ಬಂಡೀಪುರದಲ್ಲಿ ನ್ಯೂ ಇಯರ್ ನಿಷೇಧ…!!!!

ಬೆಂಗಳೂರು

          ಹೊಸ ವರ್ಷ ಬಂತೆಂದರೆ ಸಾಕು ಸಿಟಿ ಜನ ಅದರ ಆಚರಣೆಗೆ ಯಾವುದಾದರೂ ಗುಪ್ತ ಮತ್ತು ಸುರಕ್ಷಿತ ತಾಣ ಹುಡುಕುವುದು ಸಮಾನ್ಯ ಆದರೆ ಕೆಲ ವ್ಯಕ್ತಿಗಳು ತಮ್ಮ ಸಾಹಸ ಪ್ರವೃತ್ತಿಯನ್ನು ಪ್ರದರ್ಶಿಸಲು ಅರಣ್ಯದಲ್ಲಿ ಮೊಕ್ಕಮ್ಮು ಹೂಡುತ್ತಾರೆ ಅದರಲ್ಲೂ ಬೆಂಗಳೂರಿಗರಿಗೆ ತಕ್ಷಣಕ್ಕೆ ನೆನಪಿಗೆ ಬರುವುದು ಬನ್ನೇರುಘಟ್ಟ ಅಥವಾ ಬಂಡೀಪುರ ರಾಷ್ಟ್ರೀಯ ಉದ್ಯಾನ ಆದರೆ ಅಂತಹ ಸಾಹಸಿಗಳಿಗೆ ಸರ್ಕಾರ ಈ ವರ್ಷ ದೊಡ್ಡ ಶಾಕ್ ನೀಡಿದೆ ಬಂಡೀಪುರ ವ್ಯಾಪ್ತಿಯಲ್ಲಿ ಹೊಸ ವರ್ಷಾಚರಣೆಗೆ ಅರಣ್ಯ ಇಲಾಖೆ ನಿಯಮಗಳನ್ನು ರೂಪಿಸಿದೆ. ಮೋಜು-ಮಸ್ತಿ, ಪುಂಡಾಟಗಳನ್ನು ಮಾಡದಂತೆ ಖಡಕ್ ಸೂಚನೆ ನೀಡಿದೆ.

         ರಾಷ್ಟ್ರೀಯ ಅಭಯಾರಣ್ಯ ವ್ಯಾಪ್ತಿಯಲ್ಲಿರುವ ರೆಸಾರ್ಟ್, ಹೊಟೇಲ್, ಫಾರಂ ಹೌಸ್‌ಗಳಲ್ಲಿ ಹೊಸ ವರ್ಷಾಚರಣೆ ಮಾಡುವವರು ಅಬ್ಬರದ ಸಂಗೀತ ಹಾಕುವಂತಿಲ್ಲ. ಸದ್ದು ಗದ್ದಲವಿಲ್ಲದೇ ವರ್ಷಾಚರಣೆ ಮಾಡಬೇಕು ಎಂದು ತಾಕೀತು ಮಾಡಿದೆ.

          ಬಂಡೀಪುರ ಅರಣ್ಯದೊಳಗಿರುವ ಡಾರ್ಮೆಟರಿ ಮತ್ತು ವಸತಿಗೃಹಗಳಲ್ಲಿ ಪ್ರವಾಸಿಗರಿಗೆ ತಂಗಲು ಡಿಸೆಂಬರ್ 31ರಂದು ಅವಕಾಶ ನೀಡಬಾರದು ಎಂದು ಅರಣ್ಯ ಇಲಾಖೆ ಹೇಳಿದೆ. ಬುಕ್ಕಿಂಗ್ ಮಾಡಿಕೊಳ್ಳಬಾರದು ಎಂದು ನಿರ್ದೇಶನ ನೀಡಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link