ದಾವಣಗೆರೆ:
ನಾಡ ಹಬ್ಬ ವಿಜಯ ದಶಮಿ ಹಬ್ಬದ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಹಾಗೂ ಸಾರ್ವಜನಿಕ ವಿಜಯ ದಶಮಿ ಮಹೋತ್ಸವ ಸಮಿತಿ ಸಂಯುಕ್ತ ಮಂಗಳವಾರ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ನಡೆಯಿತು.
ನಗರದ ರಾಮ್ ಅಂಡ್ ಕೋ ವೃತ್ತದಲ್ಲಿ ಜಡೇಸಿದ್ದೇಶ್ವರ ಶಾಂತಾಶ್ರಮದ ಶ್ರೀಶಿವಾನಂದ ಸ್ವಾಮೀಜಿ ಅವರಿಂದ ಚಾಲನೆ ಪಡೆದ ಬೈಕ್ ರ್ಯಾಲಿಯು ಅಕ್ಕಮಹಾದೇವಿ ರಸ್ತೆ, ಹಳೇ ಪಿ.ಬಿ. ರಸ್ತೆ, ವಿನೋಬ ನಗರ 2ನೇ ಮುಖ್ಯರಸ್ತೆ, ಡಾ.ಎಂ.ಸಿ.ಮೋದಿ ವೃತ್ತ, ಬಾಯ್ಸ್ ಹಾಸ್ಟೆಲ್, ವಿದ್ಯಾನಗರ ವೃತ್ತ, ರಿಂಗ್ ರಸ್ತೆ, ನಿಟುವಳ್ಳಿ ದುರ್ಗಾಂಬಿಕಾ ದೇವಸ್ಥಾನ, ಶಿವಪ್ಪಯ್ಯ ವೃತ್ತ, ಈರುಳ್ಳಿ ಮಾರ್ಕೆಟ್, ಗಣೇಶ ಹೋಟೆಲ್, ವೆಂಕಟೇಶ್ವರ ವೃತ್ತ, ಅರಳಿಮರ ವೃತ್ತ, ಬೇತೂರು ರಸ್ತೆ, ಹಗೇದಿಬ್ಬ ವೃತ್ತ, ನಗರದೇವತೆ ದುರ್ಗಾಂಬಿಕಾ ದೇವಸ್ಥಾನ, ಮದಕರಿ ನಾಯಕ ವೃತ್ತ, ಶಿವಾಲಿ ಚಿತ್ರಮಂದಿರ, ಪಿ.ಬಿ. ರಸ್ತೆ ಮಾರ್ಗವಾಗಿ ಬೀರಲಿಂಗೇಶ್ವರ ದೇವಸ್ಥಾನ ತಲುಪಿ ಮುಕ್ತಾಯವಾಯಿತು.
ಬೈಕ್ ರ್ಯಾಲಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಕಾರ್ಯದರ್ಶಿ ಎಸ್.ಟಿ.ವೀರೇಶ, ಜಿಲ್ಲಾ ಸಂಚಾಲಕ ಸತೀಶ ಪೂಜಾರಿ, ಸಮಿತಿ ಅಧ್ಯಕ್ಷ ದೇವರಮನಿ ಶಿವಕುಮಾರ, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ದಕ್ಷಿಣ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಎನ್.ರಾಜಶೇಖರ್, ಹೆಚ್.ಎಂ.ರುದ್ರಮುನಿಸ್ವಾಮಿ, ಬಿ.ಜೆ.ಅಜಯ ಕುಮಾರ, ಲೋಕಿಕೆರೆ ನಾಗರಾಜ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ