ನವದೆಹಲಿ: 

ವಿಶ್ವದಲ್ಲಿ ದಿನವೂ ಹಲವಾರು ಸರ್ವೆಗಳು ನಡೆಯುತ್ತಲೇ ಇರುತ್ತವೇ ಅದೇ ರೀತಿ ನಡೆದ ಒಂದು ಸರ್ವೆ ಈಗ ದೇಶದ ನಿದ್ದೆ ಕೆಡಿಸಿದೆ ಅದೇ ವಿಶ್ವದ ಅತಿ ಕಲುಷಿತ ನಗರಗಳ ಸರ್ವೆ ಆಪೈಕಿ ಭಾರತದ 15 ನಗರಗಳು ಇರುವುದು ಎಲ್ಲರಿಗೂ ಶಾಕ್ ನೀಡಿದೆ.
ಸದ್ಯ ಬಿಡುಗಡೆಯಾಗಿರುವ 20 ಅತಿ ಕಲುಷಿತ, ಮಲಿನಗೊಂಡಿರುವ ನಗರಗಳ ಪಟ್ಟಿಯಲ್ಲಿ ಭಾರತದ 15 ನಗರಗಳು ಇವೆ, ಅತಿ ಹೆಚ್ಚು ಮಲಿನಗೊಂಡ ರಾಜಧಾನಿ ಎಂಬ ಅಪಖ್ಯಾತಿಗಗೆ ದೆಹಲಿ ಪಾತ್ರವಾಗಿದೆ.
ಗ್ರೀನ್ ಪೀಸ್ ಸಂಸ್ಥೆ ನಡೆಸಿರುವ ಇತ್ತೀಚಿನ ಅಧ್ಯಯನ ಸರ್ವೆಯಲ್ಲಿ ವಿಶ್ವದಲ್ಲೇ ಹೆಚ್ಚು ಮಲಿನಗೊಂಡಿರುವ ನಗರಗಳನ್ನು ಹೊಂದಿರುವ ರಾಷ್ಟ್ರ ಭಾರತವಾಗಿದ್ದು, ಪಟ್ಟಿಯಲ್ಲಿ ಗುರುಗ್ರಾಮ್ ಹಾಗೂ ಗಾಝಿಯಾಬಾದ್ ಅಗ್ರಸ್ಥಾನಗಳನ್ನು ಗಳಿಸಿವೆ.ಹೆಚ್ಚು ಮಲಿನಗೊಂಡ ನಗರಗಳ ಪಟ್ಟಿಯಲ್ಲಿ ದೆಹಲಿ 11 ನೇ ಸ್ಥಾನದಲ್ಲಿದ್ದರೆ, ಅತಿ ಹೆಚ್ಚು ಮಲಿನಗೊಂಡ ರಾಜಧಾನಿಗಳ ವಿಭಾಗದಲ್ಲಿ ದೆಹಲಿ ಎಂದಿನಂತೆ ತನ್ನ ಸ್ಥಾನವನ್ನು ಉಳಿಸಿಕೊಂಡಿರುವುದೇ ವಿಪರ್ಯಾಸ.
ಜಗತ್ತಿನ ಉಳಿದ 5 ಅತ್ಯಂತ ಮಲಿನಗೊಂಡ ನಗರಗಳು ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದಲ್ಲಿವೆ. ಚೀನಾ ಒಂದು ದಶಕದಿಂದ ಮಾಲಿನ್ಯ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದೆ. ಬೀಜಿಂಗ್ ನಗರ ಈಗ ವಿಶ್ವದ ಅತಿ ಹೆಚ್ಚು ಮಲಿನಗೊಂಡ ನಗರಗಳ ಪೈಕಿ 122 ಸ್ಥಾನದಲ್ಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
