ಹಾವೇರಿ :
ಕಿತ್ತೂರ ರಾಣಿ ಚೆನ್ನಮ್ಮ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಥಮ ಮಹಿಳೆಯಾಗಿವೋ ಹಾಗೂ ತುಂಬಾ ಧೈರ್ಯಶಾಲಿಯಾಗಿ ಹೋರಾಟ ಮಾಡಿದ ಧೀರ ಮಹಿಳೆಯ ಜಯಂತಿ ಮಾಡಲು ನಿರ್ಧರಿಸಿದ್ದ ಸರ್ಕಾರಕ್ಕೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಕೃತಜ್ಞೆತೆ ಸಲ್ಲಿಸಲಾಗುವುದು ಎಂದು ಸಮಾಜದ ಮುಖಂಡರಾದ ಪಿಡಿ ಶಿರೂರ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಭಾರತ ದೇಶ ಸ್ವಾತಂತ್ರ್ಯಗೊಳಿಸಲು ರಾಣಿ ಚನ್ನಮ್ಮ ತನ್ನದೆಯಾದ ಕೊಡುಗೆ ಹಾಗೂ ಹೋರಾಟದ ಮೂಲಕ ದೇಶದ ಇತಿಹಾಸದಲ್ಲಿ ಚಿರಾಯಿವಾಗಿದ್ದಾಳೆ. ಚನ್ನಮ್ಮ ಕೇವಲ ಒಂದು ಜಾತಿಗೆ ಸಿಮಿತವಾಗಿ ನಡೆದುಕೊಂಡಿಲ್ಲ. ಜ್ಯಾತ್ಯಾತೀತ ಮನೋಭಾವದವಳಾಗಿ ಎಲ್ಲರ ಬದುಕಿಗೆ ಪ್ರೇರಣಾಶಕ್ತಿಯಾಗಿದ್ದಾಳೆ.
ನಾವು ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಜಯಂತಿಯನ್ನು ಮಾಡಲಾಗುತ್ತಿದೆ. ಅದರಂತೆ ಸರ್ಕಾರದ ಜಿಲ್ಲಾಡಳಿತ ಹಾಗೂ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ವತಿಯಿಂದ ನಾಳೆ(ದಿ 23) ರಂದು ಜಿಲ್ಲಾ ಕೇಂದ್ರದಲ್ಲಿ ವಿಜೃಂಭಣೆಯಿಂದ ಆಚರಿಲಾಗುವುದು. ಕಿತ್ತೂರ ರಾಣಿ ಚೆನ್ನಮ್ಮ ಭಾವಚಿತ್ರ ಮೆರವಣೆಗೆ ಹಾನಗಲ್ ರಸ್ತೆ ಎಪಿಎಂಸಿಯಿಂದ ಬೆಳಿಗ್ಗೆ 10 ಘಂಟೆಗೆ ಪ್ರಾರಂಭವಾಗಿ ಸಿದ್ದಪ್ಪ ಸರ್ಕಲ್,ಜೆಪಿ ಸರ್ಕಲ್ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಧ್ಯಾಹ್ನ 1 ಘಂಟೆಗೆ ಹುಕ್ಕೇರಿಮಠದ ಶ್ರೀ ಶಿವಬಸವ ಕಲ್ಯಾಣ ಮಂಟಪದಲ್ಲಿ ಸಭಾ ಕಾರ್ಯಕ್ರಮ ಜರುಗುವುದು.
ದೇಶದ ಸ್ವಾತಂತ್ರ್ಯ ಹೋರಾಟಗಾರ್ತಿ ರಾಣಿ ಚನ್ನಮ್ಮ ಎಲ್ಲರಿಗೂ ಅನ್ವಯವಾಗಿ ಸಾರ್ವತ್ರಿಕತೆಯಿಂದ ಆಚರಿಸುವಂತೆ ಎಲ್ಲರೂ ಸೇರಿ ಯಶಸ್ವಿಗೊಳಿಸುವಂತೆ ಆಗಬೇಕು ಎಂದು ಪಿಡಿ ಶಿರೂರ ಹೇಳಿದರು. ಎಪಿಎಂಸಿ ಸದಸ್ಯರಾದ ಮಲ್ಲಿಕಾರ್ಜುನ ಹಾವೇರಿ ಮಾತನಾಡಿ ರಾಣಿ ಚನ್ನಮ್ಮ ಜಯಂತಿಗೆ ಸರ್ಕಾರ ಹೆಚ್ಚಿನ ಅನುದಾನ ನೀಡಿ ಪ್ರೋತ್ಸಾಹಿಸಬೇಕು. ವೀರ ರಾಣಿ ಚನ್ನಮ್ಮ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾಳೆ.ಇವಳ ಸಾಹಸ ಜೀವನ ಚರಿತ್ರೆಯನ್ನು ಎಲ್ಲರೂ ತಿಳಿದುಕೊಳ್ಳುವಂತಾಗಬೇಕು ಎಂದರು. ಈ ಸಂದರ್ಭದಲ್ಲಿ ಸಮಾಜದ ಜಿಲ್ಲಾಧ್ಯಕ್ಷ ಎಸ್‍ಆರ್ ಅಂಗಡಿ.
ಮುಖಂಡರುಗಳಾದ ಮಲ್ಲಪ್ಪ ಸಾತೇನಹಳ್ಳಿ.ಬಸವರಾಜ ಹಾಲಪ್ಪನವರ.ವೀರೇಶ ಮತ್ತಿಹಳ್ಳಿ.ಶಂಕರಗೌಡ ಪಾಟೀಲ.ಬಿಜಿ ಬಣಕಾರ.ಸಂತೋಷ ಕೊಟ್ರಪ್ಪನವರ.ಮಲ್ಲಿಕಾರ್ಜುನ ಅಗಡಿ.ನಗರಸಭೆ ಸದಸ್ಯಣಿ ಶ್ರೀಮತಿ ಚನ್ನಮ್ಮ ಬ್ಯಾಡಗಿ. ಶ್ರೀಮತಿ ವನಿತಾ ಗುತ್ತಲ.ಶ್ರೀಮತಿ ಮಮತಾ ಜಾಬೀನ್.ಶ್ರೀಮತಿ ಲಲಿತಾ ಗುಂಡೇನಹಳ್ಳಿ ಇತರರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ