ನ.1 ಎಂಇಎಸ್ ಸಂಘಟನೆಯ ಕರಾಳ ದಿನಾಚರಣೆ

ಹಾವೇರಿ :

        ಕನ್ನಡ ರಾಜ್ಯೋತ್ಸವ ನವ್ಹಂಬರ್ 1 ರಂದು ಬೆಳಗಾವಿಯಲ್ಲಿ ಎಂಇಎಸ್ ಸಂಘಟನೆಯ ಕರಾಳ ದಿನಾಚರಣೆಗೆ ಅವಕಾಶ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟಿಸಿ ಸಿಎಂ ಕುಮಾರಸ್ವಮಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.

          ವೀರರಾಣಿ ಕಿತ್ತೂರು ಚೆನ್ನಮ್ಮನ ನೆಲೆವೀಡು, ವೀರ ಸೇನಾನಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಕರ್ಮಭೂಮಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದರೂ ಕೆಲ ಸಮಾಜ ಘಾತಕ ಶಕ್ತಿಗಳು ಮಹಾರಾಷ್ಟ್ರ ಏಕೀಕರಣ ಸಮಿತಿ ಎಂಬ ಸಂಘಟನೆಯ ಹೆಸರಿನಲ್ಲಿ ಹಲವು ದಶಕಗಳಿಂದ ಪುಂಡಾಟಿಕೆ ನಡೆಸುತ್ತಿರುವುದು ಖಂಡನೀಯ.

         ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಅನುಚಿತ, ಆಕ್ರಮಣಕಾರಿ ನಿಲುವನ್ನು ಪ್ರದಿಪಾದಿಸುತ್ತ ಮರಾಠಿ ಮಹಾ ಮೇಳಾವ ಗಳನ್ನು ಆಯೋಜಿಸಿ ಇದಕ್ಕೆ ಮಹಾರಾಷ್ಟ್ರದಿಂದ ಕುಚೇಷ್ಟೆಯ ರಾಜಕಾರಣಿಗಳನ್ನು ಕರೆಯಿಸಿ, ಅವರಿಂದ ಕನ್ನಡಿಗರ ಮತ್ತು ಕರ್ನಾಟಕ ಸರ್ಕಾರದ ವಿರುದ್ದ ಪ್ರಚೋದನಕಾರಿ ಭಾಷಣಗಳನ್ನು ಮಾಡಿಸುತ್ತಾ ನಾಡದ್ರೋಹ ಮಾಡುವ ಕೆಲಸಗಳನ್ನು ಮಾಡಲು ಮುಂದಾಗುವ ಸಂಭವವಿದ್ದು ಇದು ಸರಿಯಾದ ಕ್ರಮವಲ್ಲ.

         ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಹದಿನೆಂಟು ವರ್ಷಗಳಿಂದಲೂ ಬೆಳಗಾವಿಯಲ್ಲಿ ನಡೆಯುತ್ತಿರುವ ಎಂಇಎಸ್ ನ ಕುತಂತ್ರ ರಾಜಕಾರಣದ ವಿರುಧ್ಧ ಪ್ರತಿಭಟಿಸುತ್ತ ಕರವೇ ಬಂದಿದೆ. ಅಲ್ಲದೇ ಎಂಇಎಸ್ ಪುಂಡರ ಆಕ್ರಮಣಗಳಿಂದ ನೊಂದಿದ್ದ ಆ ಭಾಗದ ಕನ್ನಡಿಗರಲ್ಲಿ ಆತ್ಮ ವಿಶ್ವಾಸದ ಜ್ಯೋತಿಯನ್ನು ಮುಖ್ಯಮಂತ್ರಿಗಳು ಹಚ್ಚಿದರಲ್ಲದೇ ಕನ್ನಡಿಗರು ತಲೆ ಎತ್ತಿ ಬದುಕುವಂತೆ ಮಾಡಬೇಕು ಈ ವರ್ಷವೂ ಸಹ ಎಂಇಎಸ್ ತನ್ನ ಕುಚೇಷ್ಟೆಗಳನ್ನು ಪ್ರದರ್ಶಿಸುವ ಸಲುವಾಗಿ ಇದೇ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಕರಾಳ ದಿನಾಚರಣೆಯನ್ನು ಆಚರಿಸಲು ಎಲ್ಲ ಸಿಧ್ಧತೆಗಳನ್ನು ನಡೆಸಿದ್ದು ನಮ್ಮ ಗಮನಕ್ಕೆ ಬಂದಿದೆ ಯಾವದೇ ಕಾರಣಕ್ಕೂ ಎಂಇಎಸ್ ಸಂಘಟನೆಗೆ ಕರಾಳ ದಿನಾಚರಣೆ ನಡೆಸಲು ಅವಕಾಶ ನೀಡಬಾರದು ಕಾರಣ ಎಂಇಎಸ್ ಈ ಬಾರಿ ಬೆಳಗಾವಿ ಜಿಲ್ಲೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರದ ಕಾರಣ ಈ ಬಾರಿಯ ಕರಾಳ ದಿನಾಚರಣೆಯ ಮೂಲಕ ಬೆಳಗಾವಿಯಲ್ಲಿ ಕೋಮು ಗಲಭೆಗಳ ಸ್ವರೂಪದ ದೊಡ್ಡ ಕುತಂತ್ರವನ್ನ ನಡೆಸಲು ತಯಾರಿ ನಡೆಸಿದೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ.

        ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸತೀಶಗೌಡ ಜೀ ಮುದಿಗೌಡ್ರ ಜಿಲ್ಲಾ ಉಪಾಧ್ಯಕ್ಷ ನಂದೀಶ ಗೊಡ್ಡೆಮ್ಮಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮಿ ಗುಡಮಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಶವಂತಗೌಡ ದೊಡ್ಡಗೌಡ್ರ ಮುಖಂಡರಾದ ಯುಸುಫ್ ಸೈಕಲ್ಗಾರ. ಬಸವರಾಜ ಹೊಂಭರಡಿ. ಬಿ ಹೆಚ್ ಬಣಕಾರ. ಅಧ್ಯಕ್ಷರಾದ ಗಿರೀಶ ಬಾರ್ಕಿ. ಸಂತೋಷಗೌಡ ಜ ಪಾಟೀಲ ಪರಶುರಾಮ ಈಳಿಗೇರ. ಕೊಟ್ರೇಶ ಜಿ ಎಸ್. ಸಂತೋಷ ಗಾಣಿಗೇರ ಕರಿಯಪ್ಪ ಕೊರವರ ನಾಗರಾಜ ಮಾಳಗಿ, ಇರ್ಫಾನಸಾಬ ಜಡದಿ. ಸಿಕಂದರ ಓಲೇಕಾರ. ಟಿಪ್ಪುಸುಲ್ತಾನ ಮಕಾನದಾರ. ಬಸಲಿಂಗಪ್ಪ ನರಗುಂದ. ಇಕ್ಬಾಲ ಕನವಾಡಿ, ಮಂಜಪ್ಪ ಶಿದ್ದಣ್ಣನವರ.ಗಿರಿಯಪ್ಪ ಬಿಲ್ಲಹಳ್ಳಿ.ಜಬಿಉಲ್ಲಾ ಬ್ಯಾಗವಾದಿ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link