ಸಿರುಗುಪ್ಪ
ಸಮಾಜದಲ್ಲಿ ಶೈಕ್ಷಣಿಕ ಅಭಿವೃದ್ಧಿ ಉನ್ನತಿಗೆ ಪಾಲಕರು ತಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಬೇಕು. ಸಮಾಜದ ಮಕ್ಕಳಲ್ಲಿ ಓದು ಸಾಮರ್ಥ್ಯ ಸಾಕಷ್ಟಿದೆ ಪಾಲಕರು ಪ್ರೋತ್ಸಾಹ ಅಗತ್ಯವಾಗಿದೆ. ಮಕ್ಕಳು ದೇಶದ ಸಂಪತ್ತು ಮತ್ತು ಆಸ್ತಿ ಎಂದು ರಾಷ್ಟ್ರೀಯ ವಯಸ್ಕರ ಶಿಕ್ಷಣ ಕೇಂದ್ರ ಕೌನ್ಸಿಲ್ ಸದಸ್ಯರು ಹಾಗೂ ಸಮಾಜ ಸುಧಾರಕರಾದ ಎ ಅಬ್ದುಲ್ ನಬಿ ಅವರು ಅಭಿಪ್ರಾಯಪಟ್ಟರು.
ಕರ್ನಾಟಕ ಸರ್ಕಾರ ಸಾರ್ವಜನಿಕ ಶಿಕ್ಷಣ ಇಲಾಖೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಉರ್ದು ಪ್ರೌಢಶಾಲೆ ಸಹಯೋಗದಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ 129ನೇ ಜನ್ಮ ದಿನಾಚರಣೆ ಪ್ರಯುಕ್ತ ಮಕ್ಕಳ ದಿನಾಚರಣೆಯಲ್ಲಿ ಅವರು ನೆಹರೂ ಅವರನ್ನು ಸ್ಮರಿಸಿ ಮಾತನಾಡಿ ಜವಾಹರ್ ಲಾಲ್ ನೆಹರು ಮಕ್ಕಳೆಂದರೆ ಪ್ರೀತಿ, ದೇಶದ “ಚಾಚಾ ನೆಹರು” ಎಂದು ಪ್ರಸಿದ್ಧರಾದ ಸಮಾಜದ ಮಕ್ಕಳಲ್ಲಿ ಓದುವ ಸಾಮರ್ಥ್ಯ ಸಾಕಷ್ಟಿದೆ.
ಆದರೆ ಪಾಲಕರ ಪ್ರೋತ್ಸಾಹ ಅಗತ್ಯವಾಗಿದೆ ನೆಹರು ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಕೈಗಾರಿಕಾ, ಉದ್ಯೋಗಿಕ, ಪಂಚವಾರ್ಷಿಕ ಯೋಜನೆಗಳು, ಆಹಾರ, ಹಸಿರು-ಕ್ರಾಂತಿ, ಮಾಡಿದ ಕೀರ್ತಿ ಪ್ರಗತಿಯತ್ತ ಭಾರತದೇಶವನ್ನು ಕೊಂಡೊಯ್ಯುವಲ್ಲಿ ಅವರ ಕೊಡುಗೆ ಅಪಾರ ಎಂದರು.
ಹಿರಿಯ ಪ್ರಾಥಮಿಕ ಸರಕಾರಿ ಉರ್ದು ಶಾಲೆ ಮುಖ್ಯ ಗುರುಗಳಾದ ಮೊಹಮ್ಮದ್ ಅಲಿ ಭಾಗವಾನ್ ಮಾತನಾಡಿ ನೆಹರು ಜನ್ಮದಿನವನ್ನು ಮಕ್ಕಳ ದಿನವನ್ನಾಗಿ ಆಚರಿಸುವುದು ನಿಜಕ್ಕೂ ಹೆಮ್ಮೆಯ ವಿಷಯ, ನೆಹರು? ಜಯಂತಿ ಅಂಗವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ಮಕ್ಕಳಿಗೆ ವಿವಿಧ ಆಟಗಳನ್ನು ಆಡಿಸುವ ಮೂಲಕ ಶಾಲಾ ಆವರಣದಲ್ಲಿ ಮಕ್ಕಳಲ್ಲಿನ ಪ್ರತಿಭೆ ಹೊರಹೊಮ್ಮಲು ವಿದ್ಯಾಭ್ಯಾಸದ ಜೊತೆಗೆ ಪೆತ್ಸಾಹಿಸುತ್ತಿದ್ದೇವೆ ಎಂದರು.
ಶಿಕ್ಷಕರಾದ ಯು.ಅಯ್ಯಪ್ಪ,ಶಿಕ್ಷಕಿ ಜಿ.ಶಾಹಿನಾ, ಪ್ರೌಢಶಾಲೆಯ ಮುಖ್ಯಗುರುಗಳಾದ ಸಾಹಿರಾಬೇಗಂ, ರಿಹಾನಾ ಬೇಗಂ, ರಫಿಯಾ ಬೇಗಂ, ಗೌಸಿಯಾ ಬೆಗಂ, ಪರ್ವೀನ್ ಬೇಗಂ, ಶಾಲಾ ಮಕ್ಕಳು ಮತ್ತಿತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ