ಹರಪನಹಳ್ಳಿ:
ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ ಅವರ 9ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ತಾಲ್ಲೂಕು ಕಾಂಗ್ರೆಸ್ ಘಟಕದ ವತಿಯಿಂದ ಪಟ್ಟಣದ ಹಡಗಲಿ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಎಂ.ಪಿ.ಪ್ರಕಾಶ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಂ.ಪಿ.ಲತಾ ಮಾತನಾಡಿ, `ತಂದೆಯವರಾದ ಎಂ.ಪಿ.ಪ್ರಕಾಶ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನೆಡೆಯುತ್ತಿದ್ದೇವೆ. ಸಾಹಿತ್ಯ, ರಂಗಭೂಮಿ, ಕಲೆ ಕ್ಷೇತ್ರಗಳಿಗೆ ಅವರ ಕೊಡುಗೆ ಅಪಾರ. ಸಜ್ಜನ ರಾಜಕಾರಣಿ ಎಂದೇ ಹೆಸರಾದ ಅವರು ತತ್ವಾದರ್ಶಗಳು ಪ್ರಸ್ತುತ ರಾಜಕಾರಣಕ್ಕೆ ಅಗತ್ಯವಾಗಿದೆ’ ಎಂದರು.
ಕಾರ್ಯಕ್ರಮ ನಂತರ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ರೋಗಿಗಳಿಗೆ ಹಣ್ಣ-ಹಂಪಲ ವಿತರಿಸಲಾಯಿತು. ಕಾಂಗ್ರೆಸ್ ತಾಲ್ಲೂಕು ಬ್ಲಾಕ್ ಅಧ್ಯಕ್ಷ ಬೇಲೂರು ಅಂಜಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿ.ಅಂಜೀನಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಹುಲಿಕಟ್ಟಿ ಚಂದ್ರಪ್ಪ, ಓ.ರಾಮಣ್ಣ, ಪುರಸಭೆ ಸದಸ್ಯರಾದ ಅರುಣ ಪೂಜಾರ, ಕವಿತಾ ವಾಗೇಶ್, ರೋಪಸಾಬ್ ಮಾತನಾಡಿದರು.
ಮುಖಂಡರಾದ ಕೆ.ಎಂ.ಬಸವರಾಜಯ್ಯ, ಡಿ.ಅಬ್ದುಲ್ ರೆಹಮಾನ್, ಮುತ್ತಗಿ ಜಂಭಣ್ಣ, ಇರ್ಫಾನ್ ಮುದಗಲ್ಲ, ರಾಜಕುಮಾರ, ಅಶೋಕ, ನೀಲಗುಂದ ವಾಗೇಶ್, ಮತ್ತೂರು ಬಸವರಾಜ, ಚಿಕ್ಕೇರಿ ಬಸಪ್ಪ, ಜೀಸಾನ್, ರಾಯದುರ್ಗದ ವಾಗೀಶ್, ಎಸ್.ಕೆ.ಅಲ್ತಾಫ್, ಶಮಿವುಲ್ಲಾ, ವಾಬಸಾಬ್, ಕುಲುಮಿ ಅಬ್ದುಲ್ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ