ಹಾವೇರಿ
12 ಕೋಟಿ ರೈತರಿಗೆ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿಯಲ್ಲಿ ವಾರ್ಷಿಕ 6 ಸಾವಿರ ರೂಪಾಯಿ ರೈತರ ಖಾತೆಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಶೇ 50 ರಷ್ಟು ಗೌರವ ಧನ ಹೆಚ್ಚಳ, ತೆರಿಗೆ ಆದಾಯ ಮಿತಿ 2.5 ಲಕ್ಷದಿಂದ 5ಲಕ್ಷಕ್ಕೆ ಏರಿಕೆ, ಗೃಹ ಸಾಲಕ್ಕೆ ತೆರಿಗೆ ವಿನಾಯಿತಿ, ಮಾನವ ರಹಿತ ರೈಲ್ವೆ ಕ್ರಾಸಿಂಗ್ ವ್ಯವಸ್ಥೆ, ಲಕ್ಷ ಗ್ರಾಮಗಳ ಡಿಜಿಟಲಿಕರಣ, ಗ್ರಾಜುಟಿ ಮೊತ್ತ 10ಲಕ್ಷದಿಂದ 30 ಲಕ್ಷಕ್ಕೆ ಏರಿಕೆ, ಕಿಸಾನ್ ಕ್ರೆಡಿಟ್ ಯೋಜನೆ, ವಿದ್ಯಾರ್ಥಿಗಳ ಶೈಕ್ಷಣಿಕ ಸಾಲಕ್ಕೆ ತೆರಿಗೆ ವಿನಾಯಿತಿ, ಕಾರ್ಮಿಕ ಪಿಂಚಣಿ ಯೋಜನೆಯನ್ನು ಮೂರು ಸಾವಿರಕ್ಕೆ ಏರಿಕೆ ಮಾಡಿದಿರುವುದು ಸೇರಿದಂತೆ ಹಲವಾರು ಆರ್ಥಿಕ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವ ಮೂಲಕ ಶುಕ್ರವಾರ ಕೇಂದ್ರ ಹಣಕಾಸು ಸಚಿವ ಪಿಯೂಷ್ ಗೊಯಲ್ ಎಲ್ಲರಿಗೂ ಪ್ರಿಯವಾಗುವ ಮುಂಗಡ ಪತ್ರ ಮಂಡಿಸಿದ್ದಾರೆ.
ಯಾವುದೇ ವರ್ಗದ ಜನರು ಬೇಸರ ಪಟ್ಟುಕೊಳ್ಳಲು ಅವಕಾಶವಿಲ್ಲದಂತೆ ಈ ಬಾರಿಯ ಕೇಂದ್ರ ಬಜೆಟ್ ಮಂಡಿಸಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ದೂರ ದೃಷ್ಟಿ ಹಾಗೂ ಹಣಕಾಸು ಸಚಿವರ ಬಡವರ ಪರ ಕಾಳಜಿಗೆ ಇದು ಉತ್ತಮ ನಿದರ್ಶನ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ