ಆರೋಗ್ಯ ಶಿಬಿರಗಳ ಸದುಪಯೋಗ ಪಡೆದುಕೊಳ್ಳಲು : ಎಂ.ಎಸ್.ರಾಘವೇಂದ್ರ ಕರೆ

ಹಿರಿಯೂರು :

      ಈ ಸಮಾಜದ ಬಡಜನರಿಗೆ ಆರ್ಥಿಕ ದುರ್ಬಲರಿಗೆ ಈ ಉಚಿತ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು ಈ ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ರೋಟರಿ ಅಧ್ಯಕ್ಷ ಎಂ.ಎಸ್.ರಾಘವೇಂದ್ರ ಹೇಳಿದರು.

       ನಗರದ ರೋಟರಿ ಸಭಾಂಗಣದಲ್ಲಿ ಫೀಪಲ್‍ಟೀ ಆಸ್ಪತ್ರೆ ಬೆಂಗಳೂರು ಭಾರತೀಯ ರೆಡ್‍ಕ್ರಾಸ್‍ಸಂಸ್ಥೆ, ರೋಟರಿ ನೇತೃತ್ವದಲ್ಲಿ ದಿವಂಗತ ವೈ.ಎಸ್.ಅಶ್ವತ್‍ಕುಮಾರ್‍ರವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಪ್ರತಿಯೊಬ್ಬ ಮನುಷ್ಯನಿಗೂ ಆರೋಗ್ಯ ಬಹಳಮುಖ್ಯ, ಆರೋಗ್ಯವಿದ್ದರೆ ಜೀವನದಲ್ಲಿ ಏನನ್ನೂಬೇಕಾದರು ಸಾಧಿಸಬಹುದು ಆದ್ದರಿಂದ ಸಾರ್ವಜನಿಕರು ಇಂತಹ ಆರೋಗ್ಯ ಶಿಬಿರಗಳನ್ನು ಸದ್ಭಳಕೆ ಮಾಡಿಕೊಂಡು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂಬುದಾಗಿ ಅವರು ಹೇಳಿದರು.

       ಕಾರ್ಯಕ್ರಮದಲ್ಲಿ ರೆಡ್‍ಕ್ರಾಸ್ ಗೌ||ಅಧ್ಯಕ್ಷ ಕೆ.ಆರ್.ವೆಂಕಟೇಶ್, ಆರ್ಯವೈಶ್ಯಮಂಡಳಿ ಅಧ್ಯಕ್ಷ ನಾಗರಾಜಗುಪ್ತ, ರೋಟರಿಕಾರ್ಯದರ್ಶಿ ವೆಂಕಟೇಶ್, ರೊಟೇರಿಯನ್‍ಗಳಾದ ಬಿ.ಕೆ.ನಾಗಣ್ಣ, ಹೆಚ್.ಪಿ.ರವೀಂದ್ರನಾಥ್, ರೆಡ್‍ಕ್ರಾಸ್‍ಸಂಸ್ಥೆಯ ಹೆಚ್.ಎಸ್.ರಾಧಾಕೃಷ್ಣ, ಪಿ.ಆರ್.ಸತೀಶ್‍ಬಾಬು, ಪರಮೇಶ್ವರಭಟ್, ಬಸವರಾಜ್, ವಿ.ನಾಗೇಶ, ಪೀಪಲ್ಸ್‍ಟ್ರೀ ಆಸ್ಪತ್ರೆಯ ವೈದ್ಯರುಗಳಾದ ಡಾ||ಗೌರಿಶಂಕರ್, ಡಾ||ಪ್ರಾಸಾದ್, ಹಾಗೂ ಡಾ||ಶೃತಿ, ಡಾ||ಹರೀಶ್, ಡಾ||ವನಜಾಕ್ಷಿ, ಮೇಲ್ವಿಚಾರಕರಾದ ಮಂಜುಳ ಹಾಗೂ ಸಿಬ್ಬಂದಿವರ್ಗ ಭಾಗವಹಿಸಿದ್ದರು.

         ಈ ಶಿಬಿರದಲ್ಲಿ ಕೀಲು-ಮೂಳೆ, ನೇತ್ರ-ದಂತ ಮಕ್ಕಳ ತಪಾಸಣೆ ಸೇರಿದಂತೆ ಸುಮಾರು 300 ಜನರಿಗೆ ತಪಾಸಣೆ ನಡೆಸಲಾಯಿತು. ಇದೇ ಸಂದರ್ಭದಲ್ಲಿ ಶಿಬಿರದ ದಾನಿಗಳಾದ ಎ.ರಾಘವೇಂದ್ರ ಸಹೋದರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap