ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರ: ರಾಜ್ಯ ಸರ್ಕಾರದ ಹಸಿರು ನಿಶಾನೆ.

ತುಮಕೂರು

         ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರ: ರಾಜ್ಯ ಸರ್ಕಾರದ ಹಸಿರು ನಿಶಾನೆ.ಇಡೀ ವಿಶ್ವದಲ್ಲಿಯೇ ಪ್ರಪ್ರಥಮವಾಗಿ ಒಂದು ವಿಧಾನ ಸಭಾ ಕ್ಷೇತ್ರದ ಅಭಿವೃದ್ಧಿಗಾಗಿ ಜನತೆಯ ಸಹಭಾಗಿತ್ವದಲ್ಲಿ ಸ್ಥಾಪಿಸಿದ್ದ ತುಮಕೂರು ನಗರ ವಿಧಾನಸಭಾ ಕ್ಷೇತ್ರದ ಅಧ್ಯಯನ ಕೇಂದ್ರಕ್ಕೆ ರಾಜ್ಯ ಸರ್ಕಾರದ ಹಸಿರು ನಿಶಾನೆ ದೊರಕಿದೆ ಎಂದು ತುಮಕೂರು ನಗರ ವಿಧಾನಸಭಾ ಸದಸ್ಯರಾದ ಜಿ.ಬಿ. ಜ್ಯೋತಿಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ.

      ಜಿಐಎಸ್ ಮೊದಲನೆ ಹಂತದಲ್ಲಿ ತುಮಕೂರು ಸೇರ್ಪಡೆ:- ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಸಹಭಾಗಿತ್ವದ ಯೋಜನೆಯಡಿ ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜಿಐಎಸ್ ಆಧಾರಿತ ಆಸ್ತಿಗಳ ಮತ್ತು ಯುಟೀಲಿಟೀಸ್ ಲೇಯರ್ಸ್ ಮತ್ತು ಡಿಜಿಟಲ್ ಡೇಟಾ ಬೇಸ್ ಸಿದ್ಧಪಡಿಸಲು ಮೊದಲನೆ ಹಂತದಲ್ಲಿ ಸೇರ್ಪಡೆ ಮಾಡಿ ಸಚಿವ ಸಂಪುಟದ ಅನುಮೋದನೆಯೋಂದಿಗೆ ಸರ್ಕಾರ ಅಧಿಕೃತ ಆದೇಶ ಮಾಡಿದೆ.

         ವಾರ್ಡ್ ಸಮಿತಿ ರಚನೆಗೆ ಅಸ್ತು:- ಮಹಾನಗರ ಪಾಲಿಕೆ ನಿಯಮನುಸಾರ ನಗರದ 35 ವಾರ್ಡ್‍ಗಳ ವ್ಯಾಪ್ತಿಯಲ್ಲೂ ವಾರ್ಡ್ ಸಮಿತಿ ರಚಿಸಲು ಪಾಲಿಕೆ ಕ್ರಮಕೈಗೊಂಡಿದೆ, ವಾರ್ಡ್ ಸಮಿತಿಗೆ ಆಯಾ ವಾರ್ಡ್ ನ ಪಾಲಿಕೆ ಸದಸ್ಯರು ಅಧ್ಯಕ್ಷರಾಗಿರುತ್ತಾರೆ.

         ಬಡಾವಾಣೆವಾರು ನಾಗರೀಕ ಸಮಿತಿಗಳ ಪಧಾಧಿಕಾರಿಗಳು ಸೇರಿದಂತೆ ವಿಷಯ ತಜ್ಞರನ್ನೊಳಗೊಂಡ 10 ಜನರ ಸಮಿತಿ ರಚಿಸಲಾಗುವುದು. ಬಡಾವಣೆವಾರು ನಾಗರೀಕ ಸಮಿತಿಗಳು ಮತ್ತು ಪರಿಣಿತರು ಅವರವರ ಕನಸಿನ ‘ವಿಷನ್ ಡಾಕ್ಯುಮೆಂಟ್’ ಸಹಿತ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿ ಒಂದು ಪ್ರತಿಯನ್ನು ಶಾಸಕರ ಕಚೇರಿಗೆ ದಿನಾಂಕ:30.11.2018 ರೊಳಗೆ ನೀಡಲು ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಮನವಿ ಮಾಡಿದ್ದಾರೆ. ಮನವಿ ಸಲ್ಲಿಸಿದವರ ಕಾರ್ಯಾಗಾರ ಮಾಡಿ ಒಂದು ಸೂಕ್ತ ನಿರ್ಣಯ ಕೈಗೊಂಡು ಪಾಲಿಕೆಗೆ ರೂಪುರೇಷೆಗಳ ಬಗ್ಗೆ ಸಲಹೆ ನೀಡಲಾಗುವುದು.

ಬಡಾವಣೆಗಳ ಘೋಷಣೆ:-

         ಬಡಾವಣೆಗಳ ವ್ಯಾಪ್ತಿಯೊಂದಿಗೆ ಬಡಾವಣೆಗಳ ಹೆಸರನ್ನು ಅಧಿಕೃತವಾಗಿ ರಾಜ್ಯ ಸರ್ಕಾರ ಗೆಜಿಟ್‍ನಲ್ಲಿ ಪ್ರಕಟಿಸಬೇಕಿದೆ, ಆದ್ದರಿಂದ ಬಡಾವಣೆವಾರು ನಾಗರೀಕ ಸಮಿತಿಗಳು ತುಮಕೂರು ಮಹಾನಗರ ಪಾಲಿಕೆಗೆ ವ್ಯಾಪ್ತಿಯ ನಕ್ಷೆಯೊಂದಿಗೆ ಮನವಿ ಸಲ್ಲಿಸಲು ಕರೆ ನೀಡಿದ್ದಾರೆ.
ರಸ್ತೆಗಳ ಹೆಸರಿನ ಗೆಜಿಟ್ ಪ್ರಕಟಣೆ:- ಪ್ರತಿಯೊಂದು ಬಡಾವಣೆವಾರು ವ್ಯಾಪ್ತಿಯ ಮುಖ್ಯ ರಸ್ತೆ, ಅಡ್ಡ ರಸ್ತೆ ಮತ್ತು ಲಿಂಕ್ ರಸ್ತೆ ಸೇರಿದಂತೆ ಪ್ರತಿಯೊಂದು ರಸ್ತೆಗಳ ಹೆಸರನ್ನು ಸಹ ಗೆಜಿಟ್ ಪ್ರಕಟಣೆ ಮಾಡಬೇಕಿರುವುದರಿಂದ ನಾಗರೀಕ ಸಮಿತಿಗಳು ಪ್ರತಿಯೊಂದು ರಸ್ತೆಯ ಹೆಸರುಗಳನ್ನು ಉದ್ದ ಮತ್ತು ಅಗಲದ ಮಾಹಿತಿಗಳೊಂದಿಗೆ ಪಟ್ಟಿ ಮಾಡಿ ಪಾಲಿಕೆಗೆ ಮನವಿ ಸಲ್ಲಿಸಲು ಕರೆ ನೀಡಿದ್ದಾರೆ.

ನಗರಾಧ್ಯಂತ ನಾಮಫಲಕ ಆಂದೋಲನ:-

        ತುಮಕೂರು ಮಹಾನಗರ ಪಾಲಿಕೆಯ ಪ್ರತಿಯೊಂದು ಸರ್ಕಾರಿ ಆಸ್ತಿ ಮತ್ತು ರಸ್ತೆಗಳಿಗೆ ನಾಮಫಲಕ ಹಾಕಲು ಉದ್ದೇಶಿಸಿರುವುದರಿಂದ ನಾಗರೀಕ ಸಮಿತಿಗಳು ನಾಮಫಲಕಗಳನ್ನು ಎಲ್ಲೆಲ್ಲಿ ಹಾಕಬೇಕು ಎಂಬ ಬಗ್ಗೆ ನಕ್ಷೆಯಲ್ಲಿ ಗುರುತುಮಾಡಿ ನೀಡುವುದು ಸೂಕ್ತವಾಗಿದೆ. ಅಗತ್ಯವಿರುವ ಕಡೆ ಸೈನ್ ಬೋರ್ಡ್‍ಗಳನ್ನು ಹಾಕಲು ಸಹ ಸಲಹೆ ನೀಡಬಹುದಾಗಿದೆ.

          ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿ ಅಧಿಕಾರಿಗಳು ಸಮರೋಪಾದಿಯಲ್ಲಿ ಈ ಎಲ್ಲಾ ಯೋಜನೆಗಳ ಜಾರಿಗೆ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಪಾಲಿಕೆ ಸದಸ್ಯರು ಅಧಿಕಾರಿಗಳೊಂದಿಗೆ ಚರ್ಚಿಸಿ ಸಲಹೆ ನೀಡುವ ಮೂಲಕ ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಪ್ರತಿಯೊಂದು ಆಸ್ತಿಯ ದಾಖಲೆಗಳ ಜಿಐಎಸ್ ಆಧಾರಿತ ಲೇಯರ್ಸ್ ಮತ್ತು ಡಿಜಿಟಲ್ ಡೇಟಾ ಸಂಗ್ರಹಿಸಲು ನಾಗರೀಕ ಸಮಿತಿಗಳ ಮತ್ತು ವಾರ್ಡ್ ಸಮಿತಿಗಳ ಸಹಭಾಗಿತ್ವ ಪಡೆಯಲು ಕರೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link