ದಾವಣಗೆರೆ:
ರಸ್ತೆಯ ಡಿವೈಡರ್ ಗೆ ಕಾರ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಜಿಲ್ಲೆಯ ರಾಜನಹಳ್ಳಿ ಬಳಿ ಇಂದು ನಡೆದಿದೆ.
ಮೃತರನ್ನು ಗದಗ ಮೂಲದ ಚಾಲಕ ವೀರೇಶ್ (35) ಹಾಗೂ ಬಾಬುಗೌಡ (65) ಎಂದು ಗುರುತಿಸಲಾಗಿದ್ದು. ಈ ಅವಘಡದಲ್ಲಿ ಶ್ರೀದೇವಿ, ಇಮ್ರಾ ಬಾಯಿ ಹಾಗೂ ನಾಲ್ಕು ವರ್ಷದ ಬಾಲಕ ರಿಷಬ್ ಗಾಯಗೊಂಡಿದ್ದು ಅವರನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ವೇಗವಾಗಿ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದ್ದೇ ಈ ಅನಾಹುತ ಕಾರಣ ಎನ್ನಲಾಗಿದೆ ಸುದ್ದಿ ತಿಳಿದ ತಕ್ಷಣ ಪೊಲೀಸರು ಸ್ಥಳಕಾಗಮಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ ಮತ್ತು ಈ ಕುರಿತು ಹರಿಹರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
