ಒಕ್ಕಲಿಗ ಸಮಾಜದ ಚುನಾವಣೆ: ಪ್ರಚಾರ ಕಾರ್ಯ ಆರಂಭ

ಪಾವಗಡ

        ಒಕ್ಕಲಿಗ ಸಮಾಜದ ಏಳಿಗೆಗಾಗಿ ಶ್ರಮವಹಿಸುವ ಅಭ್ಯರ್ಥಿಗಳನ್ನು ಮುಂದೆ ನಡೆಯುವ ಸಂಘದ ಚುನಾವಣೆಯಲ್ಲಿ ಮತದಾರರು ಸದಸ್ಯರನ್ನು ಆಯ್ಕೆ ಮಾಡಬೇಕಾಗಿದೆ ಎಂದು ಒಕ್ಕಲಿಗರ ಸಂಘದ ಅಕಾಂಕ್ಷಿ ಅಭ್ಯರ್ಥಿಯಾದ ಆರ್.ಹನುಮಂತರಾಯಪ್ಪರವರು ತಿಳಿಸಿದರು.

         ಅವರು ಭಾನುವಾರ ಪಟ್ಟಣದ ನಿರೀಕ್ಷಣಾ ಮಂದಿರದಲ್ಲಿ ಏರ್ಪಡಿಸಿದ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ ಕಳೆದ ಚುನಾವಣೆಯಲ್ಲಿ ಸ್ವರ್ಧಿಸಿದ ಸಂದರ್ಭದಲ್ಲಿ ಕೆಲ ಅಭ್ಯರ್ಥಿಗಳು ನನ್ನ ಮೇಲೆ ಒಕ್ಕಲಿಗನಲ್ಲ ಎಂಬ ಸುಳ್ಳು ಹೇಳಿಕೆ ನೀಡಿ ಮತದಾರರನ್ನು ತಪ್ಪು ಮಾಹಿತಿಯಿಂದ ನಾನು ಸ್ವಲ್ಪ ಮತಗಳ ಅಂತರದಲ್ಲಿ ಸೊಲುಂಡಿದ್ದು,ಮುಂದೆ ನಡೆಯುವ ಚುನಾವಣೆಯಲ್ಲಿ ಸ್ವರ್ಧಿಸಿ ಜನಾಂಗದ ಅಭಿವೃದ್ಧಿಗೆ ಶ್ರಮವಹಿಸಲು ನಾನು ಮುಂದಾಗಿದ್ದೇನೆ ಜನಾಂಗದ ಮತದಾರರು ಆಶ್ರೀವಾದ ಮಾಡಿದರೆ ಸಂಘದ ಏಳಿಗೆಗಾಗಿ ಶ್ರಮಿಸುದಾಗಿ ತಿಳಿಸಿದರು.

         ತುಮಕೂರು ಜಿಲ್ಲೆಯಲ್ಲಿ 32 ಸಾವಿರ ಒಕ್ಕಲಿಗರ ಮತದಾರರು ಇದ್ದು, ಪಾವಗಡದಲ್ಲಿ ಈ ಸಾಲಿಗೆ ಹೆಚ್ಚಿನದಾಗಿ 560 ಜನ ಮತದಾರಿದ್ದು, ಈಗಾಗಲೇ ಸಂಘದ ಚುನಾವಣೆ ಪ್ರಕ್ರೀಯೆ ನಡೆಯುತ್ತಿದ್ದು,ದಿನಾಂಕ ಘೋಷಣೆ ಮಾತ್ರ ಬಾಕಿ ಇದೆ.ಜನಾಂಗ ಶೈಕ್ಷಣಿಕವಾಗಿ,ಆರ್ಥಿಕವಾಗಿ, ರಾಜಕೀಯವಾಗಿ ಜಾಗೃತಿಗೊಳಿಸಲು ನಿಸ್ವಾರ್ಥ ಮನೋಭಾವುಳ್ಳ ಹಾಗೂ ಜನಾಂಗಕ್ಕೆ ದುಡಿಯುವ ಅಭ್ಯರ್ಥಿಗಳನ್ನು ಸಂಘಕ್ಕೆ ಆಯ್ಕೆ ಮಾಡಬೇಕಾಗಿದೆ ಎಂದು ಮತದಾರರಿಗೆ ಕಿವಿ ಮಾತು ಹೇಳಿದ್ದಾರೆ.

          ಜಿಲ್ಲೆಯಲ್ಲಿ ಉತ್ತಮವಾದ ಒಕ್ಕಲಿಗರ ಭವನ ನಿರ್ಮಾಣ ಮಾಡಬೇಕು, ತಾಲ್ಲೂಕು ಮಟ್ಟದಲ್ಲಿ ಮಹಿಳಾ ವಿದ್ಯಾರ್ಥಿಗಳಿಗೆ ಹಾಸ್ಟೇಲ್ ಸೌಲಭ್ಯ,ಜಿಲ್ಲೆಯಲ್ಲಿ ನಮ್ಮದೇ ಆದ ಅಸ್ವತ್ರೆ ಕಟ್ಟಬೇಕು,ಬಡ ಮಕ್ಕಳಿಗೆ ವಿದ್ಯಾಭ್ಯಾಸ ಮಾಡಬೇಕು ಹಾಗೂ ತುಮಕೂರು ಜಿಲ್ಲೆಯಲ್ಲಿ ಜನಾಂಗಕ್ಕಾಗಿ ವಿಶ್ವವಿದ್ಯಾಲಯ ನಿರ್ಮಾಣ ಮಾಡಬೇಕೆಂಬ ಅಸೆ ನನ್ನಗೆ ಇದ್ದು,ಸೇವೆಗಾಗಿ ನನ್ನನು ಬರುವ ಚುನಾವಣೆಯಲ್ಲಿ ಮತದಾರರು ಆಯ್ಕೆ ಮಾಡಬೇಕಾಗಿದೆ ಎಂದರು.

          ಈ ಹಿಂದ ಒಕ್ಕಲಿಗರ ಸಂಘದ ಚುನಾವಣೆಗೆ ಮತ ಹಾಕಲು ತುಮಕೂರಿಗೆ ಬರಬೇಕಾಗಿತ್ತು,ಈಗ ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿಯೂ ಜನಾಂಗದ ಮತದಾರರು ಹೆಚ್ಚಾಗಿದ್ದು,2019 ನೇ ಸಾಲಿನಲ್ಲಿ ಸಂಘದ ಚುನಾವಣೆ ನಡೆಯುವ ಸಂದರ್ಭದಲ್ಲಿ ತಾಲ್ಲೂಕು ಕೇಂದ್ರಗಳ ಸ್ಥಾನದಲ್ಲಿ ಭೂತ್ ವ್ಯವಸ್ಥೆ ಕಲ್ಪಿಸಲು ಚುನಾವಣೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ತಾಲ್ಲೂಕು ಒಕ್ಕಲಿಗರ ಸಂಘದ ಖಜಾಂಚಿ ಮಹೇಶ್,ಮಧುಗಿರಿ ತಾ.ಸಂಘದ ನಿರ್ದೇಶಕರಾದ ಕಾಳೇಗೌಡ,ಪಾವಗಡ ತಾಲ್ಲೂಕು ಒಕ್ಕಲಿಗ ನೌಕರರ ಸಂಘದ ಉಪಾಧ್ಯಕ್ಷ ಅ.ಮು.ವೀರನಾಗಪ್ಪ ಹಾಜರಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link