ಎರಡನೆ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯ ಕಾರ್ಯಕ್ರಮ

ಚೇಳೂರು  

     ಗ್ರಾಮ ಪಂಚಾಯತಿ ಮಟ್ಟದಿಂದ ಸಾರ್ವಜನಿಕರಿಗೆ ಸೀಗುವ ಹಲವು ಯೋಜನೆಗಳ ಸೌಲಾಭ್ಯವನ್ನು ಪಡೆದುಕೊಳ್ಳುವುದು ಸಾರ್ವಜನಿಕರ ಹಕ್ಕಗಿದೆ. ಅರ್ಹ ಪಲಾನುಭವಿಗಳು ಸೂಕ್ತ ದಾಖಲೆಗಳನ್ನು ನೀಡಿ ಸೌಲಾಭ್ಯಗಳನ್ನು ಪಡೆಯಬಹುದು ಎಂದು ಗ್ರಾಪಂ ಅದ್ಯಕ್ಷೆ ಗಂಗಮ್ಮ ತಿಳಿಸಿದರು .

     ಇವರು ಚೇಳೂರು ಗ್ರಾಮ ಪಂಚಾಯತಿ ಅವರಣದಲಿ 2018-19ನೇ ಸಾಲಿನ ಮಹಾತ್ಮಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಎರಡನೆ ಹಂತದ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ ಉದ್ಯೋಗ ಖಾತರಿ ಯೋಜನೆಯಲ್ಲಿ ಅರ್ಹ ಪಲಾನುಭವಿಗಳು ಕೆಲಸದ ಬಗ್ಗೆ ಅರ್ಜಿ ನೀಡಿದರೆ ಅಂತಹ ಕುಟುಂಬಗಳಿಗೆ ಕೆಲಸವನ್ನು ಹಂತ ಹಂತವಾಗಿ ನೀಡಲಾಗುತ್ತದೆ. ಇದರಲಿ ಜಮೀನಿನಲ್ಲಿ ಬರುವಂತಹ ಕೆಲಸಗಳು, ಮನೆ, ಶೌಚಾಲಯ, ಹಾಗೂ ರೈತರಿಗೆ ಅನಕೂಲವಾಗುವತಂಹ ಹಲವು ಕೃಷಿ ಚಟುವಟಿಕೆಗಳಿಗೆ ಪ್ರಯೋಜನವನ್ನು ಸಹ ರೈತರು ಇದರ ಮುಖಾಂತರ ಪಡೆದುಕೊಳ್ಳ ಬಹುದು ಎಂದರು .

      ಸಾಮಾಜಿಕ ಲೆಕ್ಕ ಪರಿಶೋಧಕ ಹೋನ್ನಪ್ಪನವರು ಮಾತನಾಡುತ್ತ ಅರ್ಹ ಪಲಾನುಭವಿಗಳು ಈ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲಿ ಹಲವು ಅನುಕೂಲಗಳನ್ನು ಪಡೆಯಬಹುದು. ಅದರ ಬಗ್ಗೆ ಸಂಬಂದ ಪಟ್ಟವರಿಂದ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಸೌಲಾಭ್ಯಯನ್ನು ಪಡೆಯಿರಿ ಎಂದರು.

      ಈ ಕಾರ್ಯಕ್ರಮದಲಿ ಉಪಾಧ್ಯಕ್ಷೆ ನಾಗರತ್ನಮ್ಮ,ಚೇಳೂರಿನ ವೈದ್ಯಾಧಿಕಾರಿ ಪೂಜ, ಉದ್ಯೋಗ ಖಾತರಿ ಯೋಜನೆಯ ಇಂಜಿನಿಯರ್ ಲಾವಣ್ಯ, ಪಿಡಿಒ. ಸಿದ್ದೇಶ್ವರ್, ಶಿಶು ಅಭಿವೃದ್ದಿ ಇಲಾಖೆ ಮೆಲ್ವಿಚಾರಕಿ ಲೀಲಾವತಿ,ಪಶುವೈದ್ಯಾಧಿಕಾರಿ ಶಂಕರಪ್ಪ, ಗ್ರಾಪಂ ಸದಸ್ಯ ಸಿ.ಎನ್ ವೆಂಕಟೇಶ್, ಎಸ್.ಎಮ್. ಶಿವಕುಮಾರ್, ಶಾರದಮ್ಮ ಹಾಗೂ ಇತರ ಸದಸ್ಯರು.ಸಿಬ್ಬಂದಿಗಳು ಸಾರ್ವಜನಿಕರು ಭಾಗವಹಿಸಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link