ಕೆಮಿಕಲ್ ಬಳಸಿ ಚೆಕ್ ನ ಹೆಸರು ಬದಲಾಯಿಸುತ್ತಿದ್ದ ಗ್ಯಾಂಗ್ ಬಂಧನ…!!!

ಬೆಂಗಳೂರು

     ತಂತ್ರಜ್ಞಾನ ಬೆಳೆದಂತೆ ಅಪರಾಧ ಕೃತ್ಯಗಳನ್ನು ಎಸಗುವ ದುಷ್ಕರ್ಮಿಗಳ ವರಸೆ ಬದಲಾಗುತ್ತಿದ್ದು ಹೈಟೆಕ್ ಮಾದರಿಯ ಸಂಚು ರೂಪಿಸಿ ಸಾರ್ವಜನಿಕರನ್ನು ವಂಚನೆ ನಡೆಸುವ ಕೃತ್ಯಗಳ ಸಾಲಿಗೆ ಚೆಕ್ ಮೇಲಿನ ಹೆಸರು ಅಳಿಸಿ ಮೋಸ ಮಾಡುವ ಗ್ಯಾಂಗ್‍ಸೇರಿದೆ ಕೋರಿಯರ್ ಬಾಯ್‍ಗಳ ಗಮನ ಬೆರೆಡೆ ಸೆಳೆದು, ಬ್ಯಾಗ್‍ನಲ್ಲಿ ಅಸಲಿ ಚೆಕ್‍ಗಳನ್ನು ಕದ್ದು, ತಮ್ಮ ಬಳಿಯಿರುವ ಕೆಮಿಕಲ್ಸ್ ಬಳಸಿ ಅಂಕಿ, ಅಕ್ಷರ ಸಮೇತ ಬದಲಾಯಿಸಿಕೊಂಡು ತಮಗೆ ಇಷ್ಟಬಂದಂತೆ ಹಣ ಸಹಿ, ದಿನಾಂಕ ಸೇರಿದಂತೆ ಎಲ್ಲವನ್ನು ಅಸಲಿ ಚೆಕ್ ರೀತಿ ಬರೆದು ಬ್ಯಾಂಕ್‍ನಲ್ಲಿ ಲಕ್ಷಾಂತರ ರೂ.ಡ್ರಾ ಮಾಡಿಕೊಂಡು ವಂಚಿಸುತ್ತಿದ್ದ ಗ್ಯಾಂಗ್ ವಿಧಾನಸೌಧ ಪೊಲೀಸರಿಗೆ ಸಿಕ್ಕಿಬಿದ್ದಿದೆ.

         ನಿವೃತ್ತ ಸರ್ಕಾರಿ ಅಧಿಕಾರಿ ಜಿ.ಎಸ್. ಶ್ರೀಪಾದ್, ಮಗ ಆನಂದ್ ತೀರ್ಥ, ಹರೀಶ್ ರೌಡಿ ಶೀಟರ್‍ಗಳಾದ ಪ್ರಶಾಂತ್, ಪ್ರತಾಪ್, ವೆಂಕಟೇಶ್ ಬಂಧಿತ ಗ್ಯಾಂಗ್‍ನ ಆರೋಪಿಗಳಾಗಿದ್ದು ಗ್ಯಾಂಗ್‍ನ ಪ್ರಮುಖ ರೂವಾರಿ ರೌಡಿಶೀಟರ್ ನವೀನ್ ಹಾಗೂ ರಾಜೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದಾರೆ.

       ಲಕ್ಷಾಂತರ ರೂ. ಬ್ಯಾಂಕ್‍ನಲ್ಲಿ ಡ್ರಾ ಮಾಡಿಕೊಂಡು ವಂಚಿಸಿರುವ ಗ್ಯಾಂಗ್ ಆಸಕ್ತಿಕರ ವಿಚಾರವೆಂದರೆ ಬೆಂಗಳೂರಿನಲ್ಲಿ ವಂಚಿಸಿದರೆ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ಆತಂಕಪಟ್ಟ ಆರೋಪಿಗಳು ತಮಿಳುನಾಡಿನಲ್ಲಿ ವ್ಯವಸ್ಥಿತ ಸಂಚು ರೂಪಿಸಿದ್ದರು. ಅದರಂತೆ ಕೊರಿಯರ್ ಕೆಲಸ ಮಾಡುವ ಹುಡುಗನ ಗಮನ ಬೇರೆಡೆ ಸೆಳೆದು, ವಿವಿಧ ಕಂಪನಿಗಳಿಗೆ ಬಂದಿದ್ದ ಸಾವಿರಾರು ರೂಪಾಯಿ ಮೌಲ್ಯದ ಚೆಕ್‍ಗಳಿಗೆ ಕೆಮಿಕಲ್ಸ್ ಬಳಸಿ ಅಸಲಿ ಚೆಕ್‍ನಂತೆ ಮಾಡಿದ ಆರೋಪದಡಿ ನಾಲ್ವರು ರೌಡಿಗಳುಸೇರಿದಂತೆ ಒಟ್ಟು ಆರು ಮಂದಿಯ ಪೆÇಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

        ಕಳೆದ ಫೆ.1ರಂದು ಎಸ್‍ಬಿಐ ಬ್ಯಾಂಕ್ ಉದ್ಯೋಗಿ ಅಶೋಕ್ ರಾಮಮೂರ್ತಿ ಎಂಬುವರ ಎಕೆಸಿಟಿ ಚಿದಂಬರಂ ಕಾಟನ್ ಮಿಲ್ ಕಂಪನಿಗೆ ಸೇರಿದ ಚೆಕ್‍ನ್ನು, ಶ್ರೀಪಾದ್ ಎಂಬುವರ ಅಸಲಿ ಚೆಕ್‍ನಲ್ಲಿದ್ದ 57,750 ರೂ.ಮೊತ್ತವನ್ನು ಅಂಕಿ ಹಾಗೂ ಅಕ್ಷರಗಳಲ್ಲಿ ಸುಳ್ಳು ಸೃಷ್ಟಿಸಿಕೊಂಡು ಆರೋಪಿಯು ಬ್ಯಾಂಕ್ ಅಕೌಂಟ್‍ಗೆ ಹಣ ಜಮೆ ಮಾಡಿಕೊಂಡು ಮೋಸ ಮಾಡಿದ್ದರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಗಿತ್ತು.

        ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ನಂತರ ವಿಚಾರಣೆ ನಡೆಸಿದಾಗ ಕೃತ್ಯದ ಹಿಂದೆ ದೊಡ್ಡ ಜಾಲ ಇರುವುದು ಪೊಲೀಸರ ಗಮನಕ್ಕೆ ಬಂದಿತ್ತು.ಈ ಪ್ರಕರಣದ ಪ್ರಮುಖ ರೂವಾರಿ ತಲೆಮರೆಸಿಕೊಂಡಿರುವ ನವೀನ್, ಈ ಹಿಂದೆ ಬ್ಯಾಂಕ್‍ನಲ್ಲಿ ನಡೆಯುವ ಆರ್ಥಿಕ ಚಟುವಟಿಕೆಗಳ ಬಗ್ಗೆ ಅರಿತಿದ್ದು, ಇದನ್ನೇ ದುರ್ಬಳಕೆ ಮಾಡಿಕೊಂಡು ವಿವಿಧ ಕಂಪನಿಗಳಿಂದ ಬರುವ ಕೊರಿಯರ್ ಮೂಲಕ ಚೆಕ್‍ಗಳನ್ನು ಕಳ್ಳತನ ಮಾಡುವ ಪ್ರಮೇಯಕ್ಕೆ ಮುಂದಾಗಿರುವುದು ತನಿಖೆಯಲ್ಲಿ ಕಂಡುಬಂದಿದೆ

ಸಿಕ್ಕಿ ಬಿದ್ದಿದ್ದು ಹೇಗೆ

         ತಮಿಳುನಾಡಿನ ಅಣ್ಣಾಸೆಲೆ ಪೊಲೀಸ್ ಠಾಣಾ ವ್ಯಾಪ್ತಿಯ ಶಾಸ್ತ್ರಿ ಭವನದ ಬಳಿ ಕೊರಿಯರ್ ಬಾಯ್ ಗಮನ ಬೇರೆಡೆ ಸೆಳೆದು ಬ್ಯಾಗಿನಲ್ಲಿದ್ದ ವಿವಿಧ ಕಂಪನಿಗಳಿಗೆ ಸೇರಿದ್ದ ಕಂಪನಿ ಚೆಕ್‍ಗಳನ್ನು ಕದ್ದು ತಮಗೆ ಇಷ್ಟಬಂದಂತೆ ಬದಲಾಯಿಸಿ ಬ್ಯಾಂಕ್‍ವೊಂದರ ಬಳಿ ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದರು.

          ಅಷ್ಟೊತ್ತಿಗಾಗಲೇ ಹೇಗೋ ಬ್ಯಾಂಕ್ ಸಿಬ್ಬಂದಿ ನಕಲಿ ಚೆಕ್ ವಿಚಾರ ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇನ್ನೇನು ಪೊಲೀಸರು ತಮ್ಮನ್ನು ಬೆನ್ನಟ್ಟಲಿದ್ದಾರೆ ಎಂಬ ಮಾಹಿತಿ ಅರಿತ ಆರೋಪಿಗಳು ದಿಕ್ಕಾಪಾಲಾಗಿದ್ದರು. ಈ ಪೈಕಿ ಆರೋಪಿ ವೆಂಕಟೇಶ್ ತಪ್ಪಿಸಿಕೊಳ್ಳುವ ಭರದಲ್ಲಿ ಓಡುವಾಗ ಬೈಕ್ ಅಪಘಾತವಾಗಿ ಕೈ ಮುರಿದು ಅಣ್ಣಾಸೆಲೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ.

        ಇತ್ತ ಪ್ರಕರಣದ ಬೆನ್ನು ಹತ್ತಿದ್ದ ವಿಧಾನಸೌಧ ಪೊಲೀಸರು ಆರೋಪಿ ವೆಂಕಟೇಶ್ ಅನ್ನು ವಿಚಾರಣೆಗೆ ಒಳಪಡಿಸಿದಾಗ ಈತ ಜೈಲಿನಲ್ಲಿದ್ದಾಗ ಸ್ನೇಹಿತರಾಗಿದ್ದ, ಕುಂದಾಪುರ ಪೊಲೀಸ್ ಠಾಣೆಯ ರೌಡಿಶೀಟರ್ ಪ್ರಶಾಂತ್, ಕುಂಬಳಗೋಡು ರೌಡಿಶೀಟರ್ ಪ್ರತಾಪ್ ಈ ಕೆಲಸ ಮಾಡಿರುವುದು ಬೆಳಕಿಗೆ ಬಂದಿತ್ತು. ಇನ್ನೊಂದೆಡೆ ಕದ್ದಿದ್ದ ಚೆಕ್‍ಗೆ 5,77,500 ಬದಲಾಯಿಸಿ ನಗದು ಮಾಡಿಕೊಟ್ಟರೆ ಕಮೀಷನ್ ಕೊಡುವುದಾಗಿ ಹರೀಶ್‍ಗೆ ರೌಡಿ ಪ್ರತಾಪ್ ಭರವಸೆ ನೀಡಿದ್ದ. ಹರೀಶ್ ಈ ಹಿಂದೆ ಸಾಲ ಮಾಡಿಸಿಕೊಡುವ ಕೆಲಸ ಮಾಡುತ್ತಿದ್ದ

        ಆನಂದ್ ತೀರ್ಥನಿಗೆ ವಿಚಾರ ತಿಳಿಸಿ ಕಮೀಷನ್ ಕೊಡುವುದಾಗಿ ಹರೀಶ್ ಹೇಳಿದ್ದ. ಹಣಕ್ಕೆ ಆಸೆಬಿದ್ದ ಆನಂದ್, ತಂದೆ ಶ್ರೀಪಾದ್‍ನ ವಿಧಾನಸೌಧ ಶಾಖೆಯ ಎಸ್‍ಬಿಐ ಬ್ಯಾಂಕ್ ಅಕೌಂಟ್‍ಗೆ ನಕಲಿ ಚೆಕ್ ನೀಡಿ 5,57 ಲಕ್ಷ ಡ್ರಾ. ಮಾಡಿಕೊಂಡಿರುವುದಾಗಿ ಇನ್‍ಪೆಕ್ಟರ್ ಬಿ.ಶಂಕರಚಾರ್ ತಿಳಿಸಿದ್ದಾರೆ.

ಪೊಲೀಸರಿಗೆ ತಲೆನೋವು:

       ಚೆಕ್‍ಗೆ ಕೆಮಿಕಲ್ಸ್ ಬಳಸಿ ಅಸಲಿ ಅಂಕಿ ಅಂಶಗಳನ್ನು ತಿರುಚಲು ಕಾರಣವಾಗಿದ್ದ, ರಾಸಾಯನಿಕ ಯಾವುದು ಎಂಬುದನ್ನು ಪೊಲೀಸರು ಪತ್ತೆ ಹಚ್ಚಬೇಕಿದೆ. ಪ್ರಕರಣದ ಕಿಂಗ್ ಪಿನ್ ನವೀನ್ ಸೆರೆಯಾದರೆ ಇದಕ್ಕೆಲ್ಲ ಉತ್ತರ ಸಿಗಲಿದ್ದು, ಈ ದಿಸೆಯಲ್ಲಿ ಪೊಲೀಸರು ಕಾರ್ಯನ್ಮೋಖರಾಗಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link