ಬಳ್ಳಾರಿಯಲ್ಲಿ ಸರಕಾರಿ ಜಮೀನು ಅನಧಿಕೃತ ಒತ್ತುವರಿ ತೆರವು

ಬಳ್ಳಾರಿ

    ನಗರದ ಎರಡು ಕಡೆ ಸರಕಾರಿ ಜಮೀನನ್ನು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡಿರುವುದನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆ ಮೇರೆಗೆ ತಹಸೀಲ್ದಾರ್ ನಾಗರಾಜ್ ನೇತೃತ್ವದ ತಂಡ ಭಾನುವಾರ ತೆರವುಗೊಳಿಸಿತು.ನಗರದ ಬಂಡಿಹಟ್ಟಿ ಏರಿಯಾದ ಸರ್ವೇ ಸಂ.701 ಹಾಗೂ ಕೋಟೆ ಏರಿಯಾದ ಟಿಎಸ್ ನಂಬರ್ 20ರ ಸರಕಾರಿ ಜಮೀನಿನಲ್ಲಿನ ಅನಧಿಕೃತ ಒತ್ತುವರಿಗಳನ್ನು ತೆರವುಗೊಳಿಸಲಾಯಿತು.

    ತೆರವುಗೊಳಿಸುವ ಸಂದರ್ಭದಲ್ಲಿ ಕೆಲವರು ಆಕ್ಷೇಪ ವ್ಯಕ್ತಪಡಿಸಲು ಆಗಮಿಸಿದ ಸಂದರ್ಭದಲ್ಲಿ ತಹಸೀಲ್ದಾರ್ ನಾಗರಾಜ ಅವರು ಈ ಜಾಗ ಸರಕಾರಕ್ಕೆ ಸೇರಿರುವಂತದ್ದು,ತಮ್ಮಲ್ಲಿ ಇದಕ್ಕೆ ಸಂಬಂಧಿಸಿದ ದಾಖಲೆಗಳಿದ್ದರೇ ಪ್ರಸ್ತುತಪಡಿಸಿ;ಅನಗತ್ಯವಾಗಿ ತೊಂದರೆ ಉಂಟುಮಾಡಿದರೇ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಸುರೇಶ ,ವೀರೇಶ,ಶ್ರೀನಿವಾಸ್, ಸರ್ವೇಯರ್ ಪ್ರಸನ್ನ ಸೇರಿದಂತೆ ಗ್ರಾಮಲೆಕ್ಕಿಗರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link