ಕೊಟ್ಟೂರು
ಕೊಟ್ಟೂರೇಶ್ವರ ಕಾಲೇಜ್ ಮತ್ತು ತಾಲೂಕು ಆಡಳಿತ, ಪಟ್ಟಣ ಪಂಚಾಯ್ತಿ ಕೊಟ್ಟೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟೀಯ ಮತದಾರರ ದಿನಾಚರಣೆ ನಡೆಯಿತು.
ಶುಕ್ರವಾರ ಪಟ್ಟಣದ ಉಜ್ಜಿನಿ ಸರ್ಕಲ್‍ನ ಮುಖ್ಯ ರಸ್ತೆಯಿಂದ, ಕೊಟ್ಟೂರೇಶ್ವರ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳು ರಾಷ್ಟೀಯ ಮತದಾರರ ದಿನಾಚರಣೆ ಅಂಗವಾಗಿ ಜಾಗೃತಿ ಘೋಷಣೆಗಳನ್ನು ಕೂಗುತ್ತ ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದ ವಿದ್ಯಾರ್ಥಿಗಳು ಮಾನವ ಸರಪಳಿ ನಿರ್ಮಿಸಿದರು.
ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕೊಟ್ಟೂರೇಶ್ವರ ಕಾಲೇಜ್‍ನ ಪ್ರಾಚಾರ್ಯರಾದ ಮಂಜುನಾಥ್, ಮತದಾನ ಪ್ರತಿಯೊಬ್ಬರ ಹಕ್ಕು, ಆಸೆ, ಆಮಿಷಗಳಿಗೆ ಒಳಪಡದೆ ಅಮೂಲ್ಯವಾದ ಮತವನ್ನ ಯಾರೂ ಮಾರಾಟ ಮಾಡಬಾರದು ಎಂದರು.
ಮತದಾನ ನಮ್ಮ ಇಚ್ಚೆಯಂತೆ ಇರಬೇಕು ಹಾಗೂ ಅಭಿವೃದ್ದಿಯ ಸಾಂಕೇತ ವಾಗಿರಬೇಕು ಹಾಗೆಯೆ ಉತ್ತಮ ಕೆಲಸ ಮಾಡುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ವಿದ್ಯಾರ್ಥಿಗಳು ಮತದಾನ ಕುರಿತು ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ ಮಂಜುನಾಥ ಕೆ , ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಹೆಚ್.ಎಫ್ ಬಿದರಿ ಕಾಲೇಜಿನ ಎನ್‍ಸಿಸಿ ಅಧಿಕಾರಿ ಬಸವರಾಜ್, ಉಪನ್ಯಾಸಕರಾದ ಡಿ,ದುರುಗಪ್ಪ, ಡಾ. ಕೆ.ಎಂ.ಮಂಜುನಾಥ ಮುಂತಾದವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ