ಹೊನ್ನಾಳಿ:
ಅಗ್ನಿ ಆಕಸ್ಮಿಕದಿಂದ 1.15 ಲಕ್ಷ ರೂ.ಗಳಷ್ಟು ಮೌಲ್ಯದ ಭತ್ತ, ರಾಗಿ ಹುಲ್ಲು, ಮೆಕ್ಕೆಜೋಳದ ಸೊಪ್ಪೆ ಸುಟ್ಟು ಭಸ್ಮವಾಗಿರುವ ದುರ್ಘಟನೆ ತಾಲೂಕಿನ ಉಜ್ಜನಿಪುರ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ.
ಉಜ್ಜನಿಪುರ ಗ್ರಾಮದ ಪುಟ್ಟಪ್ಪನವರ 4 ಲೋಡ್ ಭತ್ತದ ಹುಲ್ಲು, 3 ಲೋಡ್ ಮೆಕ್ಕೆಜೋಳದ ಸೊಪ್ಪೆ, 1 ಲೋಡ್ ರಾಗಿ ಹುಲ್ಲು ಸೇರಿ ಒಟ್ಟು 80 ಸಾವಿರ ರೂ.ಗಳಷ್ಟು ಮೌಲ್ಯದ ಜಾನುವಾರು ಮೇವು, ದಾಸಯ್ಯನವರ 2 ಲೋಡ್ ಭತ್ತದ ಹುಲ್ಲು, 1 ಲೋಡ್ ಮೆಕ್ಕೆಜೋಳದ ಸೊಪ್ಪೆ ಸೇರಿ ಒಟ್ಟು 35 ಸಾವಿರ ರೂ.ಗಳಷ್ಟು ಮೌಲ್ಯದ ಮೇವು ನಾಶವಾಗಿದೆ. ಜಾನುವಾರುಗಳಿಗೋಸ್ಕರ ಇವರು ಹುಲ್ಲನ್ನು ಇತ್ತೀಚೆಗೆ ಖರೀದಿಸಿದ್ದರು.
ಶೇ.75ರಷ್ಟು ಹುಲ್ಲು ಸುಟ್ಟಿದೆ. ಉಳಿದ ಶೇ.25ರಷ್ಟು ಹುಲ್ಲು ಹೊಗೆಯ ವಾಸನೆ ಹೊಂದಿರುವುದರಿಂದ ಜಾನುವಾರುಗಳು ಈ ಹುಲ್ಲು ತಿನ್ನುವುದಿಲ್ಲ. ಇದನ್ನು ತಿಪ್ಪೆಗೆ ಹಾಕಬೇಕು ಎಂದು ರೋದಿಸುತ್ತಾರೆ ಜನರು. ಈ ಕುರಿತ ಸಮಗ್ರ ಮಾಹಿತಿಯನ್ನು ಕಂದಾಯ ಇಲಾಖೆಗೆ ನೀಡಲಾಗಿದೆ ಎನ್ನುತ್ತಾರೆ ಉಜ್ಜನಿಪುರ ಗ್ರಾಮದ ನಟರಾಜ್.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ