ಹಾನಗಲ್ಲ :
ವರದಾ ನದಿಯಲ್ಲಿ ಈಜಲು ತೆರಳಿದ್ದ ವ್ಯಕ್ತಿಯೋರ್ವ ನೀರು ಪಾಲಾದ ಘಟನೆ ತಾಲೂಕಿನ ಕೂಡಲ ಗ್ರಾಮದಲ್ಲಿ ಬುಧವಾರ ಜರುಗಿದೆ.
ಶಿಗ್ಗಾವಿ ತಾಲೂಕಿನ ಕುಂದೂರ ಗ್ರಾಮದ ರಾಜು ಮುದುಕಣ್ಣನವರ(42) ಮೃತಪಟ್ಟ ದುರ್ದೈವಿ. ಸಂಕ್ರಾಂತಿ ಹಬ್ಬದ ಅಂಗವಾಗಿ ಸ್ನೇಹಿತರೊಂದಿಗೆ ಕೂಡಲ ಗ್ರಾಮಕ್ಕೆ ಬಂದಿದ್ದ ಈತ ಸ್ನಾನಕ್ಕೆಂದು ನದಿಯಲ್ಲಿ ಇಳಿದಾಗ ಈ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಈತ ಈಜಲು ಬಾರದಿದ್ದರೂ ನದಿಯಲ್ಲಿ ಈಜಲು ತೆರಳಿರುವುದೇ ಘಟನೆಗೆ ಕಾರಣವೆನ್ನಲಾಗಿದೆ. ಆಡೂರು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
