ತುಮಕೂರು:
ಪ್ರಾಣಿಪ್ರೀತಿ ಒಳೆಯದು ಆದರೆ ಅದಕ್ಕೂ ಮಿತಿಗಳಿರುತ್ತವೇ ಅದು ಮನುಷ್ಯನೇ ಆಗಲಿ ಪ್ರಾಣಿಯೇ ಆಗಲಿ ಮಿತಿ ಮೀರಿದರೆ ಆಪತ್ತು ಕಟ್ಟಿಟ್ಟ ಬುತ್ತಿ ಈ ಪೀಟಿಕೆಗೆ ಕಾರಣವಾಗಿದ್ದು ಮದವೇರಿದ ಆನೆಯೊಂದು ತನಗಾಗಿ ಬಾಳೆ ಹಣ್ಣು ತಂದ ಆಟೋಚಾಲಕನ ತಲೆಯನ್ನೇ ಜಗಿದಿರವ ಹೃದಯವಿದ್ರಾವಕ ಘಟನೆ ಕೋರಾ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಜರುಗಿದೆ. ಈ ಘಟನೆಯಲ್ಲಿ ಆಟೋ ಚಾಲಕ ಪ್ರತಾಪ್ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಪ್ರತಾಪ್ ಮೊದಲು ಆನೆಗೆ ಬಾಳೆಹಣ್ಣು ಕೊಟ್ಟಿದ್ದಾನೆ. ಸೊಂಡಿಲಿನಲ್ಲಿ ಬಾಳೆಹಣ್ಣು ಸ್ವೀಕರಿಸಿದ ಆನೆ ಬಾಳೆ ಹಣ್ಣಿನೊಂದಿಗೆ ಪ್ರತಾಪನ ತಲೆ ಸಹಿತ ಬಾಯಿಗಿಟ್ಟು ಜಗಿದಿದೆ. ಎರಡು ಬಾರಿ ಜಗಿದ ಪರಿಣಾಮ ತಲೆಗೆ ಪೆಟ್ಟಾಗಿದ್ದು, ಕಿವಿ ಮೂಗು ಕಣ್ಣಿನಿಂದ ರಕ್ತ ಸ್ರಾವವಾಗಿದೆ. ಬಳಿಕ ಯುವಕನನ್ನು ಆನೆ ಎಸೆದಿದೆ. ತಕ್ಷಣ ಸ್ಥಳೀಯರು ಚಿಂತಾಜನಕ ಸ್ಥಿತಿಯಲ್ಲಿದ್ದ ಪ್ರತಾಪನನ್ನು ಸಿದ್ದಗಂಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅಂದಹಾಗೆ ಈ ಸಾಕಾನೆ ಪ್ರಬಾಸ್ ಸರ್ಕಸ್ ಕಂಪನಿಗೆ ಸೇರಿದ್ದಾಗಿದೆ. ಸರ್ಕಸ್ ಕಂಪನಿ ವಿರುದ್ಧ ದೂರು ನೀಡಲು ಯುವಕ ಪ್ರತಾಪ್ ಕುಟುಂಬದವರು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ