ಚಿತ್ರದುರ್ಗ;
ಮುಂಬರುವ ಲೋಕಸಭಾ ಚುನಾವಣೆಗೆ ಮತಚಲಾಯಿಸಲು ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡಿಸುವ ಹಾಗೂ ವಿದ್ಯಾರ್ಥಿ – ಯುವ ಮತದಾರರ ಜಾಗೃತಿ ಅಂದೋಲನ ಚಂದ್ರವಳ್ಳಿಯ ಎಸ್ ಜೆ.ಎಂ ಮಹಾವಿದ್ಯಾಲಯದಲ್ಲಿ ಬುಧುವಾರ ನಡೆಯಿತು
ಕಾರ್ಯಕ್ರಮ ಉದ್ಘಾಟಿಸಿದ ಚಂದ್ರವಳ್ಳಿಯ ಎಸ್ ಜೆ ಎಂ ಪದವಿ ಕಾಲೇಜಿನ ಪ್ರಾಚಾರ್ಯಾರಾದ ಡಾ. ಕೆ.ಸಿ ರಮೇಶ್‍ರವರು ಮಾತನಾಡಿ ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬರು ಹೆಸರು ಸೆರ್ಪಡೆ ಮಾಡಿಕೊಳ್ಳಬೇಕು, ಮತದಾನ ನಮ್ಮೆಲ್ಲರ ಹಕ್ಕು ನಮ್ಮ ಪವಿತ್ರವಾದ ಮತ ಚಲಾಯಿಸುವುದದರೊಂದಿಗೆ ಉತ್ತಮ ಅಭ್ಯರ್ಥಿಯನ್ನು ಅಯ್ಕೆ ಮಾಡಿಕೊಳ್ಳಬೇಕು ನಿಮ್ಮ ಅಯ್ಕೆ ದೇಶದ ಅಭಿವೃದಿಯ ಮೇಲೆ ಅವಲಂಬಿತವಾಗಿರುತ್ತದೆ ಯಾವುದೇ ಕಾರಣಕ್ಕೂ ಮತವನ್ನು ಮಾರಿಕೊಳ್ಳಬೇಡಿ ನಿರ್ಭೀತವಾಗಿ ಮತ ಚಲಾಯಿಸಿ ನಮ್ಮ ದೇಶದ ಅಭಿವೃದ್ದಿ ವಿದ್ಯಾರ್ಥಿ ಯುವಜನರ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದರು
ಅಂದೋಲನ ಕಾರ್ಯಕ್ರಮದಲ್ಲಿ ತಾಲ್ಲೂಕು ಕಚೇರಿಯ ಉಪತಾಹಸಿಲ್ದಾರರಾದ ಐ. ಟಿ ಜಗನಾಥ್‍ರವರು ಮಾತನಾಡಿ ಮತದಾನದ ಮಹತ್ವದ ಬಗ್ಗೆ ಹಾಗೂ ಮತದಾನದ ಗುರುತಿನ ಚೀಟಿಯಿಂದ ಅಗುವ ಉಪಯೋಗಗಳ ಬಗ್ಗೆ ತಿಳಿಸಿದರು
ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಕಾಲೇಜಿನ ಬಳಿ ಇರುವ ದವಳಗಿರಿ ಬಡವಾಣೆಯ 250 ಕ್ಕೂ ಹೆಚ್ಚು ವಿದ್ಯಾರ್ಥಿ ಯುವಜನರು ಮತದಾನದ ಅರ್ಜಿ ಪಡೆದು ಹೊಸದಾಗಿ ಹೆಸರು ನೊಂದಾಯಿಸಿದರು ಅಂದೋಲನದಲ್ಲಿ ಗ್ರಾಮಲೆಕ್ಕಾಧಿಕಾರಿಗಳಾದ ಎಂ. ಎನ್ ಮುನಿಸ್ವಾಮಿ ಶಶಿಕುಮಾರ್ ಬಸವರಾಜ್ ಹಾಗೂ ಅಬ್ದುಲ್ ಭಾಗವಹಿಸಿದ್ದರು