ವೇಮನರ ಜೀವನಧಾರೆ ಎಲ್ಲರಿಗೂ ಮಾದರಿ

ಹಾವೇರಿ

       ಮಹಾಯೋಗಿ ವೇಮನರ ಜೀವನಧಾರೆ ಎಲ್ಲರಿಗೂ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು ಹೇಳಿದರು.

       ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ರೆಡ್ಡಿ ಸಂಘದ ಸಹಯೋಗದಲ್ಲಿ ನಗರದ ಡಿ.ದೇವರಾಜು ಅರಸು ಭವನದಲ್ಲಿ ಆಯೋಜಿಸಿದ ಮಹಾಯೋಗಿ ವೇಮನ ಅವರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಮಹಾಯೋಗಿ ವೇಮನರು ಯಾವುದೇ ಒಂದು ಸಮುದಾಯ, ಜಾತಿಗೆ ಸೀಮಿತರಲ್ಲ. ಸಮ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದ ವಚನಕಾರರಂತೆ ದುಡಿದವರು ಎಂದು ಹೇಳಿದರು

         ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿ.ಪಂ.ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ ಅವರು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ, ಮಹರ್ಷಿ ವಾಲ್ಮೀಕಿ, ಕನಕದಾಸರು, ಮಹಾಯೋಗಿ ವೇಮನರ ಜೀವನ ಸಂದೇಶಗಳು ಯುವ ಸಮೂಹಕ್ಕೆ ತಲುಪಬೇಕು. ಯಾವುದೇ ಜಯಂತಿಗಳಿಗೆ ರಜೆ ನೀಡಬಾರದು. ಎಲ್ಲ ಸಮಾಜದವರೂ, ಯುವಕರು ಎಲ್ಲ ಮಹಾತ್ಮರ ಜಯಂತಿಗಳಲ್ಲಿ ಭಾಗವಹಿಸಿದಾಗ ಮಾತ್ರ ಸರ್ಕಾರ ಮಹಾತ್ಮರ ಜಯಂತಿ ಆಚರಣೆಗೆ ಮಹತ್ವ ಬರುತ್ತದೆ ಎಂದು ಹೇಳಿದರು.

        ಡಾ.ರಾಮರೆಡ್ಡಿ ಎಸ್.ವಡ್ಡೇರ ಅವರು ವಿಶೇಷ ಉಪನ್ಯಾಸ ನೀಡಿದರು. ಸಾನಿಧ್ಯ ವಹಿಸಿದ್ದ ಹುಕ್ಕೇರಿಮಠದ ಸದಾಶಿವ ಶ್ರೀಗಳು ಆಶೀರ್ವಚನ ನೀಡಿದರು. ಕಾರ್ಯಕ್ರಮದಲ್ಲಿ ಎಸ್.ಎಫ್.ಎನ್.ಗಾಜೀಗೌಡ್ರ, ವಿ.ಎಂ.ಕಾಮರೆಡ್ಡಿ, ಅಶೋಕ ರೆಡ್ಡಿ, ಮಂಜಣ್ಣ ಮಾಗಡಿ, ಶೇಖರಪ್ಪ ರಡ್ಡೇರ, ಪರಶುಪ್ಪ ರಡ್ಡೇರ, ಆರ್.ಬಿ.ದೊಡ್ಡಗೌಡ್ರ, ವಿಯ ರೆಡ್ಡಿ, ಭರಮರೆಡ್ಡಿ, ವಿಕಲಚೇತನರ ಕಲ್ಯಾಣಾಧಿಕಾರಿ ಮಲ್ಲಿಕಾರ್ಜುನ ಮಠದ ಇತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link