ ಪರಿಸ್ಥಿತಿ.

-ಶಂಕರೇಗೌಡ, ಕಬ್ಬು ಬೆಳೆಗಾರ, ಹೊಳೆನರಸೀಪುರ

ಹಣ್ಣುಗಳ ಧಾರಣೆ

(ಬೆಲೆ ಕೆ.ಜಿ ರೂ.)  (ಅಂತರಸನಹಳ್ಳಿ ಮಾರುಕಟ್ಟೆ)

ಸೇಬು                   140-160
ದಾಳಿಂಬೆ                 120
ಮೊಸಂಬಿ                60-80
ನಾಟಿ ಕಿತ್ತಳೆ             60-80
ಸಪೋಟ               40-60
ಏಲಕ್ಕಿ ಬಾಳೆ           30-40
ಪಚ್ಚ ಬಾಳೆ              20
ಪಪ್ಪಾಯ             20-30
ಕಲ್ಲಂಗಡಿ              30
ಕರಬೂಜ           50-60
ಸೀಬೆ               50-60
ಪೈನಾಪಲ್       50-60
ದ್ರಾಕ್ಷಿ            100

ತರಕಾರಿ (ಬೆಲೆ ಕೆ.ಜಿ ರೂ.)  (ಅಂತರಸನಹಳ್ಳಿ ಮಾರುಕಟ್ಟೆ)

ಟೊಮೆಟೊ               –      30
ಈರುಳ್ಳಿ                  –      35
ಆಲೂಗಡ್ಡೆ               –     25-30
ಬೀನ್ಸ್                  –        40
ಕ್ಯಾರೆಟ್                –   50-60
ಬೀಟ್ರೂಟ್              –     60-70
ಮೂಲಂಗಿ              –     20
ಗೆಡ್ಡೆಕೋಸು             –     40
ನುಗ್ಗೆಕಾಯಿ            –     300
ಬದನೆಕಾಯಿ          –     30
ಎಲೆಕೋಸು          –     40
ಹೂಕೋಸು           –    30
ಹಸಿ ಮೆಣಸಿನಕಾಯಿ   –    100
ಕ್ಯಾಪ್ಸಿಕಂ             –    80-100

ಮೊಟ್ಟೆ/ಮಾಂಸ ಬೆಲೆ  (ಕೆ.ಜಿಗೆ)
ಬ್ರಾಯ್ಲರ್            –  130
ಫಾರಂ                –  120
ನಾಟಿ ಕೋಳಿ ಮಾಂಸ – 250-300
ಮಟನ್              –  600-650
ಮೀನು (ಸಾಮಾನ್ಯ)- 120-150
ಮೊಟ್ಟೆ
(1 ಡಜನ್) 60

ಕೊಬ್ಬರಿ ಧಾರಣೆ
(ತಿಪಟೂರು)
ಪ್ರತಿ ಕ್ವಿಂಟಾಲ್
ಕನಿಷ್ಠ           –   15,700
ಗರಿಷ್ಠ            –  17,255
ಮಾದರಿ       –  17,000
ಒಟ್ಟು ಆವಕ–1033.72 ಕ್ವಿಂಟಾಲ್
(2404 ಚೀಲ)

ಹೂವು ಮಾರು/ಕೆ.ಜಿ ದರ
ಕಾಕಡ             – 40-60
ಕನಕಾಂಬರ       –  40-50
ಸೇವಂತಿಗೆ ಹಳದಿ –  80-100
ಸೇವಂತಿಗೆ ಬಟನ್ಸ್-  80-100
ತುಳಸಿ           –   40-50
ಗುಲಾಬಿ         –  20 60-70
ಗುಲಾಬಿ ಬಿಡಿ   –  150-200
ಚೆಂಡು ಹೂವು   -25-30

ಸಂಕ್ರಾಂತಿ ಸಾಮಗ್ರಿಗಳು -ದರ (ಕೆಜಿ)

ಅವರೆಕಾಯಿ        –  50-60
ಕಡಲೇಕಾಯಿ        –  70-80
ಗೆಣಸು             –  20-30
ಕಬ್ಬು (ಜೋಡಿ)    –  50-60
ಕೊಬ್ಬರಿ ಊಂಡೆ     –   210
ಕೊಬ್ಬರಿ (ಕಟ್ ಪೀಸ್)-  500-600
ಬೆಲ್ಲ ಅಚ್ಚು            – 50
ಬೆಲ್ಲ ಉಂಡೆ          – 45
ಬೆಲ್ಲ ಕಟ್‍ಪೀಸ್         – 80
ಸಕ್ಕರೆ ಗೊಂಬೆ ಹಾಲು- 100
ಸಕ್ಕರೆ ಗೊಂಬೆ ಬಣ್ಣ   –  80
ಬಿಳಿ ಎಳ್ಳು          –  170
ಕಡಲೆ ಬೀಜ          – 130
ಹುರಿಗಡಲೆ       –   85
ಜೀರಿಗೆ ಪೆಪ್ಪರ್‍ಮೆಂಟ್ – 120
ಕುಸುರಿ           –  120
ರೆಡಿ ಎಳ್ಳುಬೆಲ್ಲ  – 150

    -ಚಿದಾನಂದ್ ಹುಳಿಯಾರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link