ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಸುಧಾಮೂರ್ತಿ….!

ನವದೆಹಲಿ:

    ಲೇಖಕಿ, ಸಮಾಜ ಸೇವಕಿ, ಇನ್ಫೋಸಿಸ್ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ಇಂದು ಗುರುವಾರ ದೆಹಲಿಯಲ್ಲಿ ರಾಜ್ಯಸಭೆ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಮೂಲತಃ ಇಂಜಿನಿಯರ್ ಆಗಿರುವ ಸುಧಾ ಮೂರ್ತಿ ಅವರು ತಮ್ಮ ಪತಿ ಎನ್ ಆರ್ ನಾರಾಯಣ ಮೂರ್ತಿ ಅವರ ಸಮ್ಮುಖದಲ್ಲಿ ರಾಜ್ಯಸಭಾ ಸಂಸದರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಸಂಸತ್ ಭವನದ ತಮ್ಮ ಕಚೇರಿಯಲ್ಲಿ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ಸಭಾನಾಯಕ ಪಿಯೂಷ್ ಗೋಯಲ್ ಕೂಡ ಉಪಸ್ಥಿತರಿದ್ದರು. 

   73 ವರ್ಷದ ಸುಧಾ ಮೂರ್ತಿ, ಇನ್ಫೋಸಿಸ್ ಫೌಂಡೇಶನ್‌ನ ಮಾಜಿ ಅಧ್ಯಕ್ಷೆಯಾಗಿದ್ದು ಹಲವು ಪುಸ್ತಕಗಳ ಲೇಖಕಿಯಾಗಿ, ವಿಶೇಷವಾಗಿ ಮಕ್ಕಳ ಪುಸ್ತಕ ಬರೆದು ಜನಪ್ರಿಯರಾಗಿದ್ದಾರೆ. ಇನ್ಫೋಸಿಸ್ ಫೌಂಡೇಶನ್ ಮೂಲಕ ಹಲವಾರು ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಸಾಕಷ್ಟು ಜನಪ್ರಿಯರಾಗಿದ್ದಾರೆ. 

   ಮೂಲತಃ ಹುಬ್ಬಳ್ಳಿ ಕಡೆಯವರಾದ ಸುಧಾಮೂರ್ತಿಯವರಿಗೆ ಕನ್ನಡ ಭಾಷೆಯೆಂದರೆ ವಿಶೇಷ ಒಲವು, ಅಚ್ಚುಮೆಚ್ಚು. ಅದನ್ನು ಪದೇಪದೇ ನಿರೂಪಿಸುತ್ತಿರುತ್ತಾರೆ. ಇಂದು ರಾಜ್ಯಸಭೆ ಸದಸ್ಯರಾಗಿ ಕೂಡ ಅವರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದರು. ಕಳೆದ ಶುಕ್ರವಾರ ಅಂತಾರಾಷ್ಟ್ರೀಯ ಮಹಿಳಾ ದಿನದಂದು ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap