ಗುತ್ತಲ:
ದೇಶದಲ್ಲಿ ನಾಡ ಹಬ್ಬಗಳ ಆಚರಣೆಗಳು ನಶೀಸಿ ಹೋಗುವಂತಹ ಸ್ಥಿತಿಯಲ್ಲಿ ಗುತ್ತಲ ಪಟ್ಟಣದ ದಸರಾ ಉತ್ಸವ ಸಮಿತಿಯವರು ಶರನ್ನವರಾತ್ರಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುತ್ತಿರುವುದು ಹರ್ಷದಾಯಕ ಸಂಗತಿಯಾಗಿದೆ ಎಂದು ಗುತ್ತಲ ಪ.ಪಂ.ಉಪಾಧ್ಯಕ್ಷ ನಾಗರಾಜ ಏರಿಮನಿ ಹೇಳಿದರು.
ಪಟ್ಟಣದ ಎಲಿಪೇಟೆಯಲ್ಲಿ ಶರನ್ನವರಾತ್ರಿ ಹಬ್ಬದ ಪ್ರಯುಕ್ತ ನಡೆದ ಮೂರನೆ ದಿನದ ಪವಾಡ ಬಯಲು ಹಾಗೂ ದುರ್ಗಾಮಾತೆ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ನವರಾತ್ರಿ ಹಬ್ಬವು ಬಹಳ ವಿಜೃಂಭಣೆಯಿಂದ ಮೈಸೂರಿನಲ್ಲಿ ಹೇಗೆ ಹಬ್ಬವನ್ನು ಆಚರಣೆ ಮಾಡುತ್ತಾರೊ ಅದೇ ಒಂದು ಮಾದರಿಯಲ್ಲಿ ನಮ್ಮ ಗುತ್ತಲ ಪಟ್ಟಣದ ದಸರಾ ಉತ್ಸವ ಸಮಿತಿಯವರು ದಸರಾ ಹಬ್ಬವನ್ನು ನಮ್ಮ ಪಟ್ಟಣದಲ್ಲಿ ಬಹಳ ವಿಜೃಂಭಣೆಯಿಂದ ಆಚರಣೆ ಮಾಡುವುದರ ಜೊತೆಗೆ ಹಲವಾರು ಕಾರ್ಯಕ್ರಮಗಳನ್ನು ಶರನ್ನವರಾತ್ರಿಯಲ್ಲಿ ಆಯೋಜಿಸಿ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನೇಕ ಪ್ರತಿಭೆಗಳನ್ನು ಗುರುತಿಸುವಂತಹ ಕಾರ್ಯಕ್ರಮ ನಿಜಕ್ಕೂ ಶ್ಲಾಘನೀಯವಾಗಿದೆ. ಈ ಒಂದು ದಸರಾ ಕಾರ್ಯಕ್ರಮವು ಮುಂದಿನ ದಿನಮಾನಗಳಲ್ಲಿ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಆಗಲಿ ಎಂದರು.
ಇದೇ ಸಂದರ್ಭದಲ್ಲಿ ಈಶ್ವರಿ ವಿದ್ಯಾಲಯದ ಬ್ರಹ್ಮಕುಮಾರಿ ರಾಜಯೋಗಿಣಿ ಬಿ.ಕೆ.ಲೀಲಾಜಿ ಮಾತನಾಡಿ,ಮೊದಲು ದೇಶದಲ್ಲಿ ಮೊದಲು ದೇವತೆಗಳ ಆಡಳಿತವಿತ್ತು ಇಂದು ದೇವತೆಗಳ ಆಡಳಿತದ ಬದಲಾಗಿ ರಾಜಕಾರಣಿಗಳ ರಾಜಕೀಯ ಆಡಳಿತದಲ್ಲಿದ್ದೇವೆ.ಆದರೆ ವಿಪರ್ಯಾಸವೆಂದರೆ ದೇವತೆಗಳಿಗೆ ಇದ್ದಂತಹ ಸೌಂದರ್ಯ ಈಗಿನ ಯಾವೊಬ್ಬ ಸಿನಿಮಾ ನಟ,ನಟಿ ಅಥವಾ ನಮ್ಮನ್ನಾಳುತ್ತಿರುವಂತಹ ರಾಜಕಾರಣಿಗಳಿಗೆ ಇಲ್ಲ ಎಂದರು. ಅಲ್ಲದೇ ದೇವತೆಗಳ ಆಡಳಿತ ಇದ್ದಂತಹ ಸಂದರ್ಭದಲ್ಲಿ ಸುಳ್ಳು,ಮೋಸ,ವಂಚನೆಗಳಿಗೆ ಸ್ಥಳವಕಾಶನೆ ಇರಲಿಲ್ಲ ಆದರೆ ಇಂದು ದಿನ ಬೆಳಗಾದರೆ ಸಾಕು ಸುಳ್ಳು,ಮೋಸ,ವಂಚನೆ ಇವುಗಳ ಒಂದು ದರ್ಪ ತಾಂಡವಾಡುತ್ತಿದೆ.
ನಮ್ಮ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ಸುಮಾರು 150 ದೇಶಗಳಲ್ಲಿದ್ದು ದಿನನಿತ್ಯ ಆ ಭಗವಂತನ ಬಗ್ಗೆ ಜನ ಸಾಮಾನ್ಯರಿಗೆ ತಿಳಿಸುವಂತಹ ಕಾರ್ಯವನ್ನು ಮಾಡುತ್ತಿದೆ. ಸತ್ಯ ಯುಗ ಮತ್ತೆ ಬರಲಿದೆ ಆ ಭಗವಂತ ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯದ ಮುಖಾಂತರ ಸತ್ಯ ಯುಗ ಬರುವುದನ್ನು ಜನಸಾಮಾನ್ಯರಿಗೆ ತೋರುತ್ತಿದ್ದಾನೆ.ಮುಂದಿನ ದಿನಗಳಲ್ಲಿ ಮನೆ,ಮನೆಯು ಕೂಡಾ ಸ್ವರ್ಗದ ಹಾಗೆ ಕಾಣುತ್ತದೆ ಎಂದರು. ಅಲ್ಲದೆ ಇಂದಿನ ಕಾಲದಲ್ಲಿ ಅತಿಯಾದದ್ದು ಅನಾಹುತ ಮತ್ತು ಅಂತ್ಯಕ್ಕೆ ಕಾರಣ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ : ಪ.ಪಂ.ಸದಸ್ಯರಾದ ಮಂಜುನಾಥ ಅಡಗಂಟಿ,ಲಿಂಗೇಶ ಬೆನ್ನೂರ,ಕೋಟೆಪ್ಪ ಬನ್ನಿಮಟ್ಟಿ,ಸುರೇಶ ಲಮಾಣಿ, ಆಶ್ರಯ ಕಮೀಟಿ ಅಧ್ಯಕ್ಷ ಶಹಜನಸಾಬ ಅಗಡಿ,ವ್ಯಾಪಾರಸ್ಥ ಅಜ್ಜಪ್ಪ ಬೆನ್ನೂರ, ಮಹ್ಮದಲಿ ರಿತ್ತಿ,ವರದಿಗಾರರಾದ ಶಂಭು ಮಠದ,ಪಿ.ಎನ್.ಹೇಮಗಿರಿಮಠ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ