ಪೊಲೀಸ್ ತರಬೇತಿ ಕೇಂದ್ರದಲ್ಲಿ ದಂತ ತಪಾಸಣೆ

ಚಿತ್ರದುರ್ಗ :

       ರೋಟರಿ ಕ್ಲಬ್ ಚಿನ್ಮೂಲಾದ್ರಿ ಮತ್ತು ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ಸಹಯೋಗದಲ್ಲಿ ಐಮಂಗಲದ ಪೆಲೀಸ್ ತರಬೇತಿ ಕೇಂದ್ರದಲ್ಲಿ ದಂತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

         ರೋಟರಿ ಕ್ಲಬ್ ಚಿನ್ಮೂಲಾದ್ರಿಯ ಅಧ್ಯಕ್ಷ ಡಾ.ಈ. ಚಿತ್ರಶೇಖರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತ, ಈ ತರಬೇತಿ ಕೇಂದ್ರದೊಂದಿಗೆ ಅವಿನಾಭಾವ ಸಂಬಂಧವಿದೆ. ಕಾರಣ ಇಲ್ಲಿ ನಾನು 5ವರ್ಷಗಳ ಕಾಲ ಉಪನ್ಯಾಸ ಮಾಡಲು ಬರುತ್ತಿದ್ದೆ. ಆಗ ಈಗಿನಂತೆ ಸುಸಜ್ಜಿತವಾದ ಸಭಾಂಗಣ ಇರಲಿಲ್ಲ. ಒಂದು ಷಾಮಿಯಾನ ಹಾಕಿ ಅದರ ಕೆಳಗೆ ಪೆಲೀಸ್ ತರಬೇತಿ ಕೇಂದ್ರವನ್ನು ಪ್ರಾರಂಭ ಮಾಡಿದೆವು.

          ಎಸ್.ಜೆ.ಎಂ. ದಂತ ಕಾಲೇಜು ವತಿಯಿಂದ ತಮಗೆಲ್ಲ ದಂತ ತಪಾಸಣೆ ಮಾಡಲು ಬಂದಿದ್ದಾರೆ. ಈ ಶಿಬಿರ ಯಶಸ್ವಿಯಾಗಲಿ. ಬಸವೇಶ್ವರ ವೈದ್ಯಕೀಯ ಆಸ್ಪತ್ರೆಯಿಂದ ಸಹ ಇಲ್ಲಿಗೆ ಒಂದು ತಂಡವನ್ನು ಕಳುಹಿಸಿ ಆರೋಗ್ಯ ತಪಾಸಣೆ ಮಾಡಿಸಲಾಗುವುದು ಎಂದರು.
ತರಬೇತಿ ಶಿಬಿರದಲ್ಲಿರುವ 400ಕ್ಕು ಹೆಚ್ಚು ಶಿಬಿರಾರ್ಥಿಗಳಿಗೆ ದಂತ ತಪಾಸಣೆ ಮಾಡಲಾಯಿತು.

         ತರಬೇತಿ ಕೇಂದ್ರದ ಎಸ್ಪಿ ಮತ್ತು ಪ್ರಾಂಶುಪಾಲ ಪಿ.ಪಾಪಣ್ಣ, ಕಾನೂನು ಅಧಿಕಾರಿಗಳಾದ ಸತೀಶ್, ಇನ್ಸ್‍ಪೆಕ್ಟರ್‍ಗಳಾದ ವರದರಾಜ್, ಪರಶುರಾಮ್, ಯಾದವ್ ಹಾಗು ಎಸ್.ಜೆ.ಎಂ. ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲದ ಡಾ ಗೌರಮ್ಮ , ಶ್ರೀಮತಿ ಗಾಯತ್ರಿ ಶಿವರಾಂ, ಡಾ ಜಯಚಂದ್ರ, ಡಾ ಹರಿಣಿ, ಡಾ ಸುಧಾ ಜಗದೀಶ್, ಡಾ ಸಚಿನ್ ನಾಯರ್, ಡಾ ಪ್ರೀತಿ, ನಾಗರಾಜ್ ಸಂಗಮ್, ಬಸವರಾಜಪ್ಪ, ಚೆಲುವರಾಜು, ಲಿಂಗರಾಜ್ ಮತ್ತಿತರರು ಉಪಸ್ಥಿತರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap