30 ನಿಮಿಷ ಮೊದಲೇ ಎಫ್‌ಐಆರ್ ದಾಖಲಿಸಿದ್ದು ಹೇಗೆ : ಸಿದ್ದರಾಮಯ್ಯ

ಬೆಂಗಳೂರು :

     ರಾಜರಾಜೇಶ್ವರಿನಗರ ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ ಅಕ್ಟೋಬರ್ 14ರಂದು, ಬೆಳಿಗ್ಗೆ 11.45ಕ್ಕೆ ತಮ್ಮ ನಾಮಪತ್ರ ಸಲ್ಲಿಸಿದ್ದಾಗಿದೆ. ಆದ್ರೇ ಇಂತಹ ನಮ್ಮ ಅಭ್ಯರ್ಥಿಯ  ವಿರುದ್ಧ 11.15ಕ್ಕೆ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರಿಗೆ ಮೊದಲೇ ಹೇಗೆ ದೂರು ನೀಡೋಕೆ ಸಾಧ್ಯ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

     ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹೆಣ್ಣಮಗಳನ್ನು ಹೆದರಿಸಲು ದೂರು ನೀಡಿದ್ದಾರೆ. ಸರ್ಕಾರ ಪೊಲೀಸರನ್ನು ದುರ್ಬಳಕೆ ಮಾಡಿಕೊಂಡು ದೂರು ದಾಖಲಿಸಿದೆ. ಬೇಕು ಅಂತನಾ ನಮ್ಮ ಅಭ್ಯರ್ಥಿಯ ವಿರುದ್ಧ ದೂರು ನೀಡಲಾಗಿದೆ ಎಂಬುದಾಗಿ ಗುಡುಗಿದರು.

     ಅಕ್ಟೋಬರ್ 14ರಂದು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ನಾಮಪತ್ರ ಸಲ್ಲಿಸಿದ್ದು 11.45ಕ್ಕೆ. ಆದರೆ ಅವರ ವಿರುದ್ಧ ದೂರು ದಾಖಲಿಸಿರುವುದು 11.15ಕ್ಕೆ.  ಮೊದಲೇ ಹೇಗೆ ದೂರು ನೀಡೋಕೆ ಸಾಧ್ಯ ಎಂಬುದಾಗಿ ಪ್ರಶ್ನಿಸಿದರು. ಅಲ್ಲದೇ ಈ ಕುರಿತಂತೆ ತಾವು ಡಿಜಿಪಿ ಜೊತೆಗೆ ಮಾತನಾಡಿದ್ದೇನೆ ಎಂಬುದಾಗಿ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ