ವಾಲ್ಮೀಕಿ ಸಮಾಜ ಕುರಿತು ಅವಹೇಳನ : ಖಂಡನೆ.

ಹೊಸಪೇಟೆ :

       ಸಾಮಾಜಿಕ ಜಾಲತಾಣಗಳಲ್ಲಿ ವಾಲ್ಮೀಕಿ ಸಮಾಜ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸಿ ಅಪ್‍ಲೋಡ್ ಮಾಡಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ವಾಲ್ಮೀಕಿ ಸಮುದಾಯ ತಾಲೂಕಿನ ಕಮಲಾಪುರ ಪಟ್ಟಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

       ಬಳಿಕ ಹಂಪಿ ಡಿವೈಎಸ್‍ಪಿಯವರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ವಾಲ್ಮೀಕಿ ಸಮಾಜದ ಬಗ್ಗೆ ಕೆಲವು ಕಿಡಿಗೇಡಿಗಳು ಅಶ್ಲೀಲ ಹಾಗು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದು ನಮ್ಮ ಸಮಾಜದ ಘನತೆ, ಗೌರವಕ್ಕೆ ಧಕ್ಕೆಯಾಗಿದ್ದು, ಕೂಡಲೇ ಇಂಥ ಕಿಡಿಗೇಡಿಗಳನ್ನು ಬಂಧಿಸಿ, ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

      ಈ ಸಂಧರ್ಭದಲ್ಲಿ ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಕಮಲಾಪುರ ಘಟಕದ ಅಧ್ಯಕ್ಷ ಗಂಗಪ್ಪ, ಪದಾಧಿಕಾರಿಗಳಾದ ವೀರಭದ್ರನಾಯಕ, ಕುಪೇಂದ್ರನಾಯಕ,ಭರ್ಮಪ್ಪ, ಗರಡಿ ಷಣ್ಮುಖ, ಪರಶುರಾಮ, ಗುರು, ಅಂಬರೀಶ, ತಾರಿಹಳ್ಳಿ ವೆಂಕಟೇಶ, ಕಿರಣ, ನಾಗಯ್ಯ, ಸಂಡೂರಪ್ಪ,ಮಾಳಗಿ ರಾಮಸ್ವಾಮಿ, ನಾಗರಾಜ, ಹಳ್ಳಿ ರಾಘವೇಂದ್ರ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

Recent Articles

spot_img

Related Stories

Share via
Copy link