ಹಾನಗಲ್ಲ :
ಹಾನಗಲ್ಲ ತಾಲೂಕಿನ ಅರಳೇಶ್ವರ ಗ್ರಾಮ ಪಂಚಾಯತಿ ನೂತನ ಅದ್ಯಕ್ಷರಾಗಿ ಕಾಂಗ್ರೇಸ ಪಕ್ಷದ ಹನುಮಂತಪ್ಪ ಎನ್ ಯಳ್ಳೂರ ಆಯ್ಕೆಗೊಂಡಿದ್ದಾರೆ.
ಇತ್ತಿಚೇಗೆ ಉದಯ ತಳವಾರ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆದಿತ್ತು. ಚುನಾವಣೆಯಲ್ಲಿ ಕಾಂಗ್ರೇಸ್ ಬೆಂಬಲಿತ ಹನುಮಂತಪ್ಪ ಯಳ್ಳೂರ ನೂತನ ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಯಾದರು. ತಾಲೂಕ ಪಂಚಾಯತಿ ಆವರಣದಲ್ಲಿ ಮಾಜಿ ಅದ್ಯಕ್ಷ ಉದಯ ತಳವಾರ ತಮ್ಮ ಸ್ಥಾನವನ್ನು ಹನುಮಂತಪ್ಪ ಯಳ್ಳೂರವರಿಗೆ ಹಸ್ತಾಂತರಿಸುವ ಮೂಲಕ ನೂತನ ಅದ್ಯಕ್ಷನಿಗೆ ಅಭಿನಂದನೆ ಸಲ್ಲಿಸಿದರು.
ಚುನಾವಣಾಧಿಕಾರಿಯಾಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಚನ್ನಬಸಪ್ಪ ಹಾವಣಗಿ ಹಾಗೂ ಗ್ರಾಮ ಪಂಚಾಯತಿ ಅಭಿವದ್ದಿ ಅಧಿಕಾರಿ ಎಮ್.ಜೆ.ಹಿರೇಮಠ, ಕಾರ್ಯನಿರ್ವಹಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ