ಹೊಸದುರ್ಗ:
ದೇಗುಲದ ವಿಚಾರಕ್ಕೆ ಸಂಬಂಧಿಸಿದಂತೆ ಹೊಸದುರ್ಗ ತಾಲೂಕು ಲಕ್ಕಿಹಳ್ಳಿ ಗ್ರಾಮದಲ್ಲಿ ಗುರುವಾರ ಸಂಜೆ ಗಲಾಟೆ ನಡೆದಿದೆ. ಏಕಾಏಕಿ ನಾಯಕ ಸಮುದಾಯದ ಯುವಕರು ಕುರುಬ ಸಮುದಾಯದ ಮಹಿಳೆಯರು ಸೇರಿದಂತೆ ಯುವಕರ ಮೇಲೆ ದೌರ್ಜನ್ಯ ಕಲ್ಲು, ದೊಣ್ಣೆಯಿಂದ ದಾಳಿ ಮಾಡಿ ಹಲ್ಲೆ ಮಾಡಿದ್ದಾರೆ. ಗಲಾಟೆಯಲ್ಲಿ ಮೂವತ್ತಕ್ಕೂ ಅಧಿಕ ಯುವಕರು ಗಾಯಗೊಂಡಿದ್ದಾರೆ.
ಲಕ್ಕಿಹಳ್ಳಿಯಲ್ಲಿ ಶತಮಾನಗಳ ಇತಿಹಾಸ ಇರುವ ಕುರುಬರ ಆರಾಧ್ಯಧೈವ ಮುದ್ದಲಿಂಗೇಶ್ವರ ಬೀರಲಿಂಗೇಶ್ವರ ದೇವರುಗಳಿವೆ. ಹಿಂದೆ ರಥೋತ್ಸವದ ವೇಳೆ ತೇರು ಸ್ವಚ್ಚಗೊಳಿಸಲು ಸಹೋದರ ಸಮಾಜ ನಾಯಕರಿಗೆ ವಹಿಸಿದ್ದರು. ಅದನ್ನೆ ಈಗ ಮುದ್ದಿಟ್ಟುಕೊಂಡ ನಾಯಕರು ತೇರು ನಮ್ಮದೇ ದೇವರು ನಮ್ಮದೇ , ಜಾತ್ರೆ ನಾವೇ ಮಾಡುತ್ತೇವೆ ಎಂದು ದಬ್ಬಾಳಿಕೆ ಮಾಡುತ್ತಾ ಸಾಗಿದ್ದರು. ಬರು ಬರುತ್ತಾ ತೇರಿನ ಅಲಂಕಾರ ಮಾಡುತ್ತಾ ತೇರು ಪೂಜೆಗೆ ನಿಂತು ಈಗ ದೇಗುಲ ನಮ್ಮ ವಶಕ್ಕೆ ಕೊಡಿ ಎಂದು ಗಲಾಟೆ ಮಾಡಿದ್ದಾರೆ.
ಹಿರಿಯರು ಗಲಾಟೆ ಮಾಡುವುದು ಬೇಡ ಎಂಬ ಮಾತಿನಿಂದ ಸೋತ ಯುವಕರು ಮೌನವಾಗಿದ್ದರು.
ಗುರುವಾರ ದೇವರನ್ನು ತರೀಕೆರೆ ಭಕ್ತರ ಮನೆಗೆ ಕೊಂಡೊಯ್ಯವಾಗ ಏಕಾಏಕಿ ನಾಯಕ ಕೋಮಿನ ಯುವಕರು ಕುರುಬರ ಮೇಲೆ ಕಲ್ಲು ತೂರಿ ದಾಂದಲೆ ಮಾಡಿದ್ದಾರೆ ದೊಣ್ಣೆಗಳಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೆ ದೇವಾಲಯದ ಮೇಲೆ ದಾಳಿ ಮಾಡಿ ದಬ್ಬಾಳಿಕೆ ಮಾಡಿ ಪಲ್ಲಕ್ಕಿಯನ್ನು ಧ್ವಂಸ ಮಾಡಿದ್ದಾರೆ. ಹೆಣ್ಣು ಮಕ್ಕಳ ಸೀರೆ ಜಾಕೀಟು ರವಿಕೆ ಹರಿದು ಅವಮಾನ ಮಾಡಿದ್ದಾರೆ.
ಈ ವಿಷಯ ತಿಳಿದ ಕೂಡಲೇ ಆಗಮಿಸಿದ ಕನಕ ಗುರುಪೀಠದ ಈಶ್ವರಾನಂದ ಮಹಾಸ್ವಾಮೀಜಿ ಅವರು ಗ್ರಾಮಕ್ಕೆ ತೆರಳಿ ನ್ಯಾಯ ಹಾಗು ಶಾಂತಿ ಸ್ಥಾಪಿಸಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.
ಪೊಲೀಸರು ಸ್ಥಳಕ್ಕೆ ಬೇಟಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಜಿಲ್ಲಾ ರಕ್ಷಣಾಧಿಕಾಡಿ ಡಾ. ಅರುಣ್ ಅವರು ಲಕ್ಕಿಹಳ್ಳಿ ಗೆ ಬೇಟಿ ನೀಡಿದ್ದಾರೆ. ತನಿಖೆ ನಡೆಸುತ್ತಿದ್ದು. ತಪ್ಪಿಸಸ್ತರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಪದೇ ಪದೇ ನಾಯಕರು ದೌರ್ಜನ್ಯ ಮಾಡುತ್ತಿದ್ದ ಎರಡೂ ಕೋಮಿನ ಸ್ವಾಮೀಜಿಗಳು ಗ್ರಾಮದಲ್ಲಿ ಸಭೆ ಮಾಡಿ ಶಾಂತಿ ಕಾಪಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
