ಸಿದ್ದಗಂಗಾಶ್ರೀಗಳ ಭಾವ ಚಿತ್ರ ಪುಷ್ಪ ನಮನ

ಕೊರಟಗೆರೆ:-

         ಶೈಕ್ಷಣಿಕ, ಧಾರ್ಮಿಕ ಹಾಗೂ ದಾಸೋಹದ ಹರಿಕಾರರಾದ ಶ್ರೀ ಶಿವಕುಮಾರ ಸ್ವಾಮೀಜಿಗಳ ಆದರ್ಶ ಹಾಗೂ ಸಿದ್ದಾಂತಗಳನ್ನ ಅಳವಡಿಸಿಕೊಳ್ಳುವ ಮೂಲಕ ಅವರನೀಡಿದಮಾರ್ಗದರ್ಶನದಂತೆ ನೆಡೆಯಬೇಕುಎಂದುಸಿದ್ದರಬೆಟ್ಟದ ಬಾಳೆಹೋನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷವೀರಭದ್ರ ಶಿವಾಚಾರ್ಯ ಸ್ವಾಮೀಜಿಗಳು ತಿಳಿಸಿದರು.

        ಪಟ್ಟಣದಎಸ್.ಎಸ್.ಆರ್ ವೃತ್ತದಏರ್ಪಡಿಸಲಾಗಿದ್ದ ಶ್ರೀಗಳ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ 112ನೇ ಜನ್ಮ ದಿನೋತ್ಸವದ ಪ್ರಯುಕ್ತ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ ಮತ್ತು ಹೆಸರುಬೇಳೆ ಚಾಲನೆಕೊಟ್ಟು ಮಾತನಾಡುತ್ತಾಶ್ರೀಗಳು 112 ವರ್ಷಗಳ ಹಿಂದೆಜನ್ಮವನ್ನ ಪಡೆದುಕೊಂಡು ಸಾವಿರಾರು ವರ್ಷಗಳ ಇತಿಹಾಸದಲ್ಲಿಒಬ್ಬ ಸಂತರು, ಮಹಾತ್ಮರು, ಸಿದ್ದಿಪುರುಷರು ಈ ಭೂಮಿಯಲ್ಲಿಏನೇಲ್ಲ ಮಾಡಬಹುದು ಎಂದು ಜಗತ್ತೀಗೆ ತೋರಿಸಿ ಕೊಟ್ಟಿದ್ದಾರೆ. ಶ್ರೀಗಳ ಅಗಲಿಕೆಯಿಂದ ಈ ನಾಡಿಗೆಅಪಾರ ನಷ್ಟವಾಗಿದೆ ಶ್ರೀಗಳಂತ ಮಹಾತ್ಮರು ಮತ್ತೆ ಈ ನಾಡಿನಲ್ಲಿಜನ್ಮ ನೀಡಲಿ ಎಂದು ನಾವು ಎಲ್ಲರೂ ಪ್ರಾರ್ಥೀಸೋಣ ಎಂದು ತಿಳಿಸಿದರು.

        ಲೋಕಕಲ್ಯಾಣಕ್ಕಾಗಿ ಹಾಗೂ ವಿಧ್ಯೆ, ವಸತಿ, ಅನ್ನಸಂತರ್ಪಣೆಗಳಿಂದ ತ್ರಿವಿಧಿ ದಾಸೋಹದ ಮೂರ್ತಿ ಎಂದು ಹೆಸರುವಾಸಿ ಯಾಗಿರುವ ಶ್ರೀಗಳು ಮತ್ತೆಅವತಾರ ತಾಳಬೇಕು. ಶ್ರೀಗಳು ಸಿದ್ದಗಂಗೆಯ ಮೂಲಕ ಲಕ್ಷಾಂತರ ಬಡ ಮಕ್ಕಳಿಗೆ ವಿದ್ಯೆ,ವಸತಿ, ಅನ್ನದಾನ ಮಾಡುವ ಮೂಲಕ ಎಷ್ಟೋ ಕಡುಬಡವರಿಗೆ ಮಹಾತ್ಮರಾಗಿದ್ದಾರೆ.ಅವರು ನೀಡಿದ ಮಾರ್ಗದರ್ಶನದಂತೆ ಪ್ರತಿಯೊಬ್ಬ ನಾಗರಿಕನೂ ಅಳವಡಿಸಿಕೊಂಡು ಶ್ರೀಗಳಿಗೆ ಗೌರವ ಸೂಚಿಸಬೇಕುಎಂದು ತಿಳಿಸಿದರು.

        ಈ ಸಂದರ್ಭದಲ್ಲಿ ತಾಲೂಕು ವೀರಶೈವ ಸಂಘದಆಧ್ಯಕ್ಷ ಸಿದ್ದಮಲ್ಲಪ್ಪ, ಮಾಜಿಅಧ್ಯಕ್ಷ ಪರ್ವತಯ್ಯ, ಮುಖಂಡರಾದ ಉಮಾಶಂಕರಾಧ್ಯ, ಈಶಪ್ರಸಾದ್, ವಿನಯ್‍ಕುಮಾರ್, ಜಗದೀಶ್, ನಾಗರಾಜು, ಬಸವರಾಜು, ಮಲ್ಲಣ, ಮಧುಸೂದನ್, ಶರತ್‍ಕುಮಾರ್, ರುದ್ರಮುನಿ,ಸಿದ್ದರಾಜು ಸೇರಿದಂತೆಇತರರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ