ಶಿಕ್ಷಕರ ಕೊರತೆ : ಶಾಲೆ ಮುಚ್ಚಿ ಪ್ರತಿಭಟನೆಗೆ ಬಿ.ಜಿ.ಹಳ್ಳಿ ಜನರ ನಿರ್ಧಾರ

ಹಗರಿಬೊಮ್ಮನಹಳ್ಳಿ:

         ತಾಲೂಕಿನ ಬಾಚಿಗೊಂಡನಹಳ್ಳಿ 1ನೇ ಕಾಲೂನಿಯ ಸ.ಹಿ.ಪ್ರಾ.ಶಾಲೆಯಲ್ಲಿ ಶಿಕ್ಷಕರ ಕೊರತೆ ಹಾಗೂ ವಿವಿಧ ಬೇಡಿಕೆಗಳನ್ನು ಸರಿಪಡಿಸುವಂತೆ ಒತ್ತಾಯಿಸಿ, ಜನವರಿ 1ರಂದು ಶಾಲೆಯನ್ನು ಮುಚ್ಚುವ ಮೂಲಕ ಪ್ರತಿಭಟಿಸಲು ಬಾಚಿಗೊಂಡನಹಳ್ಳಿ ನಿರ್ಧರಿಸಿರುವ ಗ್ರಾಮಸ್ಥರು ಕ್ಷೇತ್ರ ಶಿಕ್ಷಣಾಧಿಕಾರಿ ಶೇಖರಪ್ಪ ಹೊರಪೇಟೆಯವರಿಗೆ ಮನವಿ ಸಲ್ಲಿಸಿದರು.

         75ವರ್ಷ ತುಂಬಿರುವ ಈ ಶಾಲೆಯಲ್ಲಿ 195 ವಿದ್ಯಾರ್ಥಿಗಳು ಅಭ್ಯಾಸಮಾಡುತಿದ್ದು, ಮುಖ್ಯಶಿಕ್ಷಕರು ಸೇರಿದಂತೆ ಒಟ್ಟು 8ಹುದ್ದೆಗಳಿದ್ದು, ಈಗ 6ಜನ ಶಿಕ್ಷಕರು ಕಾರ್ಯನಿರ್ವಹಿಸುತಿದ್ದಾರೆ. ಅದರಲ್ಲಿ ಒಬ್ಬರು ನಿಯೋಜನಿಯ ಮೇಲೆ ಬೇರೆ ಕಡೆ ಕರ್ತವ್ಯ ನಿರ್ವಹಿಸುತಿದ್ದಾರೆ. 1ರಿಂದ 7ನೇ ತರಗತಿಗಳನ್ನು ಹೊಂದಿರುವ ಈ ಶಾಲೆಯಲ್ಲಿ ಮುಖ್ಯ ಶಿಕ್ಷಕ ಸೇರಿದಂತೆ ಕೇವಲ 5ಜನ ಶಿಕ್ಷಕರು ಮಾತ್ರ ತರಗತಿಗಳನ್ನು ನೋಡಿಕೊಳ್ಳುತ್ತಿರುವುದರಿಂದ, ಶಾಲಾ ಗುಣಮಟ್ಟದ ಶಿಕ್ಷಣಕ್ಕೆ ತುಂಬ ತೊಂದರೆಯಾಗುತ್ತಿದೆ, ಶಾಲಾ ಶೌಚಾಲಯದ ಸಮಸ್ಯೆ, ಕಾಂಪೌಂಡ್ ನಿರ್ಮಾಣ ಮತ್ತು ಶಾಲಾ ಕಟ್ಟಡಗಳ ದುರಸ್ಥಿ ಮಾಡುವಂತೆ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ಮಾಡುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.

          ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಹೊಸೂರು ಭರಮಲಿಂಗಪ್ಪ, ಗ್ರಾಮದ ಮುತ್ಕೂರು ಲೋಕಪ್ಪ, ಕಡ್ಡಿ ಚನ್ನಪ್ಪ, ಸಜ್ಜಿ ಗಜೇಂದ್ರ ಹಾಗೂ ಎಚ್.ಮಾಯಪ್ಪ ಮತ್ತಿತರರು ಇದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link