ಬೆಂಗಳೂರು
ಠಾಣಾಧಿಕಾರಿಗಳ ಗಮನಕ್ಕೆ ತಾರದೇ ಲಾಡ್ಜ್‍ನಲ್ಲಿ ಯುವತಿಯರ ಜೊತೆಗಿದ್ದ ಇಬ್ಬರು ಯುವಕರನ್ನು ಅಕ್ರಮವಾಗಿ ಠಾಣೆಗೆ ಕರೆತಂದು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿ ಕರ್ತವ್ಯ ಲೋಪವೆಸಗಿದ ನೆಲಮಂಗಲದ ನಾಲ್ವರು ಮಂದಿ ಪೊಲೀಸ್ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಕರ್ತವ್ಯ ಲೋಪವೆಸಗಿದ ನೆಲಮಂಗಲ ಪಟ್ಟಣ ಠಾಣೆ ಪೇದೆಗಳಾದ ಚನ್ನೇಗೌಡ, ಬಸವರಾಜು ಜೀಪು ಚಾಲಕ ಜರೀಫ್, ಗ್ರಾಮಾಂತರ ಠಾಣೆ ಕಾನ್‍ಸ್ಟೇಬಲ್ ಗಿರಿಜೇಶ್‍ನನ್ನು ಸಸ್ಪೆಂಡ್ ಮಾಡಿ ಗ್ರಾಮಾಂತರ ಎಸ್‍ಪಿ ಶಿವಕುಮಾರ್ ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.
ಕಳೆದ ಜ.4ರಂದು ನೆಲಮಂಗಲದ ಭೈರವ ಲಾಡ್ಜ್‍ನಲ್ಲಿ ಇಬ್ಬರು ಯುವಕರು, ಇಬ್ಬರು ಯುವತಿಯರು ಎರಡು ರೂಂ ಮಾಡಿ ಹೊರಗಿನಿಂದ ಊಟ ತಂದು ಒಂದೇ ರೂಮ್‍ನಲ್ಲಿ ಕುಳಿತು ನಾಲ್ವರೂ ಒಟ್ಟಾಗಿ ಊಟ ಮಾಡುತ್ತಿದ್ದಾಗ ಅಮಾನತುಗೋಮಡಿರುವ ಸಿಬ್ಬಂದಿ ರೂಂಗೆ ನುಗ್ಗಿ ಇಬ್ಬರು ಯುವತಿಯರನ್ನು ಕೊಠಡಿಯಲ್ಲೇ ಕೂಡಿಹಾಕಿ ಇಬ್ಬರು ಯುವಕರನ್ನು ಠಾಣೆಗೆ ಕರೆದೊಯ್ದಿದ್ದರು.
ಠಾಣೆಯಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರದೆ ಕೆಲ ಕಾಲ ಈ ಇಬ್ಬರು ಯುವಕರನ್ನು ಠಾಣೆಯಲ್ಲೇ ಕೂರಿಸಿ ನಂತರ ಬಿಟ್ಟು ಕಳುಹಿಸಿದ ಈ ಇಬ್ಬರು ಕಾನ್‍ಸ್ಟೇಬಲ್‍ಗಳು ಮತ್ತು ಲಾಡ್ಜ್‍ಗೆ ಹೋಗಿ ಯುವತಿಯರಿದ್ದ ಕೊಠಡಿಯಲ್ಲಿ ಒಂದು ಗಂಟೆಯಿದ್ದು ನಂತರ ಕಾರು ಮಾಡಿ ಯುವತಿಯರನ್ನು ಕಳುಹಿಸಿದ್ದರು ಎಂಬ ಆರೋಪ ಕೇಳಿ ಬಂದಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಎಸ್‍ಪಿ ಶಿವಕುಮಾರ್ ಅವರು ಡಿವೈಎಸ್‍ಪಿ ಪಾಂಡುರಂಗ ಅವರಿಗೆ ಮಾಹಿತಿ ನೀಡಲು ಸೂಚಿಸಿದ್ದರು.ಡಿವೈಎಸ್‍ಪಿ ಅವರು ವೃತ್ತ ನಿರೀಕ್ಷಕರಿಗೆ ಈ ಬಗ್ಗೆ ವರದಿ ಕೇಳಿದ್ದರು.ವೃತ್ತ ನಿರೀಕ್ಷಕರು ಘಟನೆ ಸಂಬಂಧ ಲಾಡ್ಜ್‍ಗೆ ತೆರಳಿ ಅಲ್ಲಿನ ಸಿಸಿ ಟಿವಿ ಪರಿಶೀಲಿಸಿ ಮ್ಯಾನೇಜರ್‍ನಿಂದ ಮಾಹಿತಿ ಪಡೆದು ವರದಿ ಸಂಗ್ರಹಿಸಿ ಡಿವೈಎಸ್‍ಪಿ ಅವರಿಗೆ ನೀಡಿದ್ದರು.
ಡಿವೈಎಸ್‍ಪಿಯಿಂದ ವರದಿ ಪಡೆದ ಎಸ್‍ಪಿನ ಅವರಿಗೆ ಹಿರಿಯ ಅಧಿಕಾರಿಗಳ ಗಮನಕ್ಕೂ ತರದೆ ಇಬ್ಬರು ಯುವಕರನ್ನು ಠಾಣೆಗೆ ಕರೆತಂದು ನಂತರ ಬಿಟ್ಟು ಕಳುಹಿಸಿರುವುದು ಪತ್ತೆಯಾಗಿ ಗುಪ್ತಚರ ಕಾನ್‍ಸ್ಟೇಬಲ್ ಚನ್ನೇಗೌಡ ಹಾಗೂ ಜೀಪು ಚಾಲಕ ಜರೀಫ್‍ರನ್ನು ಅಮಾನತು ಮಾಡಿದ್ದರಲ್ಲದೆ, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನ್‍ಸ್ಟೇಬಲ್‍ಗಳಾದ ಬಸವರಾಜು ಹಾಗೂ ಗಿರಿಜೇಶ್‍ನನ್ನು ಅಮಾನತು ಮಾಡಿ ಎಸ್‍ಪಿ ಅವರು ಇಲಾಖಾ ವಿಚಾರಣೆಗೆ ಆದೇಶಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
