ತಿಪಟೂರು :
ನಗರದಲ್ಲಿ ವಿಪರೀತವಾಗಿ ಯುವಕರು ಯಾವುದೇ ಅಡೆತಡೆ ಬೈಕ್‍ಗಳನ್ನು ಹೇಗೆ ಬೇಕೋ ಹಾಗೆ ಓಡಿಸಿ ಅಪಘಾತವಾಗುವ ಬಗ್ಗೆ ಬಂದ ದೂರಿನ ಆದರದ ಇಂದು ಯವಕರ ಬೈಕ್‍ಗಳನ್ನು ತಡೆದು ಸರ್ಕಲ್ ಇನ್ಸ್‍ಪೆಕ್ಟರ್ ಅಂಬರೀಷ್‍ರವರ ನೇತೃತ್ವದಲ್ಲಿ ಪರೀಶೀಲಿಸಿ ಸರಿಯಾದ ದಾಖಲೆಗಳಿಲ್ಲದವರಿಗೆ ದಂಡವನ್ನು ವಿಧಿಸಲಾಯಿತು.
ಹೊಸ ಸರ್ಕರ್ಲ್ ಇನ್ಸ್‍ಪೆಕ್ಟರ್ ಬಂದಿದ್ದರಿಂದ ಚರುಕುಗೊಂಡಂತಿರುವ ಪೋಲೀಸ್ ಇಲಾಖೆಯ ಸಿಬ್ಬಂದಿ ಇಂದು ದಿಢೀರನೆ ರಸ್ತೆಗಿಳಿದಂತಿತ್ತು. ಹೆಚ್ಚಾಗಿ ಅಪ್ರಾಪ್ತ ಯುವಕರನ್ನೇ ಗುರಿಯಾಗಿಸಿಕೊಂಡು ನಗರದ ಕೆ.ಆರ್.ಬಡಾವಣೆಯ ಹತ್ತಿರ ಇಂದು ಬೆಳಿಗ್ಗೆಯಿಂದಲೇ ಕಾರ್ಯವನ್ನರಂಭಿಸಿದ ಸಿಬ್ಬಂದಿಯು ಅಲ್ಲಲ್ಲಿ ಅಡ್ಡಾಡುತ್ತಿದ್ದ ಬೈಕ್‍ಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದದು ಕಂಡುಬಂದಿದ್ದು ಇದು ಇದೇ ರೀತಿ ಮುಂದುವರೆಯಬೇಕು ಎಂಬು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಅಪ್ರಾಪ್ತರ ಕೈನಲ್ಲಿ ವಾಹನಗಳು: ಅಪ್ರಾಪ್ತರು ವಾಹನಗಳನ್ನು ಸಂತೋಷಕ್ಕೋಸ್ಕರ ಹೆಚ್ಚಾದ ರಭಸದಲ್ಲಿ ಚಲಾಯಿಸಿ ನಿಭಾಯಿಸಲು ಸಾಧ್ಯವಾಗದೇ ಅಪಘಾತಗಳು ಹೆಚ್ಚುತ್ತಿವೆ. ಅಪ್ರಾಪ್ತರು ವಾಹನಗಳನ್ನು ತಂದರೆ ಅವರ ಪೋಷಕರ ಮೇಲೆ ದೂರನ್ನು ದಾಖಲಿಸಿಕೊಳ್ಳಲಾಗುವುದೆಂದು ಪೋಷಕರಿಗೆ ಸರ್ಕಲ್ ಇನ್ಸ್‍ಪೆಕ್ಟರ್ ಅಂಬರೀಷ್ ಎಚ್ಚರಿಸಿದರು.
ನಗರದ ಇಂದಿರಾ ನಗರ ಮತ್ತು ಗಾಂದಿನಗರದಲ್ಲಿ ಹೆಚ್ಚುತ್ತಿರುವ ವ್ಹೀಲಿಂಗ್ ಹಾವಳಿ: ಇನ್ನು ನಗರದ ಇಂದಿರಾ ನಗರ ಗಾಂಧಿನಗರದಲ್ಲಿ ಹೆಚ್ಚಾಗಿ ವಾಹನಗಳು ಕಕರ್ಶ ಶಬ್ದವನ್ನು ಮಾಡುಹಾಗೆ ವಾಹನಗಳನ್ನು ಬದಲಾಯಿಸಿ ಓಡಿಸುತ್ತಿದ್ದು ಇದರಿಂದ ನಾಗರಿಕರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ದೂರುಗಳು ಬರುತ್ತಿದ್ದು ಅವುಗಳ ಬಗ್ಗೆಯು ಗಮನಹರಿಸಬೇಕು ಎಂದು ಸ್ಥಳೀಯ ನಿವಾಸಿಗಳು ಆಗ್ರಹಿಸಿದ್ದಾರೆ.
ನಕಲಿ ಡ್ರೈವಿಂಗ್ ಲೈಸೆನ್ಸ್‍ಗೆ ಕಡಿವಾಣ ಹಾಕಬೇಕು : ಯಾರದೋ ಹೆಸರಿನ ಡ್ರೈವಿಂಗ್ ಲೈಸೆನ್ಸ್‍ಗೆ ತಮ್ಮ ಹೆಸರು ಮತ್ತು ಬಾವಚಿತ್ರವನ್ನು ಹಾಕಿಸಿಕೊಂಡು ಕೆಲವರು ಓಡಾಡುತ್ತಿದ್ದಾರೆ ಅವರ ಬಗ್ಗೆಯು ಪೋಲಿಸ್ ಇಲಾಖೆಯು ಸೂಕ್ತವಾದ ಕ್ರಮವಹಿಸಬೇಕು.
ಇದ್ದಕಿದ್ದಂತೆ ಮಾಯವಾದ ವೇಗ ನಿಯಂತ್ರಕ ಪರಿಕರಗಳು :
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬಾಲಕಿಯರ ಸರ್ಕಾರಿ ಪದವಿ ಪೂರ್ವಕಾಲೇಜುಗಳ ಮುಂದೆ ಇಟ್ಟಿದ್ದ ವಾಹನಗಳ ವೇಗವನ್ನು ತಗ್ಗಿಸಲು ಕೆಲವು ತಿಂಗಳು ಗಳ ಹಿಂದೆ ಇಟ್ಟಿದ್ದ ಪೈಬರ್ ಬ್ಯಾರಿಕೇಡ್‍ಗಳು ಇದ್ದಕ್ಕಿದಂತೆ ಮಾಯವಾಗಿದ್ದು ರಸ್ತೆಯಲ್ಲಿ ವಾಹನಗಳು ಮೊದಲಿನಿಂತೆ ಎಗ್ಗುತಗ್ಗಿಲ್ಲದೇ ವೇಗವಾಗಿ ಸಂಚರಿಸುತ್ತಿದ್ದು ವಿದ್ಯಾರ್ಥಿಗಳು ರಸ್ತೆಯನ್ನು ದಾಟಲು ಪರದಾಡುವಂತಾಗಿದ್ದು ಆದಷ್ಟು ಬೇಗ ವೇಗನಿತಂತ್ರಕ ಪರಿಕರಗಳನ್ನು ತಂದು ವಾಹನಗಳ ವೇಗವನ್ನು ನಿಯಂತ್ರಿಸಿ ವಿದ್ಯಾರ್ಥಿಗಳಿಗೆ ರಸ್ತೆದಾಟಲು ಅನುಕೂಲಮಾಡಿಕೊಡಬೇಕೆಂದು ವಿದ್ಯಾರ್ಥಿಗಳು ವಿನಂತಿಸಿದ್ದಾರೆ.
ನಿಲಗುಡೆ ನಿಷೇದ ಬೋರ್ಡ್‍ಗಳೇ ನಿಷೇದವಾಗಿವೆ :
ಇದೇ ರೀತಿ ಕೆಲ ದಿನಗಳಹಿಂದೆ ನಗರದ ರಸ್ತೆಪಕ್ಕದಲ್ಲಿ ಅಳವಡಿಸಿದ್ದ ನಿಲುಗಡೆ ನಿಷೇದ ಎಂಬ ಫಲಕಗಳನ್ನು ಪೋಲೀಸ್ ಇಲಾಖೆ ಅಳವಡಿಸಿತ್ತು. ಆದರೆ ಇವುಗಳು ಸಂಚರಿಸುವರ ತಲೆಗಳಿಗೆ ತಗುಲಿ ಗಾಯವಾಗುತ್ತವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಆದರೆ ಈಗ ಆ ಬೋರ್ಡ್‍ಗಳೆ ಅಲ್ಲಿಂದ ಮಾಯವಾಗಿವೆ. ಇನ್ನು ನಗರದ ಸಿಂಗ್ರಿ ಸಂಜಪ್ಪ ವೃತ್ತದಲ್ಲಿ ಹೆಚ್ಚಾಗಿ ವಾಹನಗಳನ್ನು ಹೇಗೆ ಬೇಕೋ ಹಾಗೆ ನಿಲ್ಲಿಸುತ್ತಿದ್ದು ಸಂಚಾರವ್ಯವಸ್ಥೆ ಸಂಪೂರ್ಣವಾಗಿ ಹಾಳಾಗಿ ವಾಹನಗಳೂ ಸಂಚರಿಸುವುದು ಕಷ್ಟವಾಗುತ್ತಿದೆ. ರಾತ್ರಿ 7.00 ಗಂಟೆಯ ಮೇಲೆ ಸಾರಿಗೆ ಇಲಾಖೆಯ ಬಸ್ಸುಗಳು ಬಸ್‍ನಿಲ್ದಾಣಕ್ಕೆ ಹೋಗದೇ ಬಿ.ಹೆಚ್.ರಸ್ತೆಯ ವೈಭವ ಮಾಲ್ ಮುಂದೆ ನಿಲ್ಲಿಸುತ್ತಾರೆ ಆದರೆ ಇಲ್ಲಿ ನಿಂತಿರುವ ವಾಹನಗಳು ಸಂಚಾರಕ್ಕೆ ತುಂಬಾ ತೊಂದರೆ ಆಗುತ್ತಿದೆ. ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆಮಾಡಿಕೊಡುವುದು ಆರಕ್ಷಕ ಇಲಾಖೆಯ ಕರ್ತವ್ಯವಾಗಿದೆ.ಇಂದು ಪೋಲಿಸ್ ಇಲಾಖೆಯವರು ಮಾಡುತ್ತಿರುವ ಕಾರ್ಯವು ಒಳ್ಳೆಯದೇ ಆದರೆ ಇದನ್ನು ಆರಂಭsಶೂರಂತೆ ಮಾಡದೇ ನಿರಂತರವಾಗಿ ಮುಂದುವರೆದರೆ ಉತ್ತಮ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ