ಮಧುಗಿರಿ :
ಶಾಲೆಗಳಲ್ಲಿನ ಶಿಕ್ಷಕರು ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಕಾರಣಗಳನ್ನು ತಿಳಿಸುವ ವಾರಕ್ಕೊಂದು ಪ್ರಯೋಗಗಳನ್ನು ಮಾಡುವ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಡಿಡಿಪಿಐ ರವಿಶಂಕರ ರೆಡ್ಡಿ ಸಲಹೆ ನೀಡಿದರು.
ಪಟ್ಟಣದ ವಿದ್ಯಾನಗರದಲ್ಲಿನ ಮೌಂಟ್ ವ್ಯೂ ಶಾಲೆಯಲ್ಲಿ ಆಯೋಜಿಸಿದ್ದ 2018-19 ಸಾಲಿನ ವಿಜ್ಞಾನ ಮತ್ತು ಕರಕುಶಲ ವಸ್ತು ಪ್ರದರ್ಶನದ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳ ಆನಾವರಣಕ್ಕೆ ವಸ್ತು ಪ್ರದರ್ಶನಗಳು ಸಹಕಾರಿಯಾಗಿದೆ ಇಂತಹ ಪ್ರಧರ್ಶನಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವುದರಿಂದ ಬಾಲವಿಜ್ಞಾನಿಗಳಾಗಿ ಹೊರ ಹೊಮ್ಮಲಿದ್ದಾರೆ.
ಶಿಕ್ಷಕರು ವಾರಕ್ಕೆ ಒಂದರಂತೆ ಪ್ರಯೋಗಗಳ ವಿಶ್ಲೇಷಣೆ ಅದರಿಂದಾಗುವ ಅನೂಕೂಲ ಆನಾನೂಕೂಲ ವೈಜ್ಞಾನಿಕ ಚಿಂತನೆಗಳ ಬಗ್ಗೆ ಗಮನಹರಿಸಬೇಕಾಗಿದೆ ಶಾಲೆಯಲ್ಲಿನ ವಿದ್ಯಾರ್ಥಿಗಳು ಇಂಗ್ಲೀಷ್ ಭಾಷೆ , ಕ್ರಾಫ್ಟ್‍ಗೆ ಸಂಭಂಧಪಟ್ಟಂತೆ ಮಾದರಿಗಳನ್ನು ವಿದ್ಯಾರ್ಥಿಗಳು ತಯಾರಿಸಿರುವುದನ್ನು ಗಮನಿಸಿದರೆ ಅವರಲ್ಲಿನ ಸೃಜನಾತ್ಮಕ ಚಟುವಟಿಕೆಗಳನ್ನು ಬಿಂಬಿಸುತ್ತಿದೆ ಎಂದರು.
ವಸ್ತು ಪ್ರದರ್ಶನದಲ್ಲಿ ಗಣಿತ, ವಿಜ್ಞಾನ, ಕ್ರೀಡೆ, ಕರಕುಶಲ, ಪ್ಲಾಸ್ಟಿಕ್ ಮತ್ತು ಅದರ ತ್ರಾಜ್ಯಗಳಿಂದ ಜಗತ್ತಿನಲ್ಲಿನ ಜೀವಿಗಳು ಅನುಭವಿಸುತ್ತಿರುವ ಕಷ್ಟಗಳು ಸೇರಿದಂತೆ ನಿಯಂತ್ರಣಕ್ಕೆ ಅನುಸರಿಸಬೇಕಾದ ನಿಯಮಗಳ ಕಿರುಚಿತ್ರ ಮತ್ತು ಮನುಷ್ಯನಿಗೆ ಧೂಮಪಾನ ದಿಂದಾಗುವ ದುಷ್ಟಪರಿಣಾಮಗಳ ಹಾಗೂ ತೆಂಗಿನ ಉತ್ಪನ್ನಗಳಿಂದ ತಯಾರಿಸಿದ ಮಾದರಿಗಳು, ಕಡಲೆಕಾಯಿ ಹಾರ, ಪೇಪರ್ ನಿಂದ ತಯಾರಿಸಿದ ಮಾದರಿ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು.
ಪುರಸಭಾ ಸದಸ್ಯರಾದ ನಟರಾಜ್, ನಾರಾಯಣ್, ಎಂ.ಎಲ್.ಗಂಗರಾಜು, ಸುಜಾತ, ಶೋಭರಾಣಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಎನ್.ಮಹಾಲಿಂಗೇಶ್, ಬಿಇಓ ನರಸಿಂಹಯ್ಯ, ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಎಂ.ಎಸ್.ಶಂಕರನಾರಾಯಣ, ಸಂಸ್ಥೆಯ ಅಧ್ಯಕ್ಷ ಜಿ.ಸಿದ್ದಗಂಗಪ್ಪ, ಕಾರ್ಯದರ್ಶಿ ಜಿ.ಎಸ್.ಜಗದೀಶ್ ಕುಮಾರ್, ಎಲ್ ಐ ಸಿ ಅಭಿವೃದ್ಧಿ ಅಧಿಕಾರಿ ನಾಗರಾಜು, ಎಸ್.ಬಿ.ಟಿ.ರಾಮು ಶಾಲೆಯ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಇದ್ದರು.