ಹೂವಿನಹಡಗಲಿ :

ದಿವಂಗತ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಹುಟ್ಟು ಹಬ್ಬದ ಪ್ರಯುಕ್ತ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಾಲನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಗಡಿಗಿ ಕೃಷ್ಣ, ಇಂದಿರಾ ಗಾಂಧಿಯವರು ದೇಶ ಸೇವೆಗಾಗಿಯೇ ತಮ್ಮ ಪ್ರಾಣವನ್ನು ತ್ಯಾಗಮಾಡಿದಂತಹ ಮಹಾನ್ ನಾಯಕಿ, ಕಾಂಗ್ರೆಸ್ ಪಕ್ಷ ಬಡವರ ಪರವಾದ ಪಕ್ಷವಾಗಿದ್ದು, ಇಂದಿರಾಗಾಂಧಿಯವರ ಆಶಯದಂತೆ ಈಗಲೂ ಕೂಡಾ ಬಡವರ ಪರವಾದ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು, ಇಂದಿರಾಗಾಂಧಿಯವರ ಜನ್ಮ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಾಗೂ ಹಾಲನ್ನು ವಿತರಿಸಲಾಯಿತು ಎಂದರು.
ಸಂದರ್ಭದಲ್ಲಿ ಶಾರುಕ್, ಗಿರೀಶ.ಹೆಚ್, ಇ.ಲೋಹಿತ್, ಜಿ.ಆನಂದ, ಮೋಹನ್‍ಕುಮಾರ್, ದೀಪು, ಪುನೀತ್, ಹೆಚ್.ಸ್ವಾಮಿ, ಶಿವು, ರಾಜು ಸೇರಿದಂತೆ ಅನೇಕ ಯುವಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
