ಬಳ್ಳಾರಿ
ವಿಜಯಪುರದ ನಿಗದಿತ ಕಾರ್ಯಕ್ರಮಗಳನ್ನು ಮುಗಿಸಿಕೊಂಡು ಮಂಡ್ಯ ಜಿಲ್ಲೆಯ ಮದ್ದೂರುಗೆ ತೆರಳುವ ಮಾರ್ಗದಲ್ಲಿ ಮಾನ್ಯ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ತೋರಣಗಲ್ಲುವಿನಲ್ಲಿರುವ ಜಿಂದಾಲ್ ಏರ್‍ಪೋರ್ಟ್‍ಗೆ ಬಂದಿಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಜಿಲ್ಲಾಡಳಿತದ ಪರವಾಗಿ ಜಿಲ್ಲಾಧಿಕಾರಿ ಡಾ.ವಿ.ರಾಮ್‍ಪ್ರಸಾತ್ ಮನೋಹರ್, ಎಸ್ಪಿ ಅರುಣ ರಂಗರಾಜನ್ ಅವರು ಸ್ವಾಗತ ಕೋರಿದರು. ವಿಜಯನಗರ ಶಾಸಕ ಆನಂದಸಿಂಗ್ ಅವರು ಸಿಎಂ ಅವರನ್ನು ಇದೇ ಸಂದರ್ಭದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಸಿಎಂ ಅವರು ಶಾಸಕ ಆನಂದಸಿಂಗ್ ಅವರ ಬುಜದ ಮೇಲೆ ಕೈ ಹಾಕಿ ಅವರ ಕ್ಷೇಮ ಹಾಗೂ ಇನ್ನೀತರ ವಿಷಯಗಳ ಕುರಿತು ವಿಚಾರಿಸಿದ್ದು ಗಮನಸೆಳೆಯಿತು.
ನಂತರ ಅವರು ಜಿಲ್ಲಾ ಪೊಲೀಸ್ ವತಿಯಿಂದ ಗೌರವ ವಂದನೆ ಸ್ವೀಕರಿಸಿದರು. ಇದಾದ ನಂತರ ಮುಖ್ಯಮಂತ್ರಿಗಳು ಅಲ್ಪ ಉಪಹಾರ ಸೇವಿಸಿದರು. ನಂತರ ಅವರು ಜಿಲ್ಲಾಧಿಕಾರಿ ಡಾ.ವಿ.ರಾಮ್‍ಪ್ರಸಾತ್ ಮನೋಹರ್ ಅವರಿಂದ ರೈತರ ಸಾಲಮನ್ನಾ ಸೇರಿದಂತೆ ವಿವಿಧ ವಿಷಯಗಳ ಕುರಿತು ಅಗತ್ಯ ಮಾಹಿತಿಯನ್ನು ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಪಡೆದುಕೊಂಡರು. ಎಸ್ಪಿ ಅವರಿಂದಲೂ ಅನೇಕ ಮಾಹಿತಿಗಳನ್ನು ಈ ಸಂದರ್ಭದಲ್ಲಿ ಪಡೆದರು ಮತ್ತು ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ನಂತರ ಅವರು ಮದ್ದೂರಿನತ್ತ ಪಯಣ ಬೆಳೆಸಿದರು.ಮುಖ್ಯಮಂತ್ರಿಗಳೊಂದಿಗೆ ಸಿಎಂ ಕಾರ್ಯದರ್ಶಿ ಕೃಷ್ಣಯ್ಯಶೆಟ್ಟಿ ಇದ್ದರು.ಈ ಸಂದರ್ಭದಲ್ಲಿ ಎಎಸ್ಪಿ ಲಾವಣ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ಶಿವಪ್ಪ ಸೇರಿದಂತೆ ಅನೇಕ ಮುಖಂಡರು ಹಾಗೂ ಅಧಿಕಾರಿಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ