ಬಳ್ಳಾರಿ
ಲೋಕಸಭಾ ಸದಸ್ಯ ವಿ.ಎಸ್.ಉಗ್ರಪ್ಪ ಅವರು ಶುಕ್ರವಾರ ಕುಡುತಿನಿ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕುಡಿತಿನಿ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸುಮಾರು ಇಪ್ಪತು ಸಾವಿರಕ್ಕೂ ಅಧಿಕ ಜನರು ವಾಸಿಸುತ್ತಿದ್ದು, ಇದೇ ಕೆರೆಯ ನೀರನ್ನು ಸೇವಿಸುತ್ತಿದ್ದಾರೆ ಅದಕ್ಕಾಗಿ ಮಲಿನಗೊಂಡಿರುವ ಕೆರೆಯ ನೀರನ್ನು ಶುದ್ಧಿಕರಿಸಿ ಜನರಿಗೆ ಪೂರೈಸುವಂತಹ ಕಾರ್ಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.
ಪಟ್ಟಣದ ಸುತ್ತಲಿನ ಕೈಗಾರಿಕೆಗಳಿಂದ ಬರುವ ಕೆಟ್ಟ ಧೂಳು, ಹೊಗೆ, ಕಪ್ಪು ಬಣ್ಣದ ಕಿಟ್ಟವು ಮೇಲ್ನೋಟಕ್ಕೆ ಕಂಡುಬಂದಿದೆ. ಈ ರೀತಿ ಆಗದಂತೆ ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಲು ಸೂಚಿಸಲಾಗಿದೆ ಎಂದು ಹೇಳಿದ ಅವರು, ಕೆರೆಯ ಸುತ್ತಮುತ್ತಲಿನ ಖಾಲಿ ಜಾಗದಲ್ಲಿ ಜಾಲಿ ಗಿಡಗಳು ಬೆಳದಿದ್ದು, ಅವುಗಳನ್ನು ತೆರುವುಗೊಳಿಸಿ ಗಿಡ ಮರಗಳನ್ನು ಬೆಳಸಬೇಕು. ದಿನದ 24*7 ಇಬ್ಬರು ಕಾವಲುಗಾರನ್ನು ನೇಮಕ ಮಾಡಬೇಕು.
ಕೆರೆಯ ಸುತ್ತಮುತ್ತ ಇರುವ ನಾಲ್ಕರಿಂದ ಐದು ಕಾರ್ಖಾನೆಗಳಿಗೆ ನೋಟಿಸ್ ಜಾರಿ ಮಾಡಿ ಯಾವುದೇ ಕಾರಣಕ್ಕೂ ಹೆಚ್ಚು ಮಲಿನವಾಗದಂತೆ ಹಾಗೂ ಕೆರೆಗೆ ಧೂಳು ಶೇಖರಣೆಯಾಗದಂತೆ ನೋಡಿಕೊಳ್ಳುಬೇಕು, ಒಂದು ವೇಳೆ ಅದೇ ರೀತಿ ಮುಂದುವರಿಸಿದರೆ ಕಾರ್ಖಾನೆಗಳ ವಿರುದ್ಧ ಕ್ರಮ ಜರಗಿಸಬೇಕಾಗುತ್ತದೆ ಎಂದು ಕಾರ್ಖಾನೆಗಳಿಗೆ ಎಚ್ಚರಿಸಿದರು.
ಇಂತಹ ಕೆರೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚು ಜವಾವ್ದಾರಿ ವಹಿಸಬೇಕಾಗಿದೆ. ಜನರ ಆರೋಗ್ಯದ ಹಿತದೃಷ್ಠಿಯಿಂದ ವೈಜ್ಞಾನಿಕ ರೀತಿಯಲ್ಲಿ ನೀರನ್ನು ಶುದ್ಧಿಕರಿಸಿ ಜನರಿಗೆ ಪೂರೈಸುವ ಕಾರ್ಯವನ್ನು ಇನ್ನು 10 ದಿನಗಳರೊಳಗಾಗಿ ನಡೆಯಬೇಕು, ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುತ್ತದೆ ಎಂದು ಸೂಚನೆ ಕೊಟ್ಟರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ, ಕುಡುತಿನಿ ಪಟ್ಟಣ ಪಂಚಾಯತ್ ಅಧಿಕಾರಿಗಳು, ಸದಸ್ಯರು ಸೇರಿದಂತೆ ಇತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ