ಬೆಂಗಳೂರು
ಹೊಸಕೋಟೆಯ ಬಿಎಂಟಿಸಿ ಡಿಪೋ ಬಳಿ ಟಾಟಾ ಏಸ್ ಚಾಲಕನನ್ನು ಭೀಕರವಾಗಿ ಕೊಲೆ ಮಾಡಿರುವ ದುಷ್ಕರ್ಮಿಗಳು ಟಾಟಾ ಏಸ್ ವಾಹನದಲ್ಲಿ ಮೃತದೇಹವನ್ನು ಹಾಕಿ ಪರಾರಿಯಾಗಿದ್ದಾರೆ.
ಕೊಲೆಯಾದ ಚಾಲಕನನ್ನು ಬಂಗಾರಪೇಟೆ ನಗರದ ಅಫ್ರೋಜ್(30)ಎಂದು ಗುರುತಿಸಲಾಗಿದೆ.ಹೊಸಕೋಟೆಯ ಬಿಎಂಟಿಸಿ ಡಿಪೋ ಬಳಿ ನಿಂತಿದ್ದ ಟಾಟಾ ಏಸ್ ವಾಹನದಲ್ಲಿ ಅಫ್ರೋಜ್ ಶವ ಪತ್ತೆಯಾಗಿದೆ.ಮೂತ್ರ ವಿಸರ್ಜನೆಗೆಂದು ಬಂದ ಸಾರ್ವಜನಿಕರು ಶವವನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ಅಫ್ರೋಜ್ ಗೆ ನಾಲ್ಕು ಜನ ಅಣ್ಣ-ತಮ್ಮಂದಿರಲ್ಲಿ ಇವರು ಎರಡನೆಯವರಾಗಿದ್ದಾರೆ. ಅಫ್ರೋಜ್ ಟಾಟಾ ಏಸ್ ವಾಹನ ಚಾಲಕನಾಗಿದ್ದು, ತರಕಾರಿಯನ್ನು ಕೋಲಾರ ಮಾರುಕಟ್ಟೆಗೆ ರವಾನೆ ಕೆಲಸ ಮಾಡುತ್ತಿದ್ದರು ಸುದ್ದಿ ತಿಳಿದ ತಕ್ಷಣ ಹೊಸಕೋಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೊಲೆಗೈದ ದುಷ್ಕರ್ಮಿಗಳಿಗಾಗಿ ತೀವವ್ರ ಶೋಧ ನಡೆಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








